ರೋಹನ್ ಬೋಪಣ್ಣರಿಂದ ಬೆಂಗಳೂರಲ್ಲಿ ಟೆನಿಸ್ ಅಕಾಡೆಮಿ

Posted By:
Subscribe to Oneindia Kannada

ಬೆಂಗಳೂರು. ಫೆ.26: ಬೆಂಗಳೂರಿನಲ್ಲಿ ಟೆನಿಸ್ ತರಬೇತಿ ಆಕಾಡೆಮಿಯನ್ನು ಆರಂಭಿಸುವುದಾಗಿ ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

35 ವರ್ಷದ ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣಅವರು ಸದ್ಯದಲ್ಲಿಯೇ 'ರೋಹನ್ ಬೋಪಣ್ಣ ಟೆನಿಸ್ ಆಕಾಡಮಿ' (ಆರ್.ಬಿ.ಟಿ.ಎ) ಯನ್ನು ಪ್ರಾರಂಭಿಲಿದ್ದಾರೆ ಎಂಬ ಸುದ್ದಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ತಿಳಿದು ಬಂದಿದೆ. ಬೋಪಣ್ಣಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.[ಐಜಿಪಿ ಬಿಎನ್ಎಸ್.ರೆಡ್ಡಿ ಕ್ರೀಡಾ ಸಾಧನೆಗೆ ಕೊನೆ ಇಲ್ಲ]

Rohan Bopanna launches his tennis academy RBTA in Bengaluru

ಮುಂದಿನ ತಿಂಗಳು ಮಾರ್ಚ್ ನಲ್ಲಿ ಟೆನಿಸ್ ತರಬೇತಿ ಪ್ರಾರಂಭವಾಗಲಿದೆ. 4 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಟೆನಿಸ್ ತರಬೇತಿ ನೀಡಲಾಗುತ್ತಿದೆ.

ಬೆಂಗಳೂರಿನ ಯಲಹಂಕ ಬಳಿ 3 ಎಕರೆ ಜಮೀನಲ್ಲಿ ಸುಸರ್ಜಿತವಾದ ಉತ್ತಮ ಗುಣಮಟ್ಟದ ಟೆನಿಸ್ ಮೈದಾನ, ಟ್ರ್ಯಾಕ್, ಫಿಟ್ ನೇಸ್ ಗಾಗಿ ಜಿಮ್ ನಿರ್ಮಾಣ ಮಾಡಲಾಗಿದೆ. ಈ ತರಬೇತಿಗೆ ಅಂತರಾಷ್ಟ್ರೀಯ ಟೆನಿಸ್ ಅನುಭವಿ ಆಟಗಾರರ ತಂಡದಿಂದ ಗುಣಮಟ್ಟದ ತರಬೇತಿ ನೀಡುವ ಜತೆಗೆ ಆಟದ ತಂತ್ರಗಳನ್ನು ನೀಡಲಾಗುತ್ತದೆ.

ಪ್ರತಿದಿನ ಸ್ವತಃ ಬೋಪಣ್ಣ ಅವರು ತರಬೇತಿಯಲ್ಲಿ ಪಾಲ್ಗೊಂಡು ಆಟದ ಬಗ್ಗೆ ಸಂವಾದಗಳನ್ನು ನಡೆಸುತ್ತಾರೆ. ಎರಡು ತಿಂಗಳಿಗೊಮ್ಮೆ ಮಾತ್ರ ಅವರ ಪೋಷಕರನ್ನು ಭೇಟಿ ಮಾಡವ ಅವಕಾಶವನ್ನು ಒದಗಿಸಲಾಗುವುದು. 1,000 ರೂ ಇದರ ನೊಂದಣಿ ಫೀ ಇರುತ್ತದೆ ಎಂದು ರೋಹನ್ ಬೋಪಣ್ಣ ಟೆನಿಸ್ ಆಕಾಡೆಮಿ ಸಂಸ್ಥೆ (ಆರ್.ಬಿ.ಟಿ.ಎ) ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ : www.rohanbopannatennis.com


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rohan Bopanna launches his tennis academy RBTA in BengaluruIndia's top-ranked doubles player Rohan Bopanna today (February 26) announced the launch of his tennis academy in Bengaluru.
Please Wait while comments are loading...