ಪಂಜಾಬ್ v/s ಕೋಲ್ಕತ್ತಾ ಪಂದ್ಯದಲ್ಲಿ ಟಾಸ್ ವಿವಾದ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಮೇ 09 : ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಟಾಸ್ ವೇಳೆ ಎಡವಟ್ಟಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೇ 04 ರಂದು ಈಡನ್ ಗಾರ್ಡನ್ ಕೋಲ್ಕತ್ತಾದಲ್ಲಿ ನಡೆದ ಕಿಂಗ್ಸ್ ಪಂಜಾಬ್ ಮತ್ತು ನೈಟ್ ರೈಡರ್ಸ್ ನಡುವಿನ ಪಂದ್ಯದ ಟಾಸ್ ತೀರ್ಪನ್ನು ಕಾಮೆಂಟೇಟರ್ ರವಿ ಶಾಸ್ತ್ರಿ ತಪ್ಪಾಗಿ ನೀಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಅಶ್ಚರ್ಯ ಆಗ್ತಿದೆ ಅಲ್ವಾ, ಆಗಲೇ ಬೇಕು ಏಕಂದ್ರೆ ಅಷ್ಟೆಲ್ಲ ಕ್ಯಾಮರಾಗಳನ್ನು ಇಟ್ಟುಕೊಂಡು, ಕಣ್ಣೆದುರಿಗೆ ಇಂತಹ ಘಟನೆ ನಡೆದಿರುವುದು ವಿಪರ್ಯಾಸ. ದೊಡ್ಡ-ದೊಡ್ಡ ಕ್ಯಾಮೆರಾಗಳು ಇದ್ದರೂ ಟಾಸ್ ಗೆದ್ದೋರೆ ಬೇರೆ, ರವಿ ಶಾಸ್ತ್ರಿ ಅವರು ಹೇಳಿದ್ದೆ ಬೇರೆ. ಅದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಚರ್ಚೆಗೀಡಾಗಿದೆ.

ನಡೆದಿದ್ದೇನು : ಮೇ 04 ರಂದು ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯದ ವೇಳೆ ಕಾಮೆಂಟೆಟರ್ ರವಿ ಶಾಸ್ತ್ರಿ ಈ ಎರಡು ತಂಡದ ನಾಯಕರುಗಳನ್ನು ಟಾಸ್ ಗಾಗಿ ಮೈದಾನಕ್ಕೆ ಅಹ್ವಾನಿಸಿದ್ದರು. ಈ ವೇಳೆಯಲ್ಲಿ ಕೋಲ್ಕತ್ತಾ ತಂಡದ ಕ್ಯಾಪ್ಟನ್ ಗಂಭೀರ್ ನಾಣ್ಯವನ್ನು ಚಿಮ್ಮಿದರು, ಎದುರಾಳಿ ತಂಡದ ಮುರುಳಿ ವಿಜಯ್ ಹೆಡ್ ಎಂದು ಹೇಳಿದ್ದಾರೆ.

Toss controversy rocks IPL 2016: KKR v KXIP match May 04

ಆದರೆ ಟೇಲ್ ಈಸ್ ದ ಕಾಲ್ ಎಂದು ರವಿಶಾಸ್ತ್ರಿ ಮೈಕ್ ನಲ್ಲಿ ಹೇಳಿ ಎಡವಟ್ಟು ಮಾಡಿದ್ದಾರೆ. ಅದು ಟೇಲ್ ಬಿದ್ದಿರುವುದರಿಂದ ನೀವು ಏನನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಸೀದಾ ವಿಜಯ್ ಅವರ ಬಳಿಗೆ ಮೈಕ್ ಹಿಡಿದ್ದಿದ್ದಾರೆ. ಇದರಿಂದ ಮುರುಳಿ ವಿಜಯ್ ಆಶ್ಚರ್ಯಗೊಂಡು ಮೊದಲು ಬೌಲಿಂಗ್ ನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ರೀತಿ ಮುರುಳಿ ವಿಜಯ್ ಹೇಳಿದ್ದೆ ಬೇರೆ ರವಿ ಶಾಸ್ತ್ರಿ ಹೇಳಿದ್ದೆ ಬೇರೆಯಾಗಿ ಟಾಸ್ ನಲ್ಲಿ ಗೊಂದಲ ಸೃಷ್ಟಿಯಾಗಿ ಈಗ ಅದು ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಟಾಸ್ ಕೋಲ್ಕತ್ತಾ ಪರವಾಗಿದ್ದರು ಗೊಂದಲದಿಂದ ಪಂಜಾಬ್ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಇದರಿಂದ ನೈಟ್ ರೈಡರ್ಸ್ ಟಾಸ್ ಗೆದ್ದರು ಸೋತಂತಾಗಿದೆ. ಇದರಿಂದ ಮೊದಲ ಬ್ಯಾಟ್ ಮಾಡಿ ಕೋಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 164 ಗಳಿಸಿತ್ತು. ಇದನ್ನು ಬೆನ್ನಟ್ಟಿದ ಪಂಜಾಬ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ 7 ರನ್ ಗಳಿಂದ ಸೋಲು ಕಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Please Wait while comments are loading...