ಐಸಿಸಿ ಶ್ರೇಯಾಂಕದಲ್ಲಿ ಅಶ್ವಿನ್ ನಂ.1, ಜಡೇಜ ನಂ.2

Written By: Ramesh
Subscribe to Oneindia Kannada

ನವದೆಹಲಿ, ಡಿಸೆಂಬರ್. 21 : ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಕೊನೆ 5ನೇ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಎಡಗೈ ಲೆಗ್ ಸ್ಪಿನ್ನರ್ ರವೀಂದ್ರ ಜಡೇಜ ಅವರು ಅಂತರಾಷ್ಟ್ರೀಯ ಟೆಸ್ಟ್ ಬೌಲರ್ ಗಳ ಶ್ರೇಯಾಂಕ(ಐಸಿಸಿ) ಪಟ್ಟಿಯಲ್ಲಿ ಮೇಲಕ್ಕೆ ಜಿಗಿದಿದ್ದಾರೆ.

ಚೆನ್ನೈನಲ್ಲಿ ನಡೆದ ಅಂತಿಮ ಟೆಸ್ಟ್ ನಲ್ಲಿ ಬರೋಬ್ಬರಿ 10 ವಿಕೆಟ್ ಗಳನ್ನು ಕಬಳಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಜಡ್ಡು ಐಸಿಸಿ ಬೌಲಿಂಗ್ ಪಟ್ಟಿಯಲ್ಲಿ 66 ಅಂಕವನ್ನು ಹೆಚ್ಚಿಸಿಕೊಂಡು 2ನೇ ಸ್ಥಾನಕ್ಕೇರಿದರು. ಇನ್ನು ಟೀಂ ಇಂಡಿಯಾದ ಮತ್ತೊಬ್ಬ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಜೋಶ್, ಅಂಡ್ರೋಸನ್, ರಂಗನಾ ಹೆರಾತ್, ಡೇಲ್ ಸ್ಟೇನ್ ಅವರನ್ನು ಹಿಂದಿಕ್ಕಿದ ಜಡೇಜ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬೌಲರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 2 ಸ್ಥಾನದಲ್ಲಿ ಟೀಂ ಇಂಡಿಯಾದ ಇಬ್ಬರು ಬೌಲರ್ ಗಳು ಇರುವುದು ಮತ್ತೊಂದು ವಿಶೇಷವಾಗಿದೆ. [ಇಂಗ್ಲೆಂಡ್ ವಿರುದ್ಧ 4-0ರಲ್ಲಿ ಸರಣಿ ಜಯಿಸಿದ ಭಾರತ]

ಲೆಫ್ಟ್ ಆರ್ಮ್ ಸ್ಪಿನ್ನರ್ 1974ರಲ್ಲಿ ಬಿಷನ್ ಸಿಂಗ್ ಬೇಡಿ ಹಾಗೂ ಭಗತ್ ಚಂದ್ರಶೇಖರ್ ಜೋಡಿ ಐಸಿಸಿ ಬೌಲರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಇದ್ದರು. ಈಗ ಅಶ್ವಿನ್ ಹಾಗೂ ಜಡೇಜ ಜೋಡಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಗಳ ಸರಣಿಯಲ್ಲಿ ಜಡೇಜ 26 ವಿಕೆಟ್ ಪಡೆದರೆ. ಇನ್ನು ಆರ್ ಅಶ್ವಿನ್ 28 ವಿಕೆಟ್ ಕಬಳಿಸಿದ್ದಾರೆ. ಒಟ್ಟು 5 ಪಂದ್ಯಗಳಲ್ಲಿ ಟೀಂ ಇಂಡಿಯಾ 4-೦ ಅಂತರದಿಂದ ಆಂಗ್ರರನ್ನು ಹೀನಾಯವಾಗಿ ಮಣಿಸಿದೆ. ಇನ್ನೊಂದು ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.

ಐಸಿಸಿ ಟಾಪ್ 5 ಬೌಲರ್ ಗಳ ಪಟ್ಟಿ

ನಂ.1 ರವಿಚಂದ್ರನ್ ಅಶ್ವಿನ್

ನಂ.1 ರವಿಚಂದ್ರನ್ ಅಶ್ವಿನ್

ಭಾರತ ತಂಡದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು 887 ಅಂಕಗಳೊಂದಿಗೆ ಐಸಿಸಿ ಶ್ರೇಯಾಂಕ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಆಲ್ ರೌಂಡರ್ ವಿಭಾಗದಲ್ಲಿ ಇವರೇ ನಂ.1 ಸ್ಥಾನದಲ್ಲಿ ಇದ್ದಾರೆ.

ನಂ.2 ರವೀಂದ್ರ ಜಡೇಜ

ನಂ.2 ರವೀಂದ್ರ ಜಡೇಜ

ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಜಡೇಜ ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದು 879 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ನಂ.3 ರಂಗನಾ ಹೆರಾತ್

ನಂ.3 ರಂಗನಾ ಹೆರಾತ್

ಶ್ರೀಲಂಕಾದ ಸ್ಪಿನ್ನರ್ ರಂಗನಾ ಹೆರಾತ್ ಐಸಿಸಿ ಶ್ರೇಯಾಂದ ಪಟ್ಟಿಲ್ಲಿ 867 ಅಂಕ ಪಡೆದು ಮೂರನೇ ಸ್ಥಾನಕ್ಕೆ ಜಾರಿದ್ದಾರೆ.

ನಂ. 4 ಡೇಲ್ ಸ್ಟೇನ್

ನಂ. 4 ಡೇಲ್ ಸ್ಟೇನ್

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಒಂದು ಸ್ಥಾನ ಕೆಳಗೆ ಇಳಿದಿದ್ದಾರೆ. 844 ಅಂಕದೊಂದಿಗೆ 4 ಸ್ಥಾನದಲ್ಲಿ ನಿಂತಿದ್ದಾರೆ.

ನಂ.5 ಜೇಮ್ಸ್ ಆಂಡರ್ಸನ್

ನಂ.5 ಜೇಮ್ಸ್ ಆಂಡರ್ಸನ್

ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ 810 ಅಂಕ ಪಡೆದು ಐಸಿಸಿ ಶ್ರೇಯಾಂಕ ಬೌಲರ್ ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ravindra Jadeja's match winning performance against England in the Chennai Test has propelled the left-arm spinner to the second position in the ICC Test rankings for bowlers.
Please Wait while comments are loading...