ಫೈನಲ್ ಪ್ರವೇಶಿಸಿದ ಜೋಶ್ ನಲ್ಲಿ ಆರ್ ಸಿಬಿ ಹುಡ್ಗರ ಡಾನ್ಸ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 26: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಮಣಿಸಿ ಈ ಬಾರಿಯ ಐಪಿಎಲ್ ಸೀಸನ್ 9 ನಲ್ಲಿ ಆರ್ ಸಿಬಿ ಫೈನಲ್ ಪ್ರವೇಶಿಸಿರುವ ಮೊದಲ ತಂಡವಾಗಿದೆ. ಫೈನಲ್‍ ಗೆ ಲಗ್ಗೆ ಹಾಕಿದ ಜೋಶ್ ನಲ್ಲಿ ತಂಡದ ಸದಸ್ಯರು ಪಾರ್ಟಿ ಮಾಡುವ ಮೂಲಕ ಗೆಲುವನ್ನು ಆಚರಿಸಿದ್ದಾರೆ.

ಹೌದು ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಕೆರಿಬಿಯನ್ ಆಟಗಾರ ಕ್ರಿಸ್ ಗೇಲ್ ಹಾಗೂ ಮನ್ ದೀಪ್ ಸಿಂಗ್ ಅವರು ಪಂಜಾಬಿ ಸಾಂಗ್ ಗೆ ಬಾಂಗ್ರಾ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಮನ್ ದೀಪ್ ಸಿಂಗ್ ಸ್ಟೆಪ್ ಹೇಳಿಕೊಡುತ್ತಿದ್ದರೆ, ಕೊಹ್ಲಿ ಹಾಗೂ ಗೇಲ್ ಅದನ್ನು ಅನುಕರಿಸಿ ಸಕತ್ತಾಗಿ ಕುಣಿದು ಕುಪ್ಪಳಿಸಿದ್ದಾರೆ. [ಎಬಿಡಿ ಅಬ್ಬರ, ವಾಹ್ ಅಬ್ದುಲ್ಲಾ! ಆರ್ ಸಿಬಿ ಫೈನಲಿಗೆ!]

Royal Challengers Bangalore's Virat Kohli and Chris Gayle dance to Punjabi tunes

ಈ ಮೂವರು ಆಟಗಾರರು ಸ್ಟೆಪ್ ಹಾಕಿಕೊಂಡು ಕುಣಿಯುತ್ತಿದ್ದರೆ, ಇನ್ನುಳಿದ ಆಟಗಾರರು ಮೂಕ ಪ್ರೇಕ್ಷಕರಂತೆ ಕುಳಿತುಕೊಂಡು ಇವರ ನೃತ್ಯವನ್ನು ನೋಡುತ್ತಿದ್ದರು.[ವಿಲಿಯರ್ಸ್ ನನಗಿಂತ ಶ್ರೇಷ್ಠ ಬ್ಯಾಟ್ಸ್ ಮನ್: ವಿರಾಟ್ ಕೊಹ್ಲಿ!]

ಕೊಹ್ಲಿ ಮತ್ತು ಟೀಂ ಬಾಂಗ್ರಾ ಶೈಲಿಯಲ್ಲಿ ಡಾನ್ಸ್ ಮಾಡಿರುವ ವಿಡಿಯೋ ತುಣುಕನ್ನು ಆರ್ ಸಿಬಿ ತನ್ನ ಯೂಟ್ಯೂಬ್ ನಲ್ಲಿ ಶೇರ್ ಮಾಡಿದೆ. ಈಗ ಈ ವೀಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. [ಕಪಿಲ್ ಕಾಮಿಡಿ ಶೋನಲ್ಲಿ ಕ್ರಿಸ್ ಗೇಲ್ ಡ್ಯಾನ್ಸ್]

ಇಲ್ಲಿಯವರೆಗೆ ನಡೆದಿರುವ 8 ಆವೃತ್ತಿ ಐಪಿಎಲ್ ಸೀಸನ್ ನಲ್ಲಿ ಆರ್ ಸಿಬಿ ಟ್ರೋಫಿ ಗೆದ್ದುಕೊಂಡಿಲ್ಲ. ಆದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿದ್ದು ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. ಏನೇ ಆಗಲಿ ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ಪ್ರಶಸ್ತಿ ಗೆಲ್ಲುವ ಫೆವರಿಟ್ ತಂಡವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore Team members Virat Kohli, Mandeep Singh and Chris Gayle are spending the additional day they have between matches by practising a few dance moves.
Please Wait while comments are loading...