ಅಂಪೈರ್ ತೀರ್ಪು ಪ್ರಶ್ನಿಸಿದ ರವೀಂದ್ರ ಜಡೇಜಗೆ ವಾರ್ನಿಂಗ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ರಾಜ್ ಕೋಟ್, ಮೇ 02 : ಗುಜರಾತ್ ಲಯನ್ಸ್ ತಂಡದ ಆಲ್ ರೌಂಡರ್ ರವೀಂದ್ರ ಜಡೇಜ ಅವರು ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿದಕ್ಕಾಗಿ ಮ್ಯಾಚ್ ರೆಫ್ರಿ ಅವರ ಕೆಂಗಣ್ಣಿಗೆ ಗುರಿಯಾಗಿ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೇ 1 ರಂದು ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ತಂಡದ ಅಕ್ಷರ್ ಪಟೇಲ್ ಅವರ ಬೌಲಿಂಗ್ ನಲ್ಲಿ ಜಡೇಜ ಔಟ್ ಆಗಿದ್ದರು. [ವಿಡಿಯೋ ನೋಡಿ : ಫೀಲ್ಡಲ್ಲಿ ರಾಯುಡು-ಹರ್ಭಜನ್ ಬೈದಾಟ]

Ravindra Jadeja reprimanded for showing dissent at umpire's decision

ಅಂಪೈರ್ ನೀಡಿದ್ದ ತೀರ್ಪಿಗೆ ಜಡ್ಡು ಅಸಮಾಧಾನ ವ್ಯಕ್ತಪಡಿಸುವ ಮೂಲಕ ಐಪಿಎಲ್ ನಿಯಮ level 1 offence (Article 2.1.5 of the IPL Code of Conduct for Players and Team Officials) ವನ್ನು ಉಲ್ಲಂಘಿಸಿದರು. ಜಡೇಜ ಅವರಿಗೆ ಮುಂದೆ ಇದೇ ರೀತಿ ಮಾಡದಂತೆ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿದ್ದಾರೆ.[ಬ್ರಾವೊ ಡ್ಯಾನ್ಸ್ ಗೆ ಫಿದಾ ಆಗಿದ್ದು ಒಬ್ರ, ಇಬ್ರ!]

ಅಕ್ಷರ್ ಪಟೇಲ್ ಅವರು ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) 2016 ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು.

ಇನ್ನು ಈ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 23 ರನ್ ಗಳ ಅಮೋಘ ಜಯಗಳಿಸಿತು. ನಾಯಕನಾಗಿ ಮುರಳಿ ವಿಜಯ್ ಅವರು ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದರು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat Lions all-rounder Ravindra Jadeja has been reprimanded by the match referee for showing dissent at the umpire's decision during his side Indian Premier League match against Kings XI Punjab.
Please Wait while comments are loading...