ಪಾಕಿಸ್ತಾನ್ ಕ್ರಿಕೆಟ್ ಲೀಗ್ ನಲ್ಲಿ ಸಿಖ್ ಆಟಗಾರ ಎಂಟ್ರಿ

Posted By:
Subscribe to Oneindia Kannada

ಕರಾಚಿ, ಮಾರ್ಚ್ 15: ಪಾಕಿಸ್ತಾನದ ದೇಶೀಯ ಕ್ರಿಕೆಟ್ ಲೀಗ್‌ನಲ್ಲಿ ಭಾರತದ ಮೂಲದ ಆಟಗಾರರೊಬ್ಬ ಪಾದಾರ್ಪಣೆ ಮಾಡಿದ್ದಾರೆ. ಸಿಖ್ ಕ್ರಿಕೆಟಿಗ ಮಹಿಂದರ್ ಪಾಲ್ ಸಿಂಗ್ ಅವರು ಪಾಕ್ ಕ್ರಿಕೆಟ್ ತಂಡದಲ್ಲಿ ಆಡಿದ ಮೊದಲ ಸಿಖ್ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಗುಲಾಬ್ ಸಿಂಗ್ ಎಂಬ ಕ್ರಿಕೆಟಿಗ ಪಾಕ್ ಪರ ಮೂರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಮಹಿಂದರ್ ಪಾಟ್ರೊನ್ಸ್ ಟ್ರೋಫಿ ಗ್ರೇಡ್-2 ಟೂರ್ನಮೆಂಟ್‌ನಲ್ಲಿ ಕ್ಯಾಂಡಿಲ್ಯಾಂಡ್ ತಂಡದ ಪರ ಆಡುವ ಅವಕಾಶ ಪಡೆದಿದ್ದಾರೆ.

ಪ್ಯಾಟ್ರೋನ್ಸ್ ಟ್ರೋಫಿ ಗ್ರೇಡ್-2 ಟೂರ್ನಿಯಲ್ಲಿ ಆಡುವ ಅವಕಾಶ ಲಭಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದಿದ್ದೆ. ಆದರೆ,ಗಾಯದ ಸಮಸ್ಯೆಯಿಂದಾಗಿ ಎರಡನೆ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

Rare feat: Sikh cricketer Mahinder Pal Singh plays in Pakistan's domestic league

ಕ್ಯಾಂಡಿಲ್ಯಾಂಡ್ ಮ್ಯಾನೇಜರ್ ಮಿರ್ಝಾ ಅವರು ನನಗೆ ಕರೆ ಮಾಡಿದಾಗ ನನಗೆ ತುಂಬಾ ಸಂತೋಷವಾಗಿತ್ತು. 2015ರಲ್ಲಿ ಕ್ಯಾಂಡಿಲ್ಯಾಂಡ್ ಆಯೋಜಿಸಿದ್ದ ಪ್ರತಿಭಾಶೋಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಪ್ರತಿಭಾಶೋಧ ಕಾರ್ಯಕ್ರಮವನ್ನು ಆಧರಿಸಿ ನನಗೆ ಕರೆ ಮಾಡಿದ್ದರು'' ಎಂದು 21ರ ಹರೆಯದ ಸಿಂಗ್ ತಿಳಿಸಿದರು.

ಪಾಕಿಸ್ತಾನದಲ್ಲಿ 20,000ದಷ್ಟಿರುವ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರು. ಲಾಹೋರ್‌ನಿಂದ 100 ಕಿ.ಮೀ.ದೂರದ ನಾನ್‌ಕನಾ ಸಾಹಿಬ್ ಮಹಿಂದರ್ ಸಿಂಗ್ ಜನ್ಮಸ್ಥಳ. 'ನನ್ನ ತಂದೆ ಹರ್ಜೀತ್ ಸಿಂಗ್ ವೈದ್ಯರು. ಕಳೆದ ಒಂದು ವರ್ಷದಿದ ಅವರು ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಲ್ತಾನ್‌ನಲ್ಲಿ ಪಿಸಿಬಿ ಆಯೋಜಿಸಿದ್ದ ಶಿಬಿರಕ್ಕೆ ಆಯ್ಕೆಯಾದ ಮೊದಲ ಸಿಖ್ ಆಟಗಾರನಾಗಿದ್ದೆ. ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಲಭಿಸಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಮಹಿಂದರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mahinder Pal Singh today (March 14) became one of the very few Sikh cricketers to play in Pakistan's domestic competitions as he turned out for Candyland team in a Patrons Trophy Grade-2 tournament.
Please Wait while comments are loading...