ಪ್ರಥಮ ದರ್ಜೆ ಕ್ರಿಕೆಟ್ : ತ್ವರಿತ ಗತಿಯಲ್ಲಿ ಶತಕ ಸಿಡಿಸಿದ ರಿಷಬ್ ಪಂತ್

Posted By:
Subscribe to Oneindia Kannada

ಮುಂಬೈ, ನವೆಂಬರ್ 08: ದೆಹಲಿಯ ಯುವ ಪ್ರತಿಭೆ ರಿಷಬ್ ಪಂತ್ ಅವರು ಮಂಗಳವಾರ ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದ ಅತ್ಯಂತ ತ್ವರಿತ ಗತಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಬ್ಯಾಟಿಂಗ್ ಮಾಡಿದ 19 ವರ್ಷ ವಯಸ್ಸಿನ ರಿಷಬ್ ಅವರು ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಈ ಮುಂಚೆ ತ್ವರಿತ ಗತಿ ಶತಕವನ್ನು 56 ಎಸೆತಗಳಲ್ಲಿ ಇಬ್ಬರು ಆಟಗಾರರು ಸಾಧಿಸಿದ್ದರು.

Ranji Trophy: Rishabh Pant hits fastest hundred in India's first-class cricket history

ಎಡಗೈ ಬ್ಯಾಟ್ಸ್ ಮನ್ ರಿಷಬ್ ಅವರು ಮೊದಲ ಇನ್ನಿಂಗ್ಸ್ ನಲ್ಲಿ 106 ಎಸೆತಗಳಲ್ಲಿ 117 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ದಾಖಲೆಯ ಶತಕದ ನಂತರ 67 ಎಸೆತಗಳಲ್ಲಿ 135 ರನ್ ಗಳಿಸಿ ಔಟಾಗಿದ್ದಾರೆ.

ಪ್ರಸಕ್ತ ರಣಜಿ ಋತುವಿನಲ್ಲಿ ಆರು ಇನ್ನಿಂಗ್ಸ್ ಗಳಿಂದ ನಾಲ್ಕು ಶತಕ ಬಾರಿಸಿರುವ ಪಂತ್, ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಈ ದಾಖಲೆ ಶತಕಕ್ಕೂ ಮುನ್ನ ಪಂತ್ ಅವರು ಅಸ್ಸಾಂ ವಿರುದ್ಧ 146 ಹಾಗೂ ಮಹರಾಷ್ಟ್ರ ವಿರುದ್ಧ 326 ಎಸೆತಗಳಲ್ಲಿ 308 ರನ್ ಚೆಚ್ಚಿ ಇತಿಹಾಸ ನಿರ್ಮಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

1988-89 ರಲ್ಲಿ ತಮಿಳುನಾಡು ಹಾಗೂ ಟೀಂ ಇಂಡಿಯಾದ ಮಾಜಿ ಆಟಗಾರ ವಿಬಿ ಚಂದ್ರಶೇಖರ್ ಅವರು 56 ಎಸೆತಗಳಲ್ಲಿ ಶತಕ ಗಳಿಸಿದ್ದರು. ಅಷ್ಟೇ ಎಸೆತಗಳಲ್ಲಿ ನಮನ್ ಓಜಾ ಕೂಡಾ ಶತಕ ಬಾರಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Talented young batsman Rishab Pant on Tuesday stormed into record books by smashing fastest century in the history of India's first class cricket.
Please Wait while comments are loading...