ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಕ್ಕೆ ರೋಹಿತ್ ಶರ್ಮ

By: ಕ್ರೀಡಾ ಡೆಸ್ಕ್
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 08 : ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಅವರು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೂರು ದಿನ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಮುಂಬೈ ಪರವಾಗಿ ರೋಹಿತ್ ಕಣಕ್ಕಿಳಿಯಲಿದ್ದಾರೆ.

ಸೆಪ್ಟೆಂಬರ್ 16 ರಿಂದ ಸೆ.18 ರವರೆಗೆ ಮುಂಬೈ ಹಾಗೂ ನ್ಯೂಜಿಲೆಂಡ್ ತಂಡಗಳು ಮೂರು ದಿನದ ಅಬ್ಯಾಸ ಪಂದ್ಯ ಆಡಲಿವೆ. ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಆಡಲು ನ್ಯೂಜಿಲೆಂಡ್ ತಂಡ ಭಾರತಕ್ಕೆ ಆಗಮಿಸಿದೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಈ ಮೊದಲು ನ್ಯೂಜಿಲೆಂಡ್ ಮೂರು ದಿನದ ಅಭ್ಯಾಸ ಪಂದ್ಯ ದೆಹಲಿಯಲ್ಲಿ ಸೆಪ್ಟೆಂಬರ್ 16 ರಿಂದ ಸೆ.18 ರವರೆಗೆ ನಡೆಯಲಿದೆ. ಈ ಅಭ್ಯಾಸ ಪಂದ್ಯಕ್ಕೆ ರೋಹಿತ್ ಶರ್ಮ ಒಳಗೊಂಡಂತೆ ಮುಂಬೈ ತಂಡವನ್ನು ಬುಧವಾರ(ಸೆ.7) ಆಯ್ಕೆ ಮಾಡಲಾಗಿದೆ ಎಂದು ಮುಂಬೈ ಕ್ರಿಕೆಟ್ ಅಸೋಶಿಯೇಷನ್ (ಎಮ್ ಸಿಎ) ಜಂಟಿ ಕಾರ್ಯದರ್ಶಿ ಡಾ. ಉಮೇಶ್ ಖನ್ವೀಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Rohit Sharma in Mumbai squad to face New Zealand in 3-day game

ಕಿವೀಸ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಅದಿತ್ಯ ತಾರೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು 17 ವರ್ಷದ ಅರ್ಮಾನ್ ಜಫಾರ್ ಮುಂಬೈ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

ಅಭ್ಯಾಸ ಪಂದ್ಯ ಮುಕ್ತಾಯದ ನಂತರ ಸೆ.22 ರಿಂದ ಅಕ್ಟೋಬರ್ 12 ರ ವರೆಗೆ ಮೂರು ಟೆಸ್ಟ್ ಸರಣಿ ಪಂದ್ಯಗಳು ನಡೆಯಲಿವೆ. ನಂತರ ಅಕ್ಟೋಬರ್ 19 ರಿಂದ ಅ.29 ರ ವರೆಗೆ 5 ಏಕದಿನ ಪಂದ್ಯಗಳನ್ನು ಭಾರತ ವಿರುದ್ಧ ಆಡಲಿದೆ.

ಅಭ್ಯಾಸ ಪಂದ್ಯಕ್ಕೆ ಮುಂಬೈ ತಂಡ : ಅದಿತ್ಯ ತಾರೆ(ನಾಯಕ), ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಡ್, ಕುತ್ಸುಭಾ ಪವರ್, ಜೇ ಬಿಸ್ತಾ, ಸುಫೀಯನ್ ಶೇಖ್, ಅರ್ಮಾನ್ ಜಫರ್, ಪರೀಕ್ಷಿತ್ ವಲ್ಸಂಕಾರ್, ವಿಶಾಲ್ ದಬೋಲ್ಕರ್, ವಿಜಯ್ ಗೋಯಿಲ್, ಬಲ್ವಿಂದರ್ ಸಿಂಗ್, ತುಷಾರ್ ದೇಶಪಾಂಡೆ, ರಾಯ್ಸ್ಟನ್ ಡಯಾಸ್, ಹರ್ಷಲ್ ಸೋನಿ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rohit Sharma was today (September 7) named in a 15-member Mumbai squad to face New Zealand in a three-day match in Delhi from September 16 to 18.
Please Wait while comments are loading...