ಕ್ರಿಕೆಟರ್ಸ್ ಮದುವೆ ಪರ್ವ, ರಾಬಿನ್ ಉತ್ತಪ್ಪ ಜೋಡಿ ನೋಡಿ

Posted By:
Subscribe to Oneindia Kannada

ಬೆಂಗಳೂರು, ಮಾ.03: ಭಾರತೀಯ ಕ್ರಿಕೆಟರ್ಸ್ ಗಳ ವಿವಾಹ ಪರ್ವ ಮುಂದುವರೆದಿದೆ. ವರೋನ್ ಅರೋನ್ ಮದುವೆ ನಂತರ ಈಗ ಕರ್ನಾಟಕದ ರಾಬಿನ್ ಉತ್ತಪ್ಪ ತಮ್ಮ ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರನ್ನು ವರಿಸಿದ್ದಾರೆ.

ಟೀಂ ಇಂಡಿಯಾ ಹಾಗೂ ಕರ್ನಾಟಕ ತಂಡದ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರು ಟೆನಿಸ್ ಆಟಗಾರ್ತಿ, ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರನ್ನು ಮಾರ್ಚ್ 3ರಂದು ಸಂಜೆ ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ನೆರವೇರಿತು.[ಕೊಡವ ಶೈಲಿಯಲ್ಲಿ ರಾಬಿನ್ ಉತ್ತಪ್ಪ- ಶೀತಲ್ ಮದುವೆ]

ಆರತಕ್ಷತೆ ಸಮಾರಂಭದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಬಾಲಿವುಡ್ ನಟಿ ಜೂಹಿ ಚಾವ್ಲಾ ಹಾಜರಿದ್ದರು. ಮಾರ್ಚ್ 13ರಂದು ಕೊಡವ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ. ವಿವಾಹ ಆರತಕ್ಷತೆ ಚಿತ್ರಗಳನ್ನು ನಟಿ ಜೂಹಿ ಚಾವ್ಲಾ ಅವರು ಟ್ವೀಟ್ ಮಾಡಿದರು. [ಮದ್ವೆ ಡೇಟ್ ಫಿಕ್ಸ್ ಮಾಡಿಕೊಡಿ ಎಂದ ಯುವರಾಜ್]

ಭಾರತ ಕ್ರಿಕೆಟ್ ತಂಡದ ಮಧ್ಯಮ ವೇಗಿ, ಸೌರಾಷ್ಟ್ರ ಪರ ಆಡುವ ಧವಳ್ ಕುಲಕರ್ಣಿ ಅವರು ಕೂಡಾ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ. ಫ್ಯಾಷನ್ ವಿನ್ಯಾಸಕಿ ಶ್ರದ್ಧಾ ಖರ್ಪುಡೆ ಅವರನ್ನು ಮಹಾರಾಷ್ಟ್ರದ ಸಾಂಪ್ರದಾಯಿಕ ಮರಾಠಿ ಶೈಲಿಯಲ್ಲಿ ಗುರುವಾರ ಕೈ ಹಿಡಿದ್ದಾರೆ.

ಉತ್ತಪ್ಪ- ಶೀತಲ್ ನಿಶ್ಚಿತಾರ್ಥ ಮಾರಿಷಸ್‌ನಲ್ಲಿ ಕಳೆದ ವರ್ಷಾಂತ್ಯದಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. 2008ರಿಂದಲೂ ಅವರಿಬ್ಬರು ಜತೆಯಾಗಿ ಸುತ್ತಾಡುತ್ತಿದ್ದರು.

ಕ್ರಿಕೆಟರ್ದ್ ಮದುವೆ ಹಬ್ಬ ಮುಂದುವರೆದಿದೆ

ಕ್ರಿಕೆಟರ್ದ್ ಮದುವೆ ಹಬ್ಬ ಮುಂದುವರೆದಿದೆ

ವರುಣ್ ಅರೋನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ (ನಿಶ್ಚಿತಾರ್ಥ ಘೋಷಣೆ), ಸುರೇಶ್ ರೈನಾ, ಮೋಹಿತ್ ಶರ್ಮ (ನಿಶ್ಚಿತಾರ್ಥ ಘೋಷಣೆ), ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಗ ರಾಬಿನ್ ಉತ್ತಪ್ಪ ಹಾಗೂ ಧವಳ್ ಕುಲಕರ್ಣಿ ಸರದಿ.

ರಾಬಿನ್ -ಶೀತಲ್ ಪ್ರೇಮ ವಿವಾಹ

ರಾಬಿನ್ -ಶೀತಲ್ ಪ್ರೇಮ ವಿವಾಹ

ಉತ್ತಪ್ಪ- ಶೀತಲ್ ನಿಶ್ಚಿತಾರ್ಥ ಮಾರಿಷಸ್‌ನಲ್ಲಿ ಕಳೆದ ವರ್ಷಾಂತ್ಯದಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. 2008ರಿಂದಲೂ ಅವರಿಬ್ಬರು ಜತೆಯಾಗಿ ಸುತ್ತಾಡುತ್ತಿದ್ದರು.

ಶ್ರದ್ಧಾ - ಧವಳ್ ಅವರದ್ದು ಪ್ರೇಮ ವಿವಾಹ

ಫ್ಯಾಷನ್ ಸಂಯೋಜಕಿ ಶ್ರದ್ಧಾ ಹಾಗೂ ಧವಳ್ ಅವರು ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಸ್ನೇಹ, ಪ್ರೇಮ ಬಂಧನದಲ್ಲಿದ್ದರು. ಈಗ ಇಬ್ಬರೂ ಮದುವೆಯಾಗಲು ತೀರ್ಮಾನಿಸಿ, ಮರಾಠಿ ಶೈಲಿಯಲ್ಲಿ ಮದುವೆಯಾಗಿದ್ದಾರೆ. ಟ್ವೀಟ್ ನಲ್ಲಿ ರೋಹಿತ್ ಶರ್ಮ ಶುಭ ಹಾರೈಕೆ ನೋಡಿ

ಕೊಡವ ಸಂಪ್ರದಾಯದ ಪ್ರಕಾರ ವಿವಾಹ

ಕೊಡವ ಸಂಪ್ರದಾಯದ ಪ್ರಕಾರ ವಿವಾಹ

ಕ್ರೈಸ್ತ ಸಂಪ್ರದಾಯದಂತೆ ಆರತಕ್ಷತೆ ಸಮಾರಂಭದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಬಾಲಿವುಡ್ ನಟಿ ಜೂಹಿ ಚಾವ್ಲಾ ಹಾಜರಿದ್ದರು. ಮಾರ್ಚ್ 13ರಂದು ಕೊಡವ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ. ವರುಣ್ ಅರೋನ್ ಮದುವೆ ಕೂಡಾ ಇದೇ ರೀತಿ ನೋಂದಣಿ ನಂತರ ಕ್ರೈಸ್ತ ಸಂಪ್ರದಾಯದಂತೆ ನಡೆಯಿತು.

ರಾಬಿನ್ ವಿವಾಹ ಆರತಕ್ಷತೆ ಚಿತ್ರಗಳು

ವಿವಾಹ ಆರತಕ್ಷತೆ ಚಿತ್ರಗಳನ್ನು ನಟಿ ಜೂಹಿ ಚಾವ್ಲಾ ಅವರು ಟ್ವೀಟ್ ಮಾಡಿದರು. ‘ರಾಬಿನ್ ಉತ್ತಪ್ಪ ಮತ್ತು ಶೀತಲ್. ಈಗ ಪತಿ ಮತ್ತು ಪತ್ನಿ. ನಿಮಗೆ ಶುಭಾಶಯಗಳು' ಎಂದು ಟ್ವೀಟ್ ನಲ್ಲಿ ಹಾರೈಸಿದ್ದಾರೆ.

ರಾಬಿನ್ ಜೊತೆ ಇರ್ಫಾನ್ ಪಠಾಣ್ ಸೆಲ್ಫಿ

ರಾಬಿನ್ ಜೊತೆ ಇರ್ಫಾನ್ ಪಠಾಣ್ ಸೆಲ್ಫಿ ತೆಗೆಸಿಕೊಂಡು ವಿಶ್ ಮಾಡಿದ್ದು ಹೀಗೆ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Varun Aaron, its another cricketer Robin Uthappa and Dhawal Kulkarni who lost the bachelor tag. Robin Uthappa tied the knot with tennis player Sheethal Goutham while Kulkarni got married to Shradha Kharpude, who is a fashion co-ordinator.
Please Wait while comments are loading...