ಕ್ರಿಕೆಟರ್ ರೋಹಿತ್ ಶರ್ಮ, ಅಜಿಂಕ್ಯ ರಹಾನೆಗೆ ಅರ್ಜುನ ಪ್ರಶಸ್ತಿ!

Written By: Ramesh
Subscribe to Oneindia Kannada

ನವದೆಹಲಿ, ಸೆ.17 : ಭಾರತ ಕ್ರಿಕೆಟ್ ತಂಡದ ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಅವರು ಅರ್ಜುನ ಪ್ರಶಸ್ತಿಗೆ ಭಾಜನರಾದರು. ಕ್ರೀಡಾ ಸಚಿವ ವಿಜಯ್‌ ಗೋಯಲ್ ಅವರು ಸೆ.16 ಶುಕ್ರವಾರ ಜವಹರಲಾಲ್ ನೆಹರು ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. [ನನಗೆ ಸಿಕ್ಕಿರುವ ದೊಡ್ಡ ಗೌರವ ಇದಾಗಿದೆ: ರೋಹಿತ್ ಶರ್ಮ]

ರೋಹಿತ್ 2015ನೇ ಸಾಲಿನಲ್ಲಿ ಈ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ರೋಹಿತ್ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರಿಂದ ಅಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಾಗಿರಲಿಲ್ಲ.

rohit-ajinkya-arjuna

ಆದ್ದರಿಂದ 2015ನೇ ಸಾಲಿನ ಪ್ರಶಸ್ತಿಯನ್ನು ಸೆ.16 ರಂದು ಸಚಿವ ವಿಜಯ್‌ ಗೋಯಲ್ ಅವರಿಂದ ಸ್ವೀಕರಿಸಿದರು. ಇನ್ನು ಅಜಿಂಕ್ಯ ರಹಾನೆ ಅವರು ಈ ಬಾರಿ 2016ನೇ ಸಾಲಿನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. [ಕೊಹ್ಲಿಗೆ ಖೇಲ್ ರತ್ನ, ರಹಾನೆಗೆ ಅರ್ಜುನ ಪ್ರಶಸ್ತಿ: ಬಿಸಿಸಿಐ ಶಿಫಾರಸ್ಸು]

ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಇಬ್ಬರು ಒಂದೇ ಬಾರಿಗೆ ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್ ಅವರಿಂದ ಪ್ರಶಸ್ತಿ ಪಡೆದುಕೊಂಡರು. [ಅರ್ಜುನ ಪ್ರಶಸ್ತಿಗೆ ಕನ್ನಡಿಗ ರಘುನಾಥ್ ಹೆಸರು ಶಿಫಾರಸು]

ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಆಟಗಾರರನ್ನು ಗುರುತಿಸಿ ಕೇಂದ್ರ ಕ್ರೀಡಾ ಸಚಿವಲಯ ಈ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿ ಸರ್ಟೀಫಿಕೆಟ್, ಪದಕ, ಜತೆಗೆ 5 ಲಕ್ಷ ನಗದು ಒಳಗೊಂಡಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sports Minister Vijay Goel gave away Arjuna Awards to cricketers Rohit Sharma and Ajinkya Rahane at a function held at Jawaharlal Nehru Stadium here on Friday (September 16)
Please Wait while comments are loading...