ಅಶ್ವಿನ್ ಗೆ ಸಿಕ್ಕಿದೆ 2016ರ ಬಹು ದೊಡ್ಡ ಸಂಭ್ರಮದ ಕ್ಷಣ!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 27: ಟೀಂ ಇಂಡಿಯಾದ ಸ್ಪಿನ್ನರ್ ಆರ್ ಅಶ್ವಿನ್ ಅವರು ವಿಶ್ವದ ನಂ.1 ಬೌಲರ್ ಆಗಿರಬಹುದು, ಐಸಿಸಿಯ ವಾರ್ಷಿಕ ಪ್ರಶಸ್ತಿಗಳಲ್ಲಿ ಡಬ್ಬಲ್ ಸಂಭ್ರಮ ಪಡೆದಿರಬಹುದು, ಅದರೆ, ಅಶ್ವಿನ್ ಗೆ ವರ್ಷದ ಅತ್ಯಂತ ಖುಷಿಯ ಕ್ಷಣಗಳು ಈಗ ಸಿಕ್ಕಿದೆ.

ಆರ್. ಅಶ್ವಿನ್ ಪತ್ನಿ ಅವರ ಪ್ರೀತಿ ಡಿಸೆಂಬರ್ 21ರಂದು 2ನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಗೆದ್ದು ಭಾರತ ತಂಡ 4-0ಯಿಂದ ಸರಣಿ ಜಯಿಸಿದ ಮರುದಿನವೇ ಅಶ್ವಿನ್ ತಂದೆಯಾದ ಸಂಭ್ರಮ ಆಚರಿಸಿದ್ದರು.

R Ashwin, wife welcome a 'carrom baby' in their life; cricketer's 2016 couldn't have been better

ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಗೆದ್ದು ಭಾರತ ತಂಡ 4-0ಯಿಂದ ಸರಣಿ ಜಯಿಸಿದ ಮರುದಿನವೇ ಅಶ್ವಿನ್ ತಂದೆಯಾದ ಸಂಭ್ರಮ ಆಚರಿಸಿದ್ದರು.ತಂದೆಯಾದ ವಿಷಯವನ್ನು 5 ದಿನಗಳ ಬಳಿಕ ಬಹಿರಂಗಗೊಳಿಸಲಾಗಿದೆ. ಅಶ್ವಿನ್ ಇತ್ತೀಚೆಗೆ ಐಸಿಸಿಯಿಂದ ವರ್ಷದ ಕ್ರಿಕೆಟಿಗ ಮತ್ತು ವರ್ಷದ ಟೆಸ್ಟ್ ಕ್ರಿಕೆಟಿಗೆ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದಾರೆ.

ಸೋಮವಾರ ಕೊನೆಗೂ ಟ್ವಿಟರ್​ನಲ್ಲಿ ಪ್ರೀತಿ ತಾಯಿಯಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 2011ರ ನವೆಂಬರ್ 13ರಂದು ಅಶ್ವಿನ್-ಪ್ರೀತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

2015ರ ಜೂನ್​ನಲ್ಲಿ ಅವರಿಗೆ ಮೊದಲ ಹೆಣ್ಣುಮಗು ಅಖಿರಾ ಜನಿಸಿದ್ದಳು. ಮಕ್ಕಳ ಜತೆ ಹೆಚ್ಚು ಕಾಲ ಕಳೆಯಲು ಅಶ್ವಿನ್ ಅವರು ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿದ್ದಾರೆ ಎಂಬ ಸುದ್ದಿಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The outgoing year 2016 had another moment of joy for India's star off-spinner Ravichandran Ashwin.Ashwin, who had a remarkable year in his cricketing career, became father of a second child as his wife Prithi Ashwin gave birth to a baby girl.
Please Wait while comments are loading...