ಗೆಲುವಿನ ಹಾದಿಗೆ ಮರಳಿದ ಆರ್‌ಸಿಬಿ, ಧೋನಿ ಪಡೆಗೆ ಸೋಲು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 23 : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ತಂಡವನ್ನು 13 ರನ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಹಳಿಗೆ ಮತ್ತೆ ಮರಳಿದೆ.

ಶುಕ್ರವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಆರ್‌ಸಿಬಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಆರಂಭಿಕರಾಗಿ ಬಂದ ಕೆ.ಎಲ್.ರಾಹುಲ್ 7 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.

cricket

ನಂತರ ಒಂದಾದ ಎಬಿ ಡಿವಿಲಿಯರ್ಸ್‌ ಮತ್ತು ವಿರಾಟ್ ಕೊಹ್ಲಿ ಜೋಡಿ ಉತ್ತಮ ಆಟ ಪ್ರದರ್ಶಿಸಿದರು. ಆರ್‌ಸಿಬಿ 20 ಓವರ್‌ಗಳಲ್ಲಿ 185ರನ್‌ಗಳನ್ನು ಕಲೆ ಹಾಕಿತು. ಕೊಹ್ಲಿ 63 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ 80 ರನ್ ಗಳಿಸಿದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಜೋಡಿ ಧೋನಿ ತಂಡದ ಬೌಲರ್‌ಗಳನ್ನು ಕಾಡಿದರು. ಈ ಜೋಡಿಯನ್ನು ಕಟ್ಟಿಹಾಕಲು ಇಶಾಂತ್ ಶರ್ಮಾ, ಅಂಕಿತ್ ಶರ್ಮಾ ಮತ್ತು ಆರ್. ಅಶ್ವಿನ್ ಮಾಡಿದ ತಂತ್ರಗಳು ಫಲ ನೀಡಲಿಲ್ಲ. ಎಬಿ ಡಿವಿಲಿಯರ್ಸ್‌ 46 ಎಸೆತಗಳಲ್ಲಿ 83 ರನ್ ಸಿಡಿಸಿದರು. ಇದರಲ್ಲಿ 4 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದವು.

-
-
-
-

ಬ್ಯಾಟಿಂಗ್ ಆರಂಭಿಸಿದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ 20 ಓವರ್‌ಗಳಲ್ಲಿ 172 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ರಹಾನೆ 60 ಮತ್ತು ಮಹೇಂದ್ರ ಸಿಂಗ್ ಧೋನಿ 41 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. [ಪಿಟಿಐ ಚಿತ್ರಗಳು]

ಆರ್‌ಸಿಬಿಗೆ ಮುಂದಿನ ಪಂದ್ಯದಲ್ಲಿ ಗುಜರಾತ್ ಎದುರಾಳಿ (ಏ.24)
ಪುಣೆ ಮುಂದಿನ ಪಂದ್ಯದಲ್ಲಿ ಕೊಲ್ಕತ್ತಾವನ್ನು ಎದುರಿಸಲಿದೆ (ಏ.24)

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore beat Pune Supergiants by 13 runs at Maharashtra Cricket Association Stadium in Pune on Friday, April 22, 2016. RCB registered their second win of the Indian Premier League season 9.
Please Wait while comments are loading...