ಐಪಿಎಲ್ ಆದ್ಮೇಲೆ ರೋಹಿತ್ ಶರ್ಮ ಏನ್ಮಾಡ್ತಿದ್ದಾರೆ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಮೇ 23 : ಸೆಲೆಬ್ರಿಟಿಗಳ ಬೇಡಿಕೆ ಹೆಚ್ಚಾದಂತೆ ಅವರ ವೈಯಕ್ತಿಕ ಬೇಡಿಕೆಗಳು ಸಹ ಹೆಚ್ಚಾಗುತ್ತವೆ ಎಂಬುವುದಕ್ಕೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮ ಉತ್ತಮ ಉದಾಹರಣೆ ಆಗಿದ್ದಾರೆ. ಹೌದು, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರು ಇತ್ತೀಚೆಗೆ ಸುಮಾರು 5 ಕೋಟಿ ರು ಬೆಲೆಬಾಳುವ ತೋಟದ ಮನೆಯೊಂದನ್ನು ಖರೀದಿಸಿದ್ದಾರೆ. ಐಪಿಎಲ್ ನಲ್ಲಿ ಕಳಪೆ ಪ್ರದರ್ಶನದ ನಂತರ ವಿಶ್ರಾಂತಿಗೆ ಈ ಮನೆ ಮೀಸಲಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಾಲೀಕತ್ವದ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖಂಡಾಲಾದಲ್ಲಿರುವ ತೋಟದ ಮನೆಯನ್ನು ರೋಹಿತ್ 5 ಕೋಟಿ ರುಗಳಿಗೆ ಖರೀದಿಸಿದ್ದಾರೆ.

Rohit Sharma buys villa in exclusive project in Khandala

ಈ ತೋಟದ ಮನೆ ಸುಮಾರು 7,500 ಚದರ ಅಡಿ ಜಾಗದಲ್ಲಿ ನಿರ್ಮಾಣವಾಗಿದ್ದು, 5 ಬೆಡ್ ರೂಮ್ ಗಳನ್ನು ಒಳಗೊಂಡಿದೆ. ಹಾಗೂ ಮನೆಯ ಸುತ್ತ ಸುಮಾರು 10,000 ಚದರ ಅಡಿ ಜಾಗವಿದ್ದು, ಈಜುಕೊಳ ಮನೆಯ ಸುತ್ತ ಹುಲ್ಲಿನ ಹಾಸು ನಿರ್ಮಿಲಾಗಿದೆಯಂತೆ.[ರೋಹಿತ್ ಶರ್ಮ ಟಿ20ಯಲ್ಲಿ ದಾಖಲೆ]

ರೋಹಿತ್ ಅವರ ಈ ತೋಟದ ಮನೆ ನೋಡುಗರಿಗೆ ಒಂದು ಚಿಕ್ಕ ಕಾಡಿನಂತೆ ಕಾಣುತ್ತದೆಯಂತೆ. ಮೂಲಗಳ ಪ್ರಕಾರ ಕಳೆದ ಅಗಸ್ಟ್ ತಿಂಗಳಲ್ಲಿ ರೋಹಿತ್ ಶರ್ಮ ಮುಂಬೈನ ಪ್ರಭಾದೇವಿಯಲ್ಲಿರುವ 29 ಅಂತಸ್ತಿನ ಕಟ್ಟಡವಿರುವ ಜಾಗವೊಂದನ್ನು 30 ಕೋಟಿ ರುಗಳಿಗೆ ಖರೀದಿಸಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇವರ ನೇತೃತ್ವದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡ ಕಳೆದ 2015 ರ ಐಪಿಎಲ್ ನಲ್ಲಿ ಚಾಂಪಿಯನ್ ಆಗಿತ್ತು. ಆದರೆ, ಈ ಬಾರಿ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mumbai Indians (MI) skipper Rohit Sharma has reportedly purchased a villa in a real estate project owned by a popular Bollywood actor in Khandala for Rs 5 crore.
Please Wait while comments are loading...