ಗಂಗೂಲಿ ವಿರುದ್ಧ ನೇರವಾಗಿ ಕಿಡಿಕಾರಿದ ರವಿಶಾಸ್ತ್ರಿ

Posted By:
Subscribe to Oneindia Kannada

ಮುಂಬೈ, ಜೂನ್ 29: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರು ನೇರವಾಗಿ ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ವಿರುದ್ಧ ಕಿಡಿಕಾರಿದ್ದಾರೆ. ರವಿಶಾಸ್ತ್ರಿ ಅವರಿಗೆ ಟೀಂ ಇಂಡಿಯಾ ಕೋಚ್ ಹುದ್ದೆ ತಪ್ಪಿಸಲು ಗಂಗೂಲಿಯೇ ಕಾರಣ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ, ಗಂಗೂಲಿ ನಡೆ ಅಗೌರವದಿಂದ ಕೂಡಿದೆ, ಇನ್ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂಬ ಭರವಸೆ ಇದೆ ಎಂದಿದ್ದಾರೆ.

ಬ್ಯಾಂಕಾಕ್ ಪ್ರವಾಸದಿಂದ ಹಿಂದಿರುಗಿ ಬಂದಿರುವ ರವಿಶಾಸ್ತ್ರಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ, ತಂಡದ ನಾಯಕನ ಆಯ್ಕೆ ಪ್ರಕ್ರಿಯೆ ಮತ್ತು ಕೋಚ್ ಆಗುವ ಅವಕಾಶ ಕೈತಪ್ಪಿದ್ದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.[ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ]

ravi shastri, sourav ganguly, india, bcci, ರವಿಶಾಸ್ತ್ರಿ, ಸೌರವ್ ಗಂಗೂಲಿ, ಭಾರತ, ಬಿಸಿಸಿಐ

ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿತ್ತೇ? ಎಂಬ ಪ್ರಶ್ನೆಗೆ, ಸಮಿತಿ ಎದುರು ಸಂದರ್ಶನ ಕೊಡುವುದಷ್ಟೇ ನನ್ನ ಕೆಲಸ. ಒಳಗೇನಾಯಿತೋ ಯಾರಿಗೆ ಗೊತ್ತು ಎಂದರು. 18 ತಿಂಗಳು ತಂಡವನ್ನು ಮುನ್ನಡೆಸಿದ್ದೇನೆ. ಟೆಸ್ಟ್ ಪಂದ್ಯದಲ್ಲಿ ನಮ್ಮದೇ ಶ್ರೇಷ್ಠ ತಂಡವೆಂದು ಪರಿಗಣಿತವಾಗಿದೆ. ನಮ್ಮ ತಂಡದ ಈ ಸಾಧನೆಗಳು ನನಗೆ ಖುಷಿ ನೀಡಿವೆ.[ಕೊಹ್ಲಿ ನಾಯಕತ್ವದಲ್ಲಿ ಧೋನಿ ಆಡಿದರೆ ತಪ್ಪೇನಿಲ್ಲ: ಶಾಸ್ತ್ರಿ]

ಆದರೆ, ನನ್ನ ಸಂದರ್ಶನದ ದಿನ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು ಗೈರು ಹಾಜರಾಗಿದ್ದು ಒಂಚೂರು ಹಿಡಿಸಲಿಲ್ಲ. ಈ ರೀತಿ ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ ಎಂದು ಶಾಸ್ತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

ಅನಿಲ್ ಕುಂಬ್ಳೆ ಸರ್ವಕಾಲಿಕ ಶ್ರೇಷ್ಠ ಕ್ರಿಕೆಟರ್ ನಿಜ, ಆದರೆ, ಈಗ ಶ್ರೇಷ್ಠ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿದ್ದಾರೆ ಎಂದಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Days after he was overlooked for the Indian cricket team's head coach's job, a "disappointed" Ravi Shastri on Tuesday (June 28) lashed out at Sourav Ganguly for skipping his interview, and accused the former skipper of being 'disrespectful'.
Please Wait while comments are loading...