ಟೆಸ್ಟ್ ಕ್ರಿಕೆಟ್ ನಂ.1 ಆಲ್ ರೌಂಡರ್ ಪಟ್ಟಕ್ಕೇರಿದ ಜಡೇಜ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 08: ಐಸಿಸಿ ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜಡೇಜಾ, ಆಲ್‌ರೌಂಡರ್ ವಿಭಾಗದಲ್ಲಿಯೂ ನಂಬರ್‌ 1 ಪಟ್ಟಕ್ಕೇರಿದ್ದಾರೆ.

ಅತ್ಯಂತ ವೇಗವಾಗಿ 150 ವಿಕೆಟ್ ಕಿತ್ತ ಎಡಗೈ ಬೌಲರ್ ಜಡೇಜ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 70 ರನ್‌ ಹಾಗೂ 7 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಜಡೇಜ ಬಾಚಿಕೊಂಡರು.

Ravindra Jadeja becomes No 1 all-rounder in ICC Test rankings

ಐಸಿಸಿ ಆಲ್‌ರೌಂಡರ್ ಪಟ್ಟಿಯಲ್ಲಿ ಜಡೇಜಾ 438 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದರೆ, ಇತ್ತ 418 ಅಂಕ ಪಡೆದಿರುವ ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಾಂಗ್ಲಾದೇಶದ ಶಕಿಬ್ ಅಲ್‌ ಹಸನ್ 431 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

32ನೇ ಪಂದ್ಯದಲ್ಲಿ ಜಡೇಜಾ ಅವರು 150 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಎಡಗೈ ಬೌಲರ್ ಗಳ ಪೈಕಿ ಅತ್ಯಂತ ತ್ವರಿತಗತಿಯಲ್ಲಿ ಈ ಮೈಲಿಗಲ್ಲು ದಾಟಿದ್ದಲ್ಲದೆ, ಅಶ್ವಿನ್ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.

ICC test ranking Jadeja and Ashwin in top two positions | Oneindia Kannada

ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿರುವ ಜಡೇಜ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಗೆ ಎಸೆದ ಥ್ರೋ- ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದು,ಮೂರನೇ ಟೆಸ್ಟ್ ಪಂದ್ಯವಾಡದಂತೆ ಜಡೇಜಗೆ ನಿರ್ಬಂಧ ಹೇರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India all-rounder Ravindra Jadeja, who will miss the third and final Test against Sri Lanka at Pallekele owing to a suspension, has become the premier all-rounder in Test cricket in the latest ICC rankings released on Tuesday (August 8).
Please Wait while comments are loading...