ಸಚಿನ್, ಸೆಹ್ವಾಗ್ ದಾಖಲೆ ಮುರಿದ ಆರ್ ಅಶ್ವಿನ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸೋಮವಾರ (ಆಗಸ್ಟ್ 22) ಹೊಸ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅವರ ಟೆಸ್ಟ್ ದಾಖಲೆ ಮುರಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡು ಭಾರತ 2-0ರಲ್ಲಿ ಸರಣಿ ಗೆದ್ದುಕೊಂಡಿತು.

ಕ್ವೀನ್ಸ್ ಪಾರ್ಕ್ ಒವಲ್ ನಲ್ಲಿ ನಡೆದ ಟೆಸ್ಟ್ ಪಂದ್ಯ ಸಂಪೂರ್ಣ ಮಳೆಗೆ ಆಹುತಿಯಾಯಿತು. ಸರಣಿ ಗೆದ್ದರೂ ಐಸಿಸಿ ಶ್ರೇಯಾಂಕದಲ್ಲಿ ಭಾರತ ಕೆಳಗಿಳಿದು ಪಾಕಿಸ್ತಾನ ಅಗ್ರಸ್ಥಾನಕ್ಕೇರಿತು. ಶ್ರೇಯಾಂಕ ಪಟ್ಟಿ ಬದಲಾಗ್ತುತಿರುತ್ತದೆ. ಈ ಬಗ್ಗೆ ಹೆಚ್ಚಿನ ಚಿಂತೆ ಬೇಡ ಎಂದು ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. [ಶಾರ್ಜಾದಲ್ಲಿ ಸಚಿನ್, ಮೊಹಾಲಿಯಲ್ಲಿ ಕೊಹ್ಲಿ ಯಾರು ಬೆಸ್ಟ್?]

ಅಶ್ವಿನ್ ದಾಖಲೆ: 29 ವರ್ಷ ವಯಸ್ಸಿನ ನಂ.1 ಆಲ್ ರೌಂಡರ್ ಆರ್ ಅಶ್ವಿನ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಸಹಜವಾಗಿ ಆಯ್ಕೆಯಾದರು.


ತಮಿಳುನಾಡಿನ ಬಲಗೈ ಬ್ಯಾಟ್ಸ್ ಮನ್ ಅಶ್ವಿನ್ ಅವರು 7 ಇನ್ನಿಂಗ್ಸ್ ಗಳಿಂದ 2 ಶತಕ ಹಾಗೂ 17 ವಿಕೆಟ್ ಪಡೆದು ಯಶಸ್ವಿ ಪ್ರದರ್ಶನ ನೀಡಿದರು. 7/83 ಶ್ರೇಷ್ಠ ಪ್ರದರ್ಶನವಾಗಿದೆ. [ಅನಿಲ್ ಕುಂಬ್ಳೆ, ಚಂದ್ರಶೇಖರ್ ದಾಖಲೆ ಸಮಕ್ಕೆ ನಿಂತ ಅಶ್ವಿನ್]
Ravichandran Ashwin breaks Sachin Tendulkar's record in Test cricket

ನಾಲ್ಕು ಇನ್ನಿಂಗ್ಸ್ ನಿಂದ 58.75 ರನ್ ಸರಾಸರಿಯಂತೆ 235ರನ್ ಗಳಿಸಿದ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. [ವಿಂಡೀಸ್ ವಿರುದ್ಧ ಸರಣಿ ಗೆದ್ದರೂ, ಪಾಕ್ ವಿರುದ್ಧ ಸೋತ ಭಾರತ]

ಈಗ ತೆಂಡೂಲ್ಕರ್ ಹಾಗೂ ಸೆಹ್ವಾಗ್ ಅವರು ಗಳಿಸಿದ ಸರಣಿ ಶ್ರೇಷ್ಠ ಪ್ರಶಸ್ತಿಗಳಿಗಿಂತ ಅಶ್ವಿನ್ ಮುಂದೆ ಬಂದಿದ್ದಾರೆ. ಡಿಸೆಂಬರ್ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5ನೇ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅಶ್ವಿನ್ ಅವರು 6ನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದು, ಸಚಿನ್, ಸೆಹ್ವಾಗ್ ಗಿಂತ ಕಡಿಮೆ ಅವಧಿಯಲ್ಲಿ ಸಾಧನೆ ಮಾಡಿದ್ದಾರೆ. [ಸರಣಿ ಶ್ರೇಷ್ಠ ದಾಖಲೆ: ಮುತ್ತಯ್ಯ ಅಗ್ರಸ್ಥಾನ, ಅಶ್ವಿನ್ 5ನೇ ಸ್ಥಾನ]

ಅಶ್ವಿನ್ 36 ಟೆಸ್ಟ್ ಪಂದ್ಯಗಳಲ್ಲಿ 6 ಬಾರಿ ಸರಣಿ ಶ್ರೇಷ್ಠ ಎನಿಸಿದ್ದರೆ, ಸಚಿನ್(200 ಟೆಸ್ಟ್) ಹಾಗೂ ಸೆಹ್ವಾಗ್(104) ಅವರ ದಾಖಲೆ ಮುರಿದ ಅಶ್ವಿನ್ ಗಿಂತ ವಾಸೀಂ ಅಕ್ರಮ್, ಇಮ್ರಾನ್ ಖಾನ್, ಜಾಕ್ ಕಾಲೀಸ್ ಹಾಗೂ ಮುತ್ತಯ್ಯ ಮುರಳೀದರನ್ ಮುಂದಿದ್ದಾರೆ. ಮುರಳಿ 11 ಬಾರಿ ಸರಣಿ ಶ್ರೇಷ್ಠ ಎನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Off-spinner Ravichandran Ashwin yesterday (August 22) surpassed batting legend Sachin Tendulkar and Virender Sehwag to set a new record at the conclusion of the 4th and final Test between India and West Indies in Port of Spain.
Please Wait while comments are loading...