ವಿಶ್ವದಾಖಲೆ ಬರೆದ ಗುಜರಾತಿನ ರಣಜಿ ಆಟಗಾರ

Posted By:
Subscribe to Oneindia Kannada

ಜೈಪುರ, ಡಿಸೆಂಬರ್ 27: ಗುಜರಾತಿನ ಆರಂಭಿಕ ಆಟಗಾರ ಸುಮಿತ್ ಗೋಹೆಲ್ ಅವರು ಇಂದು(ಡಿಸೆಂಬರ್ 27) ವಿಶ್ವದಾಖಲೆ ಬರೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಒಡಿಶಾ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಜೇಯ 359ರನ್ ಬಾರಿಸಿದ್ದಾರೆ.

ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಮಂಗಳವಾರ ಬೌಂಡರಿಗಳ ಸುರಿಮಳೆಗೈದ ಸಮಿತ್ ಅವರು ಹೊಸ ದಾಖಲೆ ಬರೆದರು. 26 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಸಮಿತ್ ಅವರು 723 ಎಸೆತಗಳಲ್ಲಿ 45 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 359ರನ್ ಚೆಚ್ಚಿದರು.

Ranji Trophy: Gujarat's Samit Gohel creates world record with 359 not out

ಮೊದಲ ಇನ್ನಿಂಗ್ಸ್ ನಲ್ಲಿ 4 ರನ್ನಿಗೆ ಔಟಾಗಿದ್ದ ಸಮಿತ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಆಟವಾಡಿದರು. ಇದು ಅವರ ವೈಯಕ್ತಿಕ 5ನೇ ತ್ರಿಶತಕವಾಗಿದೆ.

ಕಳೆದ 81 ವರ್ಷಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ತ್ರಿಶತಕ ಸಿಡಿಸಿ ಮೂರು ದಿನ ಬ್ಯಾಟಿಂಗ್ ಮಾಡಿ ಔಟಾಗದೆ ಉಳಿದವರ ಪೈಕಿ ಸಮಿತ್ ನಾಲ್ಕನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

ಸಮಿತ್ ಬ್ಯಾಟಿಂಗ್ ನೆರವಿನಿಂದ ಗುಜರಾತ್ 227.4 ಓವರ್ ಗಳಲ್ಲಿ 641 ಆಲೌಟ್ ಆಗಿದೆ. ಪಂದ್ಯ ಡ್ರಾ ಆದರೂ ಮೊದಲ ಇನ್ನಿಂಗ್ಸ್ ನಲ್ಲಿ 64ರನ್ ಮುನ್ನಡೆ ಪಡೆದ ಕಾರಣ ಗುಜರಾತ್ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat's opening batsman Samit Gohel today (December 27) created history by scoring a world record 359 not out against Odisha in a Ranji Trophy quarter-final match at Sawai Mansingh Stadium.
Please Wait while comments are loading...