ರಾಬಿನ್ ಉತ್ತಪ್ಪ ಸೌರಷ್ಟ್ರ ಪರ ಆಡುವುದಕ್ಕೆ ಓಕೆ ಎಂದ ಬಿಸಿಸಿಐ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11 : ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವನ್ನು ತೊರೆದಿರುವ ಕನ್ನಡಿಗ ರಾಬಿನ್‌ ಉತ್ತಪ್ಪ ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಸೌರಾಷ್ಟ್ರ ತಂಡಕ್ಕೆ ಸೇರ್ಪಡೆಗೊಂಡ ರಾಜ್ಯದ ರಾಬಿನ್ ಉತ್ತಪ್ಪ

31 ವರ್ಷದ ಉತ್ತಪ್ಪ ಅವರು ಸೌರಾಷ್ಟ್ರ ಪರ ಆಡುವುದಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಒಪ್ಪಿಗೆ ದೊರೆತಿದೆ.

Robin Uthappa has completed all necessary formalities to BCCI for play in Saurashtra

ಉತ್ತಪ್ಪ ಕೇರಳ ತಂಡವನ್ನು ಸೇರ್ಪಡೆಗೊಳ್ಳುತ್ತಾರೆಂಬ ಸುದ್ದಿಗಳೂ ಹರಿದಾಡಿದ್ದವು. ಆದರೀಗ, ಅವರು ಸೌರಾಷ್ಟ್ರ ತಂಡದಲ್ಲಿ ಆಡುವುದು ಪಕ್ಕಾ ಆಗಿದೆ.

ಕರ್ನಾಟಕ ತಂಡದಲ್ಲಿ ಸುಮಾರು 15 ವರ್ಷಗಳ ಕಾಲ ಆಡಿದ್ದ ರಾಬಿನ್, ಕೆಲವು ತಿಂಗಳುಗಳ ಹಿಂದೆ ರಾಜ್ಯ ತಂಡವನ್ನು ತೊರೆದಿದ್ದರು.

ಈ ವರೆಗೆ 101 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಉತ್ತಪ್ಪ 6865 ರನ್ ಗಳನ್ನು ಸಂಪಾದಿಸಿದ್ದಾರೆ. ಇದರಲ್ಲಿ 18 ಶತಕ ಹಾಗೂ 33 ಅರ್ಧಶತಕಗಳು ಸೇರಿಕೊಂಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Robin Uthappa, who ended his long association with Karnataka cricket this June, has chosen to play for Saurashtra for the upcoming domestic season. Robin Uthappa has completed all necessary formalities to BCCI, Saurashtra Cricket Association and Karnataka State Cricket Association,said a statement from SCA.
Please Wait while comments are loading...