ರಣಜಿ : ಅಸ್ಸಾಂ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

Posted By:
Subscribe to Oneindia Kannada

ಬೆಂಗಳೂರು, ಜುಲೈ 20 : ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಕರ್ನಾಟಕದ ಹೆಮ್ಮೆಯ ಕ್ರಿಕೆಟರ್ ಗದಗಿನ ಸುನಿಲ್ ಜೋಶಿ ಅವರನ್ನು ಮುಂದಿನ ಎರಡು ರಣಜಿ ಸೀಸನ್ ಗಳಿಗೆ ಅಸ್ಸಾಂ ತಂಡದ ಕೋಚ್ ಆಗಿ ನೇಮಿಸಿ ಬುಧವಾರ ಪ್ರಕಟಣೆ ಹೊರಡಿಸಲಾಗಿದೆ.

ಕಳೆದ ಸೀಸನ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಕೋಚ್ ಆಗಿ ಉತ್ತಮ ಕಾರ್ಯನಿರ್ವಹಣೆ ತೋರಿದ್ದರು. ಅದಕ್ಕೂ ಮುನ್ನ ಹೈದರಾಬಾದ್ ಕೋಚ್ ಆಗಿದ್ದರು. ಈಗ ಅಸ್ಸಾಂ ಕೋಚ್ ಆಗಿ ಸೆಪ್ಟೆಂಬರ್ ನಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Sunil Joshi

ಅವರು ಕರ್ನಾಟಕದವರೇ ಆದ ಸನತ್ ಕುಮಾರ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಕಳೆದ ಋತುವಿನಲ್ಲಿ ಅಸ್ಸಾಂ ತಂಡವನ್ನು ರಣಜಿ ಸೆಮಿಫೈನಲ್ ತನಕ ಸನತ್ ಕುಮಾರ್ ಅವರು ಕೊಂಡೊಯ್ದ ಸಾಧನೆ ಮಾಡಿದ್ದರು.[ಬಲಿಷ್ಠ ಮುಂಬೈ ಮಣಿಸಿದ ಜೋಶಿ 'ಕಾಶ್ಮೀರಿ' ಹುಡುಗರು]

ಹೊಸ ತಂಡದ ಜವಾಬ್ದಾರಿ ಬಗ್ಗೆ ಒನ್ ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ ಜೋಶಿ, ಕಳೆದ ಎರಡು ಸೀಸನ್ ನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಉತ್ತಮ ಕಾರ್ಯವನ್ನು ಮುಂದುವರೆಸುತ್ತೇನೆ. ಅಸ್ಸಾಂನಲ್ಲಿರುವ ಯುವಪ್ರತಿಭೆಗಳಿಗೆ ಸೂಕ್ತ ತರಬೇತಿ ಸಿಕ್ಕರೆ ಉತ್ತಮ ಸಾಧನೆ ಸಾಧ್ಯ ಎಂದರು. [ವಿಶ್ವ ಟಿ20 ಆಡುವ ತಂಡಕ್ಕೆ ಸುನೀಲ್ ಜೋಶಿ ಕೋಚ್!]

ಜೋಶಿ ಅವರು ಭಾರತದ ಪರ 15 ಟೆಸ್ಟ್, 69 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಕೋಚ್ ಆಗಿ ಜಮ್ಮು ಮತ್ತು ಕಾಶ್ಮೀರ ತಂಡವು ಮುಂಬೈ ವಿರುದ್ಧ ಗೆಲುವು ಸಾಧಿಸಲು ಸಹಕಾರಿಯಾಗಿದ್ದರು. ಕಳೆದ ವಿಶ್ವ ಕಪ್ ಟ್ವೆಂಟಿ 20 ಟೂರ್ನಿಯಲ್ಲಿ ಒಮಾನ್ ತಂಡದ ಸ್ಪಿನ್ ಕೋಚ್ ಆಗಿ ಕೂಡಾ ಕಾರ್ಯ ನಿರ್ವಹಿಸಿದ್ದರು. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India all-rounder Sunil Joshi was today (July 20) appointed as the head coach of Assam team for 2 seasons.The 46-year-old Joshi, who has previously coached Hyderabad and Jammu and Kashmir, will take charge of Assam's senior team in September.
Please Wait while comments are loading...