ರಣಜಿ ಫೈನಲ್ : ಮುಂಬೈ 228ಸ್ಕೋರಿಗೆ ಆಲೌಟ್, ಪೃಥ್ವಿ 71

Posted By:
Subscribe to Oneindia Kannada

ಇಂದೋರ್, ಜನವರಿ 10: ರಣಜಿ ಋತುವಿನಲ್ಲಿ ಗುಜರಾತಿನ ಬ್ಯಾಟ್ಸ್ ಮನ್ ಗಳು ಮಿಂಚಿದರೆ, ಮುಂಬೈ ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಚಾಂಪಿಯನ್ ತಂಡ ಮುಂಬೈ ಮೊದಲ ದಿನದಂದು 228ಕ್ಕೆ ಆಲೌಟ್ ಆಗಿದೆ.

ಇಂದೋರಿನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದಿರುವ ರಣಜಿ ಫೈನಲ್ ಪಂದ್ಯದಲ್ಲಿ ಗುಜರಾತಿನ ಬೌಲರ್ ಗಳ ಮುಂದೆ ಮುಂಬೈನ ಬಲಿಷ್ಠ ಬ್ಯಾಟಿಂಗ್ ಪಡೆ ನಿಲ್ಲಲಾಗಲಿಲ್ಲ. ಆರ್ ಪಿ ಸಿಂಗ್, ಚಿಂತನ್ ಗಜ, ಆಫ್ ಸ್ಪಿನ್ನರ್ ರುಜುಲ್ ಭಟ್ ತಲಾ 2 ವಿಕೆಟ್ ಪಡೆದರೆ, ರುಷ್ ಕಲಾರಿಯಾ, ಹಾರ್ದಿಕ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

Ranji Trophy Final: Mumbai bowled out for 228; Prithvi Shaw top-scores with 71

41 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡಕ್ಕೆ ಯುವ ಪ್ರತಿಭಾವಂತ ಪೃಥ್ವಿ ಶಾ ಮತ್ತೊಮ್ಮೆ ಆಸರೆಯಾದರು. 71ರನ್ ಗಳಿಸಿ ಬೌಲರ್ ಗಳಿಗೆ ಪ್ರತಿರೋಧ ಒಡ್ಡಿದರು. ಉಳಿದಂತೆ ಸೂರ್ಯ ಕುಮಾರ್ ಯಾದವ್ 57, ಅಭಿಶೇಕ್ ನಾಯರ್ 35ರನ್ ಗಳಿಸಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿದ್ದರು. 83.5 ಓವರ್ ಗಳಲ್ಲಿ 228ಕ್ಕೆ ಮುಂಬೈ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಗುಜರಾತ್ ಒಂದು ಓವರ್ ನಲ್ಲಿ 2ರನ್ ಮಾಡಿ
ದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gujarat batsmen have hogged the limelight for the entire season but their unheralded bowling line-up, sans India stars Axar Patel and Jasprit Bumrah, came to the party by dismissing defending champions Mumbai for a paltry 228 on the first day of the Ranji Trophy final, here today (January 10).
Please Wait while comments are loading...