ಅಶ್ವಿನ್ ವಿಕೆಟ್ ಗಳಿಸಿದ್ದು ಬಿಗ್ ನ್ಯೂಸ್ ಅಲ್ಲ
300 ವಿಕೆಟ್ ಪಡೆದಿರೋದು ಈ ದಿನದ ಬಿಗ್ ನ್ಯೂಸ್ ಅಲ್ಲ, ಬೇರೊಂದು ಸುದ್ದಿ ಅದನ್ನೂ ಮೀರಿಸಿದೆ ಎಂಬರ್ಥದಲ್ಲಿ ಟ್ರೋಲ್ ಮಾಡಿದ್ದಾರೆ.
ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಮಾರ್ಕ್ಲೆ ಮದುವೆ ಸುದ್ದಿ ಕೂಡ ಅಧಿಕೃತವಾಗಿ ಪ್ರಕಟಗೊಂಡಿತ್ತು. ಹಾಗಾಗಿ ಈ ಸುದ್ದಿಯ ಮುಂದೆ ಹೆಚ್ಚು ಸದ್ದು ಮಾಡಿಲ್ಲ ಅಂತಾ ಪ್ರೀತಿ ಟ್ರೋಲ್ ಮಾಡಿದ್ದರು.ಹಾಲಿವುಡ್ ನಟಿ ಜತೆ ಬ್ರಿಟನ್ ಯುವರಾಜ ಹ್ಯಾರಿ ಮದುವೆ
|
ಕೊಹ್ಲಿ ಜತೆ ಸಂಭ್ರಮಿಸಿದ ಅಶ್ವಿನ್
ನಾಗ್ಪುರ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಗಳಿಸಿದ ಆರ್ ಅಶ್ವಿನ್ ಅವರು ಪಂದ್ಯ ಶ್ರೇಷ್ಠ ಎನಿಸಿಕೊಂಡ ವಿರಾಟ್ ಕೊಹ್ಲಿ ಅವರ ಜತೆ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ಸೆಲ್ಫಿ ತೆಗೆದುಕೊಂಡು ಟ್ವಿಟ್ಟರ್ ಗೆ ಹಾಕಿದ್ದರು.
|
ಪ್ರೀತಿ ಟ್ವೀಟ್ ಮಾಡಿದ್ದು ಹೀಗೆ
300 ವಿಕೆಟ್ ಗಳಿಸಿದ ನಿಮ್ಮ ಸಂಭ್ರಮ ಹಾಗೂ ಸಾಧನೆ ಬಗ್ಗೆ ನಾನೇನು ಹೆಚ್ಚು ಹೇಳಲಾರೆ, ಅಭಿನಂದನೆ, ಆದರೆ, ಇಲ್ಲಿ ನೋಡಿ ಇದು ಇಂದಿನ ಬಿಗ್ ಬ್ಯೂಸ್ ಎಂದು ಪ್ರಿನ್ಸ್ ಹ್ಯಾರಿ ಮದುವೆ ನಿಶ್ಚಯ ಸುದ್ದಿಯ ಲಿಂಕ್ ಹಾಕಿದ್ದ ಪ್ರೀತಿ.
|
ಇಶಾಂತ್ ಶರ್ಮ ಹಾಗೂ ಅಶ್ವಿನ್ ಸೆಲ್ಫಿ
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದಾಗ ವೇಗಿ ಇಶಾಂತ್ ಶರ್ಮ ಹಾಗೂ ಅಶ್ವಿನ್ ಸೆಲ್ಫಿ ತೆಗೆದುಕೊಂಡು ಹಾಕಿದ್ದಕ್ಕೆ ಪ್ರೀತಿ ಅವರು ಸಕತ್ ಆಗಿ ಟ್ವೀಟ್ ಮಾಡಿದ್ದರು. ಇಶಾಂತ್ ಶರ್ಮ್ ಅವರು ವಿಕೆಟ್ ಗಳಿಸಿದಾಗ ವಿಚಿತ್ರವಾಗಿ ಮುಖ ಮಾಡಿದ್ದು ಸಕತ್ ವೈರಲಾಗಿತ್ತು.