ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ಆಡದಂತೆ ಜಡೇಜಗೆ ನಿರ್ಬಂಧ

Posted By:
Subscribe to Oneindia Kannada

ಕೊಲಂಬೋ, ಆಗಸ್ಟ್ 06 : ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜ ಆಡದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿರ್ಬಂಧ ಹೇರಿದೆ.

ಅತ್ಯಂತ ವೇಗವಾಗಿ 150 ವಿಕೆಟ್ ಕಿತ್ತ ಎಡಗೈ ಬೌಲರ್ ಜಡೇಜ

ಶ್ರೀಲಂಕಾ ವಿರುದ್ಧ ಕೊಲಂಬೋನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿದ 2.2.8 ಆರೋಪದಡಿ ಜಡೇಜಗೆ ಪಾಲೆಕೆಲೆನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಿಂದ ಐಸಿಸಿ ನಿಷೇಧಿಸಿದೆ. ಹಾಗೂ ಪಂದ್ಯದ ಶೇ. 50ರಷ್ಟು ದಂಡ ಹಾಕಲಾಗಿದೆ.

Ravindra Jadeja suspended for Pallekele Test against Sri Lanka

ಲಂಕಾ ವಿರುದ್ಧದ 2ನೇ ಟೆಸ್ಟ್ ನ 3ನೇ ದಿನದಾಟದ 58ನೇ ಓವರ್ ಜಡೇಜ ಎಸೆದ ಎಸೆದ ಚೆಂಡನ್ನು ಲಂಕಾದ ಆಟಗಾರ ದಿಮುತ್ ಕರುಣರತ್ನೆ ರಕ್ಷಣಾತ್ಮಕವಾಗಿ ಆಡಿ ಚೆಂಡನ್ನು ಜಡೇಜ ಕೈ ಸೇರುವಂತೆ ಹೊಡೆದಿದ್ದರು.

ಕೂಡಲೇ ಜಡೇಜ ಚೆಂಡನ್ನು ಅವರತ್ತ ಥ್ರೋ ಮಾಡಿದರು. ಇದು ಬ್ಯಾಟ್ಸ್ ಮನ್ ಗೆ ತಗುಲಿಲ್ಲವಾದರೂ ಇದೊಂದು ಅಪಾಯಕಾರಿ ಥ್ರೋ ಎಂದು ಐಸಿಸಿ ಪರಿಗಣಿಸಿದೆ.

ಕೊಲಂಬೋನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 70 ರನ್ ಗಳಿಸಿದರ ಜತೆಗೆ ಪ್ರಮುಖ 7 ವಿಕೆಟ್ ಗಳನ್ನು ಕಬಳಿಸಿ ಭಾರತದ ಗೆಲುವಿನ ರೂವಾರಿ ಜಡೇಜ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜರಾಗಿದ್ದರು.

ICC test ranking Jadeja and Ashwin in top two positions

3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ಎರಡರಲ್ಲಿ ಗೆದ್ದುಕೊಂಡು ಸರಣಿ ವಶ ಪಡಿಸಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಜಡೇಜ ಅವರ ಅನುಪಸ್ಥಿತಿ ಭಾರತ ಕಾಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India’s Ravindra Jadeja has been suspended for the upcoming Pallekele Test against Sri Lanka after his accumulated demerit points reached six within a 24-month period following his latest breach of the ICC Code of Conduct for which he received a 50 per cent fine and three demerit points.
Please Wait while comments are loading...