ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ

ರಾಜ್ ಕೋಟ್, ಡಿಸೆಂಬರ್ 16: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಒಂದೇ ಓವರ್ ನಲ್ಲಿ ಅಂದರೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಹೊಸ ದಾಖಲೆ ನಿರ್ಮಿಸಿದರು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂತರ-ಜಿಲ್ಲಾ ಟಿ20 ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ ಈ ಸಾಧನೆ ಮಾಡಿದರು. ಜಾಮ್ ನಗರದ ಪರ ಬ್ಯಾಟಿಂಗ್ ಮಾಡಿದ ಜಡೇಜಾ, ಅಮ್ರೆಲಿ ತಂಡದ ಬೌಲರ್ ನಿಲಮ್ ವಮ್ಚಾ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿ ಪ್ರೇಕ್ಷಕರನ್ನು ರಂಜಿಸಿದರು. ಈ ಮೂಲಕ ಜಡೇಜಾ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿದವರ ಪಟ್ಟಿಗೆ ಸೇರಿಕೊಂಡರು.

Ravindra Jadeja Smashes Six Sixes in an Over in Inter-District Match

ಈ ಹಿಂದೆ ಭಾರತದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ವೇಗಿ ಸ್ಟವರ್ಟ್ ಬ್ರಾಡ್ ಓವರ್ ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳನ್ನು ಬಾರಿಸಿದ ಭಾರತದ ಏಕೈಕ ಆಟಗಾರ ಎನಿಸಿಕೊಂಡಿದ್ದರು. ಇದೀಗ ಜಡೇಜಾ ಈ ದಾಖಲೆ ಮಾಡಿರು.

ಈ ಪಂದ್ಯದಲ್ಲಿ ಜಡೇಜಾ ಬೌಂಡರಿ ಸಿಕ್ಸರ್ ಮಳೆ ಸುರಿಸಿದ್ದನ್ನು ಕಂಡು ಪ್ರೇಕ್ಷಕರು ಕ್ರೀಡಾಗಣದಲ್ಲಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಅಂತಿಮವಾಗಿ ಜಡ್ಡು 69 ಎಸೆತಗಳಲ್ಲಿ 15 ಬೌಂಡರಿ ಹಾಗೂ 10 ಸಿಕ್ಸರ್ ಒಳಗೊಂಡಂತೆ 154 ರನ್ ಬಾರಿಸಿ ಮಿಂಚಿದರು.

ಜಡೇಜಾ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಜಾಮ್ ನಗರ ತಂಡ 20 ಓವರ್ ಗಳಲ್ಲಿ 239 ರನ್ ಕಲೆಹಾಕಿತು. ಈ ಬೃಹತ್ ಮೊತ್ತದ ಗೆಲುವಿನ ಗುರಿಬೆನ್ನಟ್ಟಿದ ಅಮ್ರೆಲಿ ಅಂತಿಮವಾಗಿ 121 ರನ್ ಗಳಿಂದ ಸೋಲೊಪ್ಪಿಕೊಂಡಿತು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X