ಐಪಿಎಲ್ 9 : ಆರ್ ಸಿಬಿ ಬ್ಯಾಟಿಂಗ್ vs ಸನ್ ರೈಸರ್ಸ್ ಬೌಲಿಂಗ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ರಾಯಲ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಮತ್ತೊಮ್ಮೆ ಐಪಿಎಲ್ ಕಿರೀಟ ಧರಿಸುವ ಕನಸಿನೊಂದಿಗೆ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯವನ್ನು ಮಂಗಳವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ತಂಡದ ಬಗ್ಗೆ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಏನು ಹೇಳಿದ್ದಾರೆ ಮುಂದೆ ಓದಿ...

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಹೊಸ ಆವೃತ್ತಿಗೆ ಹೊಸ ಹುರುಪಿನೊಂದಿಗೆ ಆರ್ ಸಿಬಿ ಕಣಕ್ಕಿಳಿಯಲಿದೆ. ಮಿಚೆಲ್ ಸ್ಟಾರ್ಕ್ ಅವರು ಗಾಯಾಳುವಾಗಿ ತಂಡದಿಂದ ಹೊರಗುಳಿದಿರುವುದು ಭಾರಿ ನಷ್ಟವಾಗಿದೆ. ಆದರೆ, ಯುವ ಬೌಲರ್ ಗಳಿಗೆ ಹೆಚ್ಚಿನ ಅವಕಾಶ ಈ ಬಾರಿ ಸಿಗಲಿದೆ.[ಕೊಹ್ಲಿ ಹಾಗೂ ಜಾನ್ಸನ್ ವೈರತ್ವದ ರಹಸ್ಯ ಲೀಕ್!]

ಆಡಂ ಮಿಲ್ನೆ, ಕೇನ್ ರಿಚರ್ಡ್ಸನ್ ಅವರು ಸ್ಟಾರ್ಕ್ ಸ್ಥಾನವನ್ನು ತುಂಬಬೇಕಿದೆ. ಜೊತೆಗೆ ಹರ್ಷಲ್ ಪಟೇಲ್, ಶ್ರೀನಾಥ್ ಅರವಿಂದ್, ವರುಣ್ ಅರೋನ್ ತಂಡದಲ್ಲಿದ್ದಾರೆ. ಬಹುತೇಕ ಟೂರ್ನಿ ಮುಗಿಯುವ ತನಕ ಸ್ಟಾರ್ಕ್ ತಂಡ ಸೇರುವ ಲಕ್ಷಣಗಳಿಲ್ಲ.['ವಿರಾಟ್ ಐ ಲವ್ ಯು ಬೇಬಿ' ನಟಿ ಹಾಡು]

Royal Challengers Bangalore (RCB)

ಮತ್ತೊಂದು ಆಘಾತವೆಂದರೆ, ವೆಸ್ಟ್ ಇಂಡೀಸ್ ನ ಸ್ಟಾರ್ ಲೆಗ್ ಸ್ಪಿನ್ನರ್ ಸ್ಯಾಮುಯಲ್ ಬದ್ರಿ ಅವರು ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿ ನಂತರ ಗಾಯಾಳುವಾಗಿದ್ದಾರೆ.[ಬೆಂಗಳೂರಲ್ಲಿ ಐಪಿಎಲ್ ಪಂದ್ಯ: ಪಾರ್ಕಿಂಗ್ ವ್ಯವಸ್ಥೆ ಎಲ್ಲಿ?]

ಟ್ರಿನಿಡಾಡ್ ಗೆ ತೆರಳಿರುವ ಬದ್ರಿ ಅವರು ಬೆಂಗಳೂರು ತಂಡವನ್ನು ಆದಷ್ಟು ಬೇಗ ಸೇರುವ ನಿರೀಕ್ಷೆ ಇದೆ. ಬದ್ರಿ ಸ್ಥಾನವನ್ನು ಯಜುವೇಂದ್ರ ಚಾಹಲ್ ತುಂಬಲಿದ್ದಾರೆ.[ರಾಯಲ್ ಚಾಲೆಂಜರ್ಸ್ ಗೆ ವಿಜಯ್ ಮಲ್ಯ ಗುಡ್ ಬೈ]

ಬ್ಯಾಟಿಂಗ್ ನಮ್ಮ ಶಕ್ತಿ: ಶೇನ್ ವಾಟ್ಸನ್ ಹಾಗೂ ಸ್ಟುವರ್ಟ್ ಬಿನ್ನಿ ಸೇರ್ಪಡೆ ಜೊತೆಗೆ ಟ್ರಾವಿಸ್ ಹೆಡ್, ಸರ್ಫರಾಜ್ ಖಾನ್ ರಂಥ ಯುವ ಆಟಗಾರರು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಜೊತೆಗೆ ಬ್ಯಾಟಿಂಗ್ ಶಕ್ತಿ ಹೆಚ್ಚಿಸಿದ್ದಾರೆ.[ರಾಯಲ್ ಚಾಲೆಂಜರ್ಸ್ ಬೆಂಗಳೂರು #PlayBold ಜರ್ಸಿ]

2008ರಿಂದ ಕಣದಲ್ಲಿರುವ ಅರ್ ಸಿಬಿ ಇಲ್ಲಿ ತನಕ ಕಪ್ ಗೆದ್ದಿಲ್ಲ. 2009 ಹಾಗೂ 2011ರಲ್ಲಿ ಕಪ್ ಗೆಲ್ಲುವ ನಿರೀಕ್ಷೆ ಹೆಚ್ಚಿಸಿದರೂ ಫಲ ಸಿಗಲಿಲ್ಲ.

-
-
-
ಬೆಂಗಳೂರಲ್ಲಿ ಆರ್ ಸಿಬಿ vs ಎಸ್ಆರ್ ಎಚ್ ತಯಾರಿ

ಬೆಂಗಳೂರಲ್ಲಿ ಆರ್ ಸಿಬಿ vs ಎಸ್ಆರ್ ಎಚ್ ತಯಾರಿ

-
-
-

ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕರಾಗಿದ್ದಾರೆ. ಗಾಯಾಳುವಾಗಿರುವ ಯುವರಾಜ್ ಸಿಂಗ್ ಅನುಪಸ್ಥಿತಿಯಲ್ಲಿ ಶಿಖರ್ ಧವನ್, ವಾರ್ನರ್, ಆದಿತ್ಯಾ ತಾರೆ, ಇಯಾನ್ ಮಾರ್ಗನ್, ಕೇನ್ ವಿಲಿಯಮ್ಸನ್ ಅವರು ಬ್ಯಾಟಿಂಗ್ ನೋಡಿಕೊಳ್ಳಬೇಕಿದೆ. [ಇನ್ನೆರಡು ವಾರಗಳ ಕಾಲ ಸಿಕ್ಸರ್ 'ರಾಜ' ಆಡುವಂತಿಲ್ಲ!]

ಬೌಲಿಂಗ್ ನಲ್ಲಿ ಯುವ ವೇಗಿ ಬರೀಂದರ್ ಸ್ರಾನ್ ಜೊತೆಗೆ ಅಭಿಮನ್ಯು ಮಿಥುನ್, ಹೆನ್ರಿಕ್ಯೂಸ್, ಬೌಲ್ಟ್ ಜೊತೆಗೆ ಭುವನೇಶ್ವರ್ ಕುಮಾರ್ ಹಾಗೂ ಆಶೀಶ್ ನೆಹ್ರಾ ಅವರು ಬೌಲಿಂಗ್ ಶಕ್ತಿ ಹೆಚ್ಚಿಸಿದ್ದಾರೆ.[ಭೋಗ್ಲೆ ಹೊರಹಾಕಲು ಯಾರು ಕಾರಣ?]

ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಆರಂಭ, ಸೋನಿ ಮ್ಯಾಕ್ಸ್, ಹಾಟ್ ಸ್ಟಾರ್ ನಲ್ಲಿ ಲಭ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Desperate to break their title jinx, Virat Kohli-led Royal Challengers Bangalore would be hoping for a positive start to their campaign in the ninth season of the Indian Premier League against Sunrisers Hyderabad, in Bengaluru on Tuesday.
Please Wait while comments are loading...