ಪಾಕ್ ಕ್ರಿಕೆಟ್ ಆಟಗಾರ್ತಿಯರಿಗೆ ಇವರಂದ್ರೆ ಪಂಚಪ್ರಾಣ

Subscribe to Oneindia Kannada

ಚೆನ್ನೈ, ಮಾರ್ಚ್, 14: ಭಾರತದ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಅದರಲ್ಲೂ ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ.

ಅಭಿಮಾನಿಗಳಿಗೆ ಏನು ಬಂತು? ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೂ ವಿರಾಟ್ ಅಂದ್ರೆ ಅಚ್ಚು ಮೆಚ್ಚು. ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡ ಅತಿ ಹೆಚ್ಚಾಗಿ ಪ್ರೀತಿಸುವುದು ವಿರಾಟ್ ಕೊಹ್ಲಿಯನ್ನಂತೆ.[ವಿರಾಟ್ ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ರಹಸ್ಯ ಬಹಿರಂಗ]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

virat kohli

ಈ ಸಂಗತಿಯನ್ನು ಸ್ವತಃ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸಾನಾ ಮಿರ್ ಬಹಿರಂಗ ಪಡಿಸಿದ್ದಾರೆ. ಚೆನ್ನೈ ನಲ್ಲಿ ಮಾತನಾಡಿದ 30 ವರ್ಷದ ಸಾನಾ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತೆರೆದಿಟ್ಟರು. [ವಿರಾಟ್-ಅನುಷ್ಕಾರನ್ನು ಮತ್ತೆ ಒಂದು ಮಾಡಿದ್ದು ಯಾರು?]

ನನಗೆ ಮಹೇಂದ್ರ ಸಿಂಗ್ ಧೋನಿ ಅಂದರೆ ಅಚ್ಚುಮೆಚ್ಚು. ಆದರೆ ನಮ್ಮ ತಂಡದವರಿಗೆ ವಿರಾಟ್ ಮೇಲೆ ಪ್ರೀತಿ ಜಾಸ್ತಿ ಎಂದು ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ನಲ್ಲಿ ಹಲವಾರು ಬದಲಾವಣೆಯಾಗಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿದೆ. ಪರಿಸ್ಥಿತಿ ಮೊದಲಿನಂತಿಲ್ಲ ಎಂದು ಹೇಳಿದರು.

ಪಾಕಿಸ್ತಾನದ ಮಹಿಳಾ ಆಟಗಾರ್ತಿಯರಿಗೆ ವಿರಾಟ್ ಅಚ್ಚು ಮೆಚ್ಚು ಎಂಬ ಸುದ್ದಿ ಕೇಳಿ ಅನುಷ್ಕಾ ಶರ್ಮಾ ಏನು ಹೇಳಿದರು ಎಂಬುದು ವರದಿಯಾಗಿಲ್ಲ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan national women's cricket team captain Sana Mir has revealed a secret about Indian vice-captain Virat Kohli. Mir did let out a little secret that Virat Kohli is the most popular cricketer in their women's team although her personal favourite is Mahendra Singh Dhoni. There are couple of names. If I just talk about my players, I think Virat Kohli is the favourite cricketer. Personally, Dhoni is my favourite player because he had led India. He has handled himself well on and off the field. He has transformed a team of juniors into an effective unit," the captain in Sana came out.
Please Wait while comments are loading...