ಆರ್ ಅಶ್ವಿನ್ ಈಗ ವಿಶ್ವದ ನಂ.1 ಬೌಲರ್, ಆಲ್ ರೌಂಡರ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 12: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 13 ವಿಕೆಟ್ ಕಬಳಿಸಿದ್ದಲ್ಲದೆ ಇಲ್ಲಿ ತನಕ ವೈಯಕ್ತಿಕ ಸಾಧನೆಯನ್ನು ಸರಿಗಟ್ಟಿದ್ದರು. 13/140 ಕಬಳಿಸಿದ ಆಶ್ವಿನ್ ಅವರು ಈಗ ವಿಶ್ವದ ನಂ.1 ಆಲ್ ರೌಂಡರ್ ಹಾಗೂ ನಂ.1 ಬೌಲರ್ ಎನಿಸಿಕೊಂಡಿದ್ದಾರೆ. [ರವಿಚಂದ್ರನ್ ಅಶ್ವಿನ್ ಮುರಿದ ಟೆಸ್ಟ್ ದಾಖಲೆಗಳ ಪಟ್ಟಿ]

Ravichandran Ashwin becomes No. 1 Test bowler in the world, again

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಬುಧವಾರ(ಅಕ್ಟೋಬರ್ 12) ಪ್ರಕಟಿಸಲಾಗಿದ್ದು, ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಬೌಲರ್ ಡೇಲ್ ಸ್ಟೈನ್ ರನ್ನು ಹಿಂದಿಕ್ಕಿ ಅಶ್ವಿನ್ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 2015ರಲ್ಲಿ ಕೂಡಾ ಅಶ್ವಿನ್ ಅವರು ವಿಶ್ವದ ಅಗ್ರಗಣ್ಯ ಬೌಲರ್ ಆಗಿ ವರ್ಷವನ್ನು ಮುಗಿಸಿದ್ದರು. ನಂತರ ಜುಲೈ ತಿಂಗಳಿನಲ್ಲಿ ನಂ.1 ಸ್ಥಾನಕ್ಕೇರಿದ್ದರು.[ಕಿವೀಸ್ ವಿರುದ್ಧ ಸರಣಿ, ಕ್ರಿಕೆಟರ್ಸ್ ಗೆ ಟ್ವಿಟ್ಟರಲ್ಲಿ ಬಹುಪರಾಕ್!]

ಅಶ್ವಿನ್ ಅವರು ಅಮೋಘ ಬೌಲಿಂಗ್ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 321ರನ್ ಗಳ ಅಂತರದಿಂಡ ಗೆದ್ದುಕೊಂಡಿತು. ಜತೆಗೆ ಮೂರು ಟೆಸ್ಟ್ ಗಳ ಸರಣಿಯನ್ನು 3-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಸರಣಿಯಲ್ಲಿ 27 ವಿಕೆಟ್ ಗಳಿಸಿದ ಅಶ್ವಿನ್ ಅವರು ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು.

30 ವರ್ಷ ವಯಸ್ಸಿನ ಅಶ್ವಿನ್ ಅವರು 900 ಅಂಕಗಳನ್ನು ಗಳಿಸಿ ಎರಡು ಸ್ಥಾನ ಮೇಲಕ್ಕೇರಿ ನಂ.1 ಪಟ್ಟಕ್ಕೇರಿದರು. ಅಶ್ವಿನ್ ಅವರು 39 ಟೆಸ್ಟ್ ಪಂದ್ಯಗಳಿಂದ 220 ವಿಕೆಟ್ ಪಡೆದಿದ್ದಾರೆ.

ಅಕ್ಟೋಬರ್ 12, 2016ರಂತೆ ಐಸಿಸಿ ಶ್ರೇಯಾಂಕ ಪಟ್ಟಿ:
1. ರವಿಚಂದ್ರನ್ ಅಶ್ವಿನ್ (ಭಾರತ) 900
2. ಡೇಲ್ ಸ್ಟೈನ್(ದಕ್ಷಿಣ ಆಫ್ರಿಕಾ) 878
3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) 870
4. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) 836
5. ರಂಗಣಾ ಹೇರಾತ್ (ಶ್ರೀಲಂಕಾ) 831
6. ಯಾಸೀರ್ ಶಾ (ಪಾಕಿಸ್ತಾನ) 806
7. ರವೀಂದ್ರ ಜಡೇಜ (ಭಾರತ) 805
8. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) 792
9. ನೀಲ್ ವೇಗ್ನರ್ (ನ್ಯೂಜಿಲೆಂಡ್) 731
10. ವೆರ್ನಾನ್ ಫಿಲ್ಯಾಂಡರ್ (ದಕ್ಷಿಣ ಆಫ್ರಿಕಾ) 723
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's star offspinner Ravichandran Ashwin has once again become the number one Test bowler in the world after his career-best 13/140 in the Indore Test against New Zealand yesterday (October 11). Ashwin is also the number one Test all-rounder.
Please Wait while comments are loading...