ಸಿಂಹಗಳ ಜತೆ ಸೆಲ್ಫಿ, ಕ್ರಿಕೆಟರ್ ಜಡೇಜ ವಿರುದ್ಧ ತನಿಖೆ!

Posted By:
Subscribe to Oneindia Kannada

ಅಹಮದಾಬಾದ್, ಜೂನ್ 17: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜ ಹಾಗೂ ಅವರ ಪತ್ನಿ ರೀವಾ ಸೋಲಂಕಿ ಅವರು ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ವಿಹರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಸಿಂಹಗಳ ಜತೆ ಸೆಲ್ಫಿ ತೆಗೆದುಕೊಂಡ ದಂಪತಿ ಈಗ ಕಾನೂನಿನ ಕಣ್ಣಿಗೆ ಬಿದ್ದಿದ್ದಾರೆ.

ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ಜಡೇಜ ಹಾಗೂ ರೀವಾ ಅವರು ಗುಜರಾತ್ ನ ಜುನಾಗಢ್ ಪ್ರದೇಶದ ಸಸನ್ ಗಿರ್ ನಲ್ಲಿ ಮಂಗಳವಾರ ಹಾಗೂ ಬುಧವಾರ 'ಲಯನ್ ಸಫಾರಿ' ಗೆ ತೆರಳಿದ್ದರು. ಇದು ಗಿರ್ ರಾಷ್ಟ್ರೀಯ ಉದ್ಯಾನ ಹಾಗೂ ಸಿಂಹ ಧಾಮದ ಪ್ರವಾಸಿ ವಲಯವಾಗಿದೆ. [ನೆಚ್ಚಿನ ಸಾಥಿಯ ಮುದ್ದಾದ ಮಗು ಜತೆ ರವೀಂದ್ರ ಜಡೇಜ]

'Sir' Ravindra Jadeja Poses in Front of Lions, Inquiry Ordered

ಆದರೆ, 28 ವರ್ಷ ವಯಸ್ಸಿನ ಕ್ರಿಕೆಟರ್ ಜಡೇಜ ಅವರ ಪತ್ನಿ ಹಾಗೂ ಗೆಳೆಯರು ಸಫಾರಿ ವೇಳೆಯಲ್ಲಿ ಜಿಪ್ಸಿ ವಾಹನದಿಂದ ಕೆಳಗಿಳಿದು ಸಿಂಹಗಳ ಜತೆ ಸೆಲ್ಫಿ, ಗ್ರೂಪ್ ಫೋಟೊ ತೆಗೆಸಿಕೊಂಡಿದ್ದಾರೆ. ಇವರಿಂದ ಕೇವಲ 12 ರಿಂದ 13 ಅಡಿ ದೂರದಲ್ಲಿತ್ತು.

Family photo 😜😜 having good time in sasan(gir) 👌🏻👌🏻😜😜✌🏻️✌🏻#rajputboy #wearelions

A photo posted by Ravindrasinh Jadeja (@jadduboy) on Jun 14, 2016 at 11:33pm PDT

ಸಿಂಹಗಳ ಮುಂದೆ ತೆಗೆದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತುತಿದ್ದಂತೆಯೇ ಈ ಬಗ್ಗೆ ತನಿಖೆ ನಡೆಸುವಂತೆ ಗುಜರಾತ್ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. [ಮದ್ವೆ ನಂತರ ಜಡೇಜ ಮದ್ವೆಯಲ್ಲೂ ವಿವಾದ!]

ಇನ್ನೊಂದು ಫೋಟೊದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜತೆ ನಿಂತು ಜಡೇಜ ಪೋಸ್ ಕೊಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಗಿರ್ ಸಿಂಹ ಧಾಮದಿಂದ ವರದಿ ತರೆಸಿಕೊಳ್ಳಲಾಗುತ್ತದೆ.

-
-
-
-

ಅರಣ್ಯ ಕಾಯ್ದೆ ಉಲ್ಲಂಘನೆ, ನಿಯಮ ಮೀರಿದ ನಡವಳಿಕೆ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜುನಾಗಡ್ ವನ್ಯಜೀವಿ ವಲಯದ ಮುಖ್ಯ ಸಂರಕ್ಷಕ ಅನಿರುಧ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian allrounder Ravindra Jadeja, who is currently spending some leisure time with his wife Reeva Solanki, was accused of violating wildlife rules. According to The Indian Express, Jadeja had visited Sasan Gir in Junagadh district of Gujarat on Tuesday and Wednesday and went on a lion safari.
Please Wait while comments are loading...