ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಮೂವರು ಪೈಪೋಟಿ, ಯಾರು ಇವರು?

Posted By:
Subscribe to Oneindia Kannada

ನವದೆಹಲಿ, ಮೇ 09 : ಶಶಾಂಕ್ ಮನೋಹರ್ ಅವರ ನಿವೃತ್ತಿಯಿಂದ ತೆರವಾಗುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಘಟಾನುಘಟಿಗಳು ಪೈಪೋಟಿ ನಡೆಸಿದ್ದು ತೀವ್ರ ಕೂತುಹಲ ಕೆರಳಿಸಿದೆ. ವಿಶ್ವ ಕ್ರಿಕೆಟ್ ನಲ್ಲಿಯೇ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿರುವ ಭಾರತೀಯ ಕ್ರಿಕೆಟ್ ಬೋರ್ಡ್ ಅಧ್ಕಕ್ಷ ಸ್ಥಾನಕ್ಕೆ ಮೇ 14 ರಂದು ಚುನಾವಣೆ ನಡೆಯಲಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇದರಿಂದ ಅಧ್ಯಕ್ಷ ಸ್ಥಾನಕ್ಕಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಜಯ್ ಶಿರ್ಕೆ, ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಜಿ.ಗಂಗರಾಜು ಹಾಗೂ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಈ ಮೂವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಅಜಯ್ ಶಿರ್ಕೆ ಅವರು ಪ್ರಭಾವಿಗಳಾಗಿದ್ದು ಇವರ ಹೆಸರು ಮುಂಚೂಣಿಯಲ್ಲಿದೆ ಎಂದು ಕೇಳಿಬರುತ್ತಿದೆ.

 Three contenders in the running for the post of BCCI President

ಇತ್ತೀಚೆಗೆ ಬಿಸಿಸಿಐನ ಉಪಾಧ್ಯಕ್ಷರಾಗಿ (ದಕ್ಷಿಣ ವಲಯ) ಆಯ್ಕೆಗೊಂಡಿರುವ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೆಟ್ ಆಗಿರುವ ಜಿ.ಗಂಗಾಧರ್ ಸಹ ಪ್ರಭಾವಿಗಳಾಗಿದ್ದು, ಬಿಸಿಸಿಐ ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ ನಡೆಸಿದ್ದಾರೆ. ಇನ್ನು ಇಡೀ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) ಮುಖ್ಯಸ್ಥ ರಾಜೀವ್ ಶುಕ್ಲಾ ಅವರು ಬಿಸಿಸಿಐ ಗಾದಿಗೆ ಲಾಬಿ ನಡೆಸಿದ್ದಾರೆ.

ಈ ಮೂವರು ಹೆಸರುಗಳು ಬಿಸಿಸಿಐ ಗಾದಿಗೆ ಕೇಳಿಬರುತ್ತಿದ್ದು ಕೊನೆಗಳಿಗೆಯಲ್ಲಿ ಯಾರು ಅಧ್ಯಕ್ಷ ಹುದ್ದೆಯನ್ನು ಅಲಂಕರಿಸುತ್ತಾರೆ ಎಂಬುದನ್ನು ಮೇ 14 ರಂದು ಬಹಿರಂಗವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ever since Shashank Manohar decided to relinquish his post as the president of the Board of Control for Cricket in India (BCCI), According to the Mumbai Mirror, Ajay Shirke of Maharashtra, G Gangaraju of Andhra and the IPL chairman Rajeev Rajeev Shukla are the three men in contention for the top post
Please Wait while comments are loading...