ರಣಜಿ ಕ್ರಿಕೆಟ್: ಹೈದರಾಬಾದ್ ಗೆಲ್ಲಲು 380 ರನ್ ಗುರಿ ನೀಡಿದ ಕರ್ನಾಟಕ

Posted By:
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್ 26 : ಇಲ್ಲಿನ ಕೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ 84ನೇ ಆವೃತ್ತಿಯ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಹೈದರಾಬಾದ್ ಗೆ ಗೆಲ್ಲಲು 380 ರನ್ ಗಳ ಗುರಿ ನೀಡಿದೆ.

ರಣಜಿ ಕ್ರಿಕೆಟ್: ಅಲ್ಪ ಮೊತ್ತಕ್ಕೆ ಸರ್ವಪತನ ಕಂಡ ಕರ್ನಾಟಕ ತಂಡ

ಮೊದಲ ಇನ್ನಿಂಗ್ಸ್ ನಲ್ಲಿ 47 ರನ್ ಗಳ ಮುನ್ನಡೆ ಸಾಧಿಸಿದ್ದ ಕರ್ನಾಟಕ ತಂಡ 2ನೇ ಇನ್ನಿಂಗ್ಸ್ ನಲ್ಲಿ ಕರುಣ್ ನಾಯರ್ (134) ಶತಕದ ನೆರವಿನಿಂದ 105.4 ಓವರ್ ಗಳಲ್ಲಿ 332 ರನ್ ಸರ್ವಪತ ಕಂಡಿತು. ಈ ಮೂಲಕ ಹೈದರಾಬಾದ್ ಗೆ ಗೆಲ್ಲಲು 380 ರನ್ ಗಳ ಸವಾಲಿನ ಗುರಿ ನೀಡಿದೆ. ಸಧ್ಯ ವರದಿಯ ಪ್ರಕಾರ ಹೈದರಾಬಾದ್ ಕೇವಲ 50 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Ranji trophy Hyderabad Need 380 Runs to win against Karnataka

ಬುಧವಾರ 49 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದ್ದ ಕರ್ನಾಟಕ ತಂಡ ಗುರುವಾರ 105.4 ಓವರ್ ಗಳಲ್ಲಿ 332 ರನ್ ಗೆ ಆಲೌಟ್ ಆಗಿದೆ. ಆಟ ಇನ್ನು ಎರಡು ದಿನ ಬಾಕಿ ಇದೆ.

ಬುಧವಾರ 37 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕರುಣ್ ನಾಯರ್ ಗುರುವಾರ ಆಟ ಮುಂದುವರೆಸಿ 229 ಎಸೆತಗಳಲ್ಲಿ 17 ಬೌಂಡರಿ ಒಳಗೊಂಡ 134 ರನ್ ಗಳಿಸಿದರು.

ಸ್ಟುವರ್ಟ್ ಬಿನ್ನಿ 72, ಸಿ.ಎಂ.ಗೌತಮ್ 21, ಶ್ರೇಯಸ್ ಗೋಪಾಲ್ 0, ಆರ್. ವಿಜಯಕುಮಾರ್ 14, ಎ.ನಿತಿನ್ 0, ಅರವಿಂದ್ ಶ್ರೀನಾಥ್ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಹೈದರಾಬಾದ್ ಪರ ಉತ್ತಮ ದಾಳಿ ಮಾಡಿದ ಮೆಹದಿ ಹಸನ್ 5, ಆಕಾಶ್ ಭಂಡಾರಿ 3, ರವಿಕಿರಣ್ 1, ಪ್ರಗ್ಯಾನ್ ಓಜಾ 1 ವಿಕೆಟ್ ಪಡೆದ ಮಿಂಚಿದರು.

ಸ್ಕೋರ್ ವಿವರ:
ಕರ್ನಾಟಕ ಮೊದಲ ಇನ್ನಿಂಗ್ಸ್ 183, ಎರಡನೇ ಇನ್ನಿಂಗ್ಸ್ 332,
ಹೈದರಾಬಾದ್ ಮೊದಲ ಇನ್ನಿಂಗ್ಸ್ 136, ಎರಡನೇ ಇನ್ನಿಂಗ್ಸ್ ಆಟ ಮುಂದುವರೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ranji trophy: Karnataka 332/10 in 105.4 overs all out in second innings against Hyderabad at KSCA stadium Shivamogga.
Please Wait while comments are loading...