ರಣಜಿ ಕ್ರಿಕೆಟ್: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 28: ಇಲ್ಲಿನ ಕರ್ನೈಲ್ ಸಿಂಗ್‌ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ರಣಜಿ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ತಂಡ 209ರನ್ ಗಳ ಭರ್ಜರಿ ಜಯ ಸಾಧಿಸಿದೆ.

26 ವರ್ಷ ವಯಸ್ಸಿನ ಮಯಾಂಕ್ ರಿಂದ 27 ದಿನಗಳಲ್ಲಿ 1000 ಪ್ಲಸ್ ರನ್

ಕರ್ನಾಟಕ ನೀಡಿದ್ದ 377 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ರೈಲ್ವೇಸ್ ತಂಡ 63 ಓವರ್‌ಗಳಲ್ಲಿ ಕೇವಲ 167 ರನ್‌ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಕರ್ನಾಟಕ 209ರನ್ ಗೆಲುವಿನ ನಗೆ ಬೀರಿಕ್ವಾರ್ಟರ್ ಫೈನಲ್ ಗೆ ಪ್ರವೇಶ ಮಾಡಿತು.

Ranji trophy: Karnataka won by 209 runs against Railways

26 ವರ್ಷದ ಮಯಾಂಕ್ ಅಗರವಾಲ್ ರೈಲ್ವೇಸ್ ವಿರುದ್ಧದ ಎರಡು ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್ 174 ಮತ್ತು 2ನೇ ಇನ್ನಿಂಗ್ಸ್ ನಲ್ಲಿ 134 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 434 ರನ್‌ ಗಳಿಸಿ ಆಲೌಟ್ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ರೈಲ್ವೇಸ್ 333 ರನ್‌ ಸರ್ವಪತನ ಕಂಡಿತ್ತು.

ರಣಜಿ : ಕರ್ನಾಟಕದ ಬೃಹತ್ ಮೊತ್ತಕ್ಕೆ ಉತ್ತರಪ್ರದೇಶದಿಂದ ತಕ್ಕ ಉತ್ತರ

ಈ ಮೂಲಕ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 101 ರನ್‌ ಮುನ್ನಡೆ ಸಾಧಿಸಿ, ಎರಡನೇ ಇನ್ನಿಂಗ್ಸ್ ನಲ್ಲಿ 275 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡು ಅಂತಿಮವಾಗಿ ರೈಲ್ವೇಸ್ ಗೆ ಒಟ್ಟು 377 ರನ್ ಗಳ ಗೆಲುವಿನ ಗುರಿ ನೀಡಿತ್ತು.

ಇದನ್ನು ಬೆನ್ನಟ್ಟಿದ ರೈಲ್ವೇಸ್ ಅಂತಿಮವಾಗಿ 167 ರನ್ ಗಳಿಸುವಷ್ಟರಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು 209ರನ್ ಗಳಿಂದ ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ವೇಗಿ ಗೌತಮ್ ಕೆ. ಮೊದಲ ಇನ್ನಿಂಗ್ಸ್ ನಲ್ಲಿ 3 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಕಬಳಿ ಮಿಂಚಿದರು.

ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ ತಂಡ ಮುಂಬೈ ತಂಡವನ್ನು ಎದುರಿಸಲಿದೆ. ಡಿಸೆಂಬರ್ 7 ರಿಂದ ಡಿ.11ರ ವರೆಗೆ ಈ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ.

ಸ್ಕೋರ್ ವಿವರ
ಕರ್ನಾಟಕ: ಮೊದಲ ಇನ್ನಿಂಗ್ಸ್ 434 ಮತ್ತು 275ಕ್ಕೆ ಡಿಕ್ಲೇರ್.
ರೈಲ್ವೇಸ್: ಮೊದಲ ಇನ್ನಿಂಗ್ಸ್ 333 ರನ್, 2ನೇ ಇನ್ನಿಂಗ್ಸ್ 167.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ranji trophy: Karnataka won by 209 runs against Railways in Karnail Singh Stadium New Delhi on November 28.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ