ರಣಜಿ: ಗಂಭೀರ್ ಪಡೆ ಮೇಲೆ ಕರ್ನಾಟಕದ ಸವಾರಿ

Posted By:
Subscribe to Oneindia Kannada

ಕೋಲ್ಕತ್ತಾ, ಅಕ್ಟೋಬರ್ 21: ಗೌತಮ್ ಗಂಭೀರ್ ನೇತೃತ್ವದ ದೆಹಲಿ ತಂಡದ ವಿರುದ್ಧ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ದಿಟ್ಟ ಪ್ರದರ್ಶನ ನೀಡುತ್ತಿದೆ. ಕರ್ನಾಟಕ ತನ್ನ ಎರಡನೇ ಪಂದ್ಯದಲ್ಲಿ ದೆಹಲಿಯನ್ನು 90 ರನ್ ಗಳಿಗೆ ಆಲೌಟ್ ಮಾಡಿದ್ದಲ್ಲದೆ, ಇನ್ನಿಂಗ್ಸ್ ಮುನ್ನಡೆಯನ್ನು ಪಡೆದುಕೊಂಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಂಡ ಕರ್ನಾಟಕ ಮೊದಲ ದಿನದ ಪಿಚ್​ ಸಂಪುರ್ಣ ಲಾಭ ಪಡೆದುಕೊಂಡಿತು. ಕರ್ನಾಟಕದ ಪರ ಎಸ್. ಅರವಿಂದ್ (12 ಕ್ಕೆ 4) ಮತ್ತು ಕೆ. ಗೌತಮ್ (26 ಕ್ಕೆ 3) ಅದ್ಭುತ ಬೌಲಿಂಗ್ ನೆರವಿನಿಂದ ದೆಹಲಿ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ 90 ರನ್​ಗಳಿಗೆ ಅಲೌಟ್ ಮಾಡಿದೆ.

S Aravind

ಮೊದಲ ದಿನದ ಮೊದಲ ಸೆಷನ್ ನಲ್ಲೇ ಗಂಭೀರ್ ತಂಡ ಸರ್ವಪತನ ಕಂಡಿದೆ. 35.5 ಓವರ್​ಗಳಲ್ಲಿ ಆಲೌಟ್ ಆದ ದೆಹಲಿ ಪರ ನಾಯಕ ಗಂಭೀರ್ ಕೇವಲ 2 ರನ್ ಗಳಿಸಿದರು. ದೆಹಲಿ ತಂಡದ ಪರ ರಿಷಬ್ ಪಂತ್ (24), ಧೃವ ಶೌರಿ (24) ಮತ್ತು ಮನನ್ ಶರ್ಮಾ (15) ಮಾತ್ರ ಸ್ಪಲ್ಪ ಪ್ರತಿರೋಧ ಒಡ್ಡಿದರು. ಕರ್ನಾಟಕದ ಪರ ಅರವಿಂದ್ 4, ಗೌತಮ್ 3 ಮತ್ತು ಅಭಿಮನ್ಯು ಮಿಥುನ್ 2, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.

ಸಮರ್ಥ್ ಹಾಗೂ ಮಾಯಾಂಕ್ ಅರ್ಧ ಶತಕದ ನೆರವಿನಿಂದ ಮೊದಲ ದಿನವೇ ಇನ್ನಿಂಗ್ಸ್ ಪಡೆದ ಕರ್ನಾಟಕಕ್ಕೆ ನಾಯಕ ಕರುಣ್ ನಾಯರ್ ಮತ್ತೊಮ್ಮೆ ಆಸರೆಯಾಗಿ ವಿಕೆಟ್ ಕಾಯ್ದುಕೊಂಡಿದ್ದಾರೆ. ರಾಬಿನ್ ಉತ್ತಪ್ಪ 5 ರನ್ ಗಳಿಸಿ ನಿರಾಶೆ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್
ದೆಹಲಿ ಮೊದಲ ಇನಿಂಗ್ಸ್ 35.5 ಓವರ್ 90 ಕ್ಕೆ ಆಲೌಟ್ (ರಿಷಬ್ ಪಂತ್ 24, ಧೃವ 24, ಅರವಿಂದ್ 12 ಕ್ಕೆ 4, ಗೌತಮ್ 26 ಕ್ಕೆ 3, ಮಿಥುನ್ 29 ಕ್ಕೆ 2, ಗೋಪಾಲ್ 0 ಕ್ಕೆ 1)

ಕರ್ನಾಟಕ ಮೊದಲ ಇನ್ನಿಂಗ್ಸ್ : 66 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197(ಆರ್ ಸಮರ್ಥ್ 53, ಮಾಯಾಂಕ್ ಅಗರವಾಲ್ 56. ಕರುಣ್ ನಾಯರ್ ಅಜೇಯ 34, ಕೆ ಅಬ್ಬಾಸ್ 29, ವಿ ಟೊಕಾಸ್ 50ಕ್ಕೆ2)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Poor batting display by Delhi saw them being skittled out for a paltry 90 before Karnataka batsmen applied themselves much better to take a 41-run lead in their Ranji Trophy cricket tie at the Eden Gardens here on Thursday (October 20)
Please Wait while comments are loading...