ಕೋಚ್ ಆಗಲು ರಾಹುಲ್ ದ್ರಾವಿಡ್ ಸೂಕ್ತ: ರಿಕಿ ಪಾಂಟಿಂಗ್

Posted By:
Subscribe to Oneindia Kannada

ಮುಂಬೈ, ಮೇ 18: ಟೀಂ ಇಂಡಿಯಾ ಯುವ ತಂಡಕ್ಕೆ ಸಮರ್ಥವಾಗಿ ತರಬೇತಿ ನೀಡಿರುವ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಕೋಚ್ ಆಗಲು ಸೂಕ್ತ ವ್ಯಕ್ತಿ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ರಾಹುಲ್ ದ್ರಾವಿಡ್ ಅವರಿಗಿದೆ. ಭಾರತೀಯ ಕ್ರಿಕೆಟಿಗರ ನಾಡಿಮಿಡಿತ ಅರಿತುಕೊಂಡಿದ್ದಾರೆ. ಬಿಸಿಸಿಐ ಈ ಬಗ್ಗೆ ಶೀಘ್ರವೇ ಯೋಚಿಸುವುದು ಒಳ್ಳೆಯದು, ವಿದೇಶಿ ಕೋಚ್ ಏಕೆ ಬೇಕು ಎಂಬುದು ನನಗೆ ಅರ್ಥವಾಗಿಲ್ಲ ಎಂದು ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಹೇಳಿದ್ದಾರೆ.

Ricky Ponting backs Rahul Dravid for Team India coach job

ಅನೇಕ ಕ್ರಿಕೆಟ್ ಪಂಡಿತರ ಸಲಹೆ ಕೂಡಾ ಇದೇ ಆಗಿದೆ. ಈ ಕುರಿತು ಬಿಸಿಸಿಐ ಚಿಂತಿಸಲಿ. ಟೆಸ್ಟ್ , ಏಕದಿನ ಹಾಗೂ ಟಿ 20 ಮೂರು ಮಾದರಿಗಳಲ್ಲೂ ದ್ರಾವಿಡ್ ಪರಿಣಿತಿ ಹೊಂದಿರುವುದು ತಂಡದ ನೆರವಿಗೆ ಬರಲಿದೆ. ಪ್ರಸಕ್ತ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ತಂಡವನ್ನು ಕೂಡ ಯಶಸ್ಸಿನೆಡೆಗೆ ಕೊಂಡೊಯ್ಯಲು ದ್ರಾವಿಡ್ ಶ್ರಮಿಸಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಹೇಳಿದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಉದ್ದೇಶಿತ ಹಗಲು/ರಾತ್ರಿ ಟೆಸ್ಟ್ ಪಂದ್ಯದ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಒಳ್ಳೆಯ ಬೆಳವಣಿಗೆಯಾಗಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಪಂದ್ಯಕ್ಕಿಂತ ಇದು ಉತ್ತಮ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯಲಿದೆ ಎಂದರು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Australia skipper Ricky Ponting has backed Rahul Dravid as one of best candidates to coach the Indian cricket team.
Please Wait while comments are loading...