ವಿರಾಟ್ ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ರಹಸ್ಯ ಬಹಿರಂಗ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 12: ಹೆಣ್ಣು ನಂಬಿ ಹೊನ್ನು (ಹಣ) ಹೂಡಿಕೆ ಮಾಡಿ ಮಣ್ಣು ತಿಂದ ಕ್ರಿಕೆಟರ್ ಎಂಬ ಸ್ಥಿತಿ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಬಂದಿದೆ. ಗೆಳತಿ ಅನುಷ್ಕಾ ಶರ್ಮ ಜೊತೆಗೆ ಕೊಹ್ಲಿ ವಿರಸ, ಬ್ರೇಕ್ ಅಪ್ ಹಿಂದಿನ ಗುಟ್ಟನ್ನು ಹಿಂದಿ ಪತ್ರಿಕೆಯೊಂದು ಬಹಿರಂಗಪಡಿಸಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ನಡುವಿನ ಸಂಬಂಧ, ಅವರ ಸುತ್ತಾಟದ ಬಗ್ಗೆ ಭಾರಿ ಚರ್ಚೆ ನಡೆಯುತ್ತಲೇ ಇದೆ. ಏಷ್ಯಾಕಪ್ ನಲ್ಲಿ ಕೊಹ್ಲಿ ಅವರು ಪಂದ್ಯ ಪುರುಷ ಪ್ರಶಸ್ತಿ ಪಡೆದು ಭರ್ಜರಿ ಪ್ರದರ್ಶನ ನೀಡಿದ್ದರು. ಜೊತೆಗೆ ಈ ಸಂಭ್ರಮ ಹೆಚ್ಚಾಗಲು ದೂರವಾಗಿದ್ದ ಪ್ರೇಯಸಿ ಫೋನ್ ಕರೆ ಕೂಡಾ ಕಾರನ ಎನ್ನಲಾಗಿತ್ತು. [ವಿರಾಟ್-ಅನುಷ್ಕಾರನ್ನು ಮತ್ತೆ ಒಂದು ಮಾಡಿದ್ದು ಯಾರು?]

ಪಾಕ್ ಪ೦ದ್ಯದ ಬಳಿಕ ಅನುಷ್ಕಾ, ಕೊಹ್ಲಿಗೆ ಕರೆ ಮಾಡಿ ಅಭಿನ೦ದಿಸಿದ್ದಾರೆ. ಈ ಮೂಲಕ ಮತ್ತೆ ಜೋಡಿಗಳು ಹಾಡು ಹೇಳುವುದು ಪಕ್ಕಾ ಎಂದೇ ಭಾವಿಸಲಾಗಿತ್ತು. ಆದರೆ, ಅಂಥದ್ದೇನು ಇನ್ನೂ ಆಗಿಲ್ಲ. ಸದ್ಯಕ್ಕೆ ಬ್ರೇಕ್ ಅಪ್ ಕಾರಣ ಸಿಕ್ಕಿದೆ.

ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ಗೆ ಕಾರಣವೇನು?

ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ಗೆ ಕಾರಣವೇನು?

ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿದ್ದು, 40 ಕೋಟಿ ರು ಮೊತ್ತ ಎನ್ನಲಾಗಿದೆ. ಅನುಷ್ಕಾ ಹಾಗೂ ರಣವೀರ್ ಕಪೂರ್ ಅಭಿನಯದ ಹಿಂದಿ ಚಿತ್ರ ಬಾಂಬೆ ವೆಲ್ವೆಟ್ ಸುಮಾರು 120 ಕೋಟಿ ರು ವೆಚ್ಚದಲ್ಲಿ ತಯಾರಾಗಿತ್ತು. ಇದರಲ್ಲಿ 40 ಕೋಟಿ ರು ಮೊತ್ತವನ್ನು ವಿರಾಟ್ ಕೊಹ್ಲಿ ಅವರು ಹಾಕಿದ್ದರು. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿ ಕೇವಲ 24 ಕೋಟಿ ರು ಕಲೆಕ್ಷನ್ ಮಾಡಿತ್ತು.

ಹಣ ಕಳೆದುಕೊಂಡಿದ್ದಕ್ಕೆ ಬೇಸರಗೊಂಡ ಕೊಹ್ಲಿ

ಹಣ ಕಳೆದುಕೊಂಡಿದ್ದಕ್ಕೆ ಬೇಸರಗೊಂಡ ಕೊಹ್ಲಿ

ಇದರಿಂದ ಬೇಸತ್ತ ಕೊಹ್ಲಿ ಹಣ ಕಳೆದುಕೊಂಡಿದ್ದಕ್ಕೆ ಪರಿಹಾರ ಕೇಳಿದರು. ಅನುಷ್ಕಾ ಅವರು ಇದಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ಆನಂತರ ವಿರಾಟ್ ಕೊಹ್ಲಿ ಫೋನ್ ಕರೆ ಕಿರಿಕಿರಿಯಾಗಿ ತಪ್ಪಿಸಿಕೊಳ್ಳಲು ಅನುಷ್ಕಾ ಯತ್ನಿಸಿದ್ದಾರೆ. ಹೆಚ್ಚೆಚ್ಚು ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ವಿರಾಟ್ ಕೊಹ್ಲಿ ನಂತರ ಆತ್ಮಗೌರವಕ್ಕೆ ಧಕ್ಕೆ ಬಂದಿದ್ದರಿಂದ ಪರೋಕ್ಷವಾಗಿ ಅನುಷ್ಕಾರನ್ನು ಕಿಚಾಯಿಸಲು ಆರಂಭಿಸಿದ್ದಾರೆ.

ಮಹಿಳಾ ದಿನಾಚರಣೆ ದಿನ ಕ್ಷಮೆ ಕೋರಿದ್ದರು

ಮಹಿಳಾ ದಿನಾಚರಣೆ ದಿನ ಕ್ಷಮೆ ಕೋರಿದ್ದರು

ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಮಹಿಳಾ ದಿನಾಚರಣೆಗೆ ಶುಭ ಕೋರಿದ ನಂತರ ಕೊಹ್ಲಿ ಅವರು ಎಲ್ಲಾ ಮಹಿಳೆಯಲ್ಲಿ ಕ್ಷಮೆಯಾಚಿಸಿದ್ದು ವಿಶೇಷವಾಗಿತ್ತು. ಎರಡು ಕೈ ಎತ್ತಿ ನಮಸ್ಕರಿಸುತ್ತಾ 'ಎಲ್ಲರಿಗೂ ಸ್ಸಾರಿ ಎನ್ನುವ ಚಿತ್ರ ಭಾರಿ ಚರ್ಚೆಗೆ, ಪ್ರಶಂಸೆಗೆ ಈಡಾಗಿತ್ತು. [ವಿವರ ಇಲ್ಲಿ ಓದಿ]

ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ

ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ

"ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ" ಹಾಡನ್ನು ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದರು. ಕೊಹ್ಲಿ ಹಾಡು ಹಾಡಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೇಜ್ ನಲ್ಲಿ ಕೊಹ್ಲಿ ಹಾಕಿದ್ದರು. ಇದು ಅನುಷ್ಕಾ ಉದ್ದೇಶಿಸಿ ಹಾಡಿದ ಹಾಡು ಎಂಬುದು ಎಲ್ಲ ಅಭಿಮಾನಿಗಳಿಗೆ ಗೊತ್ತಾಗಿತ್ತು.

ಮಾಧ್ಯಮಗಳ ವಿರುದ್ಧ ಗರಂ ಆಗಿದ್ದ ಕೊಹ್ಲಿ

ಮಾಧ್ಯಮಗಳ ವಿರುದ್ಧ ಗರಂ ಆಗಿದ್ದ ಕೊಹ್ಲಿ

ವ್ಯಾಲಂಟೈನ್ಸ್ ಡೇ ಮುಗಿದು ನಾಲ್ಕು ದಿನ ನಂತರ ಸ್ವಿಸ್ ವಾಚ್ ಕಂಪನಿ Tissot ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಅವರು ಪತ್ರಕರ್ತ ಪ್ರಶ್ನೆಗಳನ್ನು ಎದುರಿಸಿದ್ದರು. ಯಾವ ಸಂಬಂಧದ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಿ? ಇದು ನನಗೆ ಕೇಳಬಹುದಾದ ಪ್ರಶ್ನೆಯಲ್ಲ, ಪರಿಣತರನ್ನು ಕೇಳಿ' ಎಂದಿದ್ದರು. [ವಿವರ ಇಲ್ಲಿದೆ]

ಅಂಗದ್ ಬೇಡಿ ಪಾರ್ಟಿ ನಂತರದ ಕಥೆ

ಅಂಗದ್ ಬೇಡಿ ಪಾರ್ಟಿ ನಂತರದ ಕಥೆ

ಅಂಗದ್ ಬೇಡಿ ಹುಟ್ಟುಹಬ್ಬದ ಪಾರ್ಟಿಯಲ್ಲಿ 27 ವರ್ಷದ ಕೊಹ್ಲಿ, ‘ನಾನೀಗ ಸಿಂಗಲ್, ಡ್ಯಾನ್ಸ್ ಮಾಡೋಣವೇ?' ಎಂದು ಇತರ ಅತಿಥಿಗಳೊಂದಿಗೆ ನರ್ತಿಸುತ್ತಿದ್ದರು. ಇದಾರ ಬಳಿಕ ಜಿಮ್ ನಲ್ಲಿ ಕಸರತ್ತು ಮಾಡುವ ಚಿತ್ರಗಳು, ಹಳೆ ನಿರಾಶೆ ಮುಖ ಹೊತ್ತ ಚಿತ್ರವೊಂದು ಕಾಣಿಸಿತ್ತು. ಪ್ರೇಮಿಗಳ ದಿನದಂದು ಅಮ್ಮನ ಜೊತೆ ಚಿತ್ರ ತೆಗೆಸಿಕೊಂಡು ಈಕೆಯೇ ನನ್ನ ಬದುಕಿನ ಅತ್ಯಂತ ಸುಂದರ ಹೆಣ್ಣು ಎಂದು ಕೊಹ್ಲಿ ಹೇಳಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is confirmed now that Indian cricketer Virat Kohli and actress Anushka Sharma are no longer together, though none of them have yet spoken about their break up.
Please Wait while comments are loading...