ತೊಡೆ ಭಾಗದ ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಹಿತ್ ಶರ್ಮ!

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್, 12 : ಟೀಂ ಇಂಡಿಯಾದ 'ಹಿಟ್ ಮ್ಯಾನ್ ರೋಹಿತ್ ಶರ್ಮ ಅವರು ಶುಕ್ರವಾರ ಲಂಡನ್ ನಲ್ಲಿ ಬಲ ಭಾಗದ ತೊಡೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ರೋಹಿತ್ ಅವರಿಗೆ ಸರ್ಜರಿ ಯಶಸ್ವಿಯಾಗಿದ್ದು ಶನಿವಾರ ಆಸ್ಟತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. [ರೋಹಿತ್ ಶರ್ಮಗೆ 'ತೀವ್ರ' ಗಾಯ, ಏಳೆಂಟು ತಿಂಗಳು ರೆಸ್ಟ್!]

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ತೊಡೆ ಹಾಗೂ ಕಾಲಿಗೆ ಗಾಯ ಮಾಡಿಕೊಂಡಿರುವ ರೋಹಿತ್ ಅವರು ಸ್ನಾಯು ಸೆಳೆತ ಅಧಿಕವಾಗಿತ್ತು.

Rohit Sharma undergoes successful surgery in London

ಇದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿತ್ತು ಎಂದು ಬಿಸಿಸಿಐ ತಿಳಿಸಿದೆ. ಸರ್ಜರಿ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಫೋಟೋವನ್ನು ರೋಹಿತ್ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

"ಎಲ್ಲ ಚೆನ್ನಾಗಿ ಆಗಿದೆ. ನೀವೂ ಮಾಡಿದ ವಿಶ್ ಗೆ ಧನ್ಯವಾದಗಳು. ಸ್ವಲ್ಪ ಕಾಯಿರಿ ಮತ್ತೆ ಬರುವೆ ಎಂದು ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಬೇಗ ಟೀಂ ಇಂಡಿಯಾಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ".

ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ರೋಹಿತ್ ಅವರನ್ನು ಹೊರಗಿಡಲಾಗುವುದು. ಅವರಿಗೆ ಆಗಿರುವ ಗಾಯದ ತೀವ್ರತೆ ನೋಡಿದರೆ ಏಳೆಂಟು ತಿಂಗಳು ವಿಶ್ರಾಂತಿ ಬೇಕಾಗುತ್ತದೆ.

ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಗತ್ಯ ಬಿದ್ದರೆ ಸರ್ಜರಿ ಕೂಡಾ ಮಾಡಿಸಬೇಕಾಗುತ್ತದೆ. ಈ ಬಗ್ಗೆ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳಲಾಗುತ್ತಿದೆ ಎಂದು ಇತ್ತೀಚೆಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian batsman Rohit Sharma yesterday (November 11) underwent a succusseful surgery on his right thigh, the Board of Control for Cricket in India (BCCI) said on Saturday (November 12).
Please Wait while comments are loading...