ರವೀಂದ್ರ ಜಡೇಜಾ ಮದುವೆಗೆ ಯಾರ್ಯಾರು ಬರ್ತಿದ್ದಾರೆ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ರಾಜ್ ಕೋಟ್, ಏಪ್ರಿಲ್ 16 : ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ರವೀಂದ್ರ ಜಡೇಜ ಏಪ್ರಿಲ್ 17 ರಂದು ಜೀವನದ ಹೊಸ ಇನಿಂಗ್ಸ್ ಆರಂಭ ಮಾಡಲಿದ್ದಾರೆ. ಪ್ರಿಯತಮೆ ರಿವಾಬ ಸೋಲಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

28 ರ ಹರೆಯದ ಜಡ್ಡು ಜಾಮ್ ನಗರ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಖ್ಯಾತ ಉದ್ಯಮಿಯೊಬ್ಬರ ಪುತ್ರಿ ರಿವಾಬ ಸೋಲಂಕಿ ಅವರನ್ನು ಸಾಂಪ್ರದಾಯಿಕವಾಗಿ ಕೈ ಹಿಡಿಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆತ್ಮೀಯರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಲಿದ್ದಾರೆಂದು ಜಡೇಜ ಕುಟುಂಬ ಮೂಲಗಳು ತಿಳಿಸಿವೆ.[ರವೀಂದ್ರ ಜಡೇಜ ಮದುವೆಗೆ ಧೋನಿ, ರೈನಾಗೆ ಆಹ್ವಾನವಿಲ್ಲ!]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

jadega

ಏಪ್ರಿಲ್ 17ರಂದು ಸಂಜೆ ನಡೆಲಿರುವ ಅರತಕ್ಷತೆ ಸಮಾರಂಭದಲ್ಲಿ ಗುಜರಾತ್ ಲಯನ್ಸ್ ತಂಡದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮದುವೆಗೆ ಮುನ್ನವೇ ರವೀಂದ್ರ ಜಡೇಜ ತಮ್ಮ ಭಾವಿ ಮಾವನಿಂದ ಆಡಿ ಕಾರೊಂದನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾರೆ.

ಸದ್ಯ ಮುದುವೆಯಲ್ಲಿ ಬ್ಯುಸಿ ಆಗಿರುವ ಜಡೇಜ ಏಪ್ರಿಲ್ 21 ರಂದು ರಾಜ್ ಕೋಟ್ ನಲ್ಲಿ ನಡೆಯಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.[ರವೀಂದ್ರ ಜಡೇಜ ನಿಶ್ಚಿತಾರ್ಥದ ಚಿತ್ರಗಳು]

ಹೊಸ ಫ್ರಾಂಚೈಸಿ ಗುಜರಾತ್ ಲಯನ್ಸ್ ತಂಡ ಈಗಾಗಲೇ ಆಡಿದ ಎರಡು ಪಂದ್ಯಗಳಲ್ಲಿ ಎರಡನ್ನೂ ಜಯಗಳಿಸಿ ಆತ್ಮ ವಿಶ್ವಾಸದಲ್ಲಿದೆ. ಲಯನ್ಸ್ ತಂಡದ ಐಕಾನ್ ಪ್ಲೇಯರ್ ಜಡ್ಡು ಪುಣೆ ವಿರುದ್ಧ 4 ಓವರ್ ಗಳಲ್ಲಿ ಕೇವಲ 18 ರನ್ ಗಳನ್ನು ನೀಡಿ ಪ್ರಮುಖ 2 ವಿಕೆಟ್ ಕಬಳಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat Lions all-rounder Ravindra Jadeja will miss today's (April 16) Indian Premier League 2016 (IPL 9) match against Mumbai Indians as he is all set to tie the nuptial knot with fiancé Riva Solanki, here tomorrow (April 17).
Please Wait while comments are loading...