ರಣಜಿ ಪಂದ್ಯದ ವೇಳೆ ಆಟಗಾರನ ತಲೆಗೆ ಪೆಟ್ಟು

Posted By:
Subscribe to Oneindia Kannada

ಅಹಮದಾಬಾದ್, ನವೆಂಬರ್ 23: ಇಲ್ಲಿ ನಡೆಯುತ್ತಿರುವ ಹೈದರಾಬಾದ್ ಹಾಗೂ ಛತ್ತೀಸ್ ಗಢ ನಡುವಿನ ರಣಜಿ ಪಂದ್ಯದ ಕ್ರಿಕೆಟರ್ ತನ್ಮಯ್ ಅಗರವಾಲ್ ಅವರ ತಲೆಗೆ ಪೆಟ್ಟಾದ ಘಟನೆ ಬುಧವಾರ ಸಂಭವಿಸಿದೆ.

ಸರ್ದಾರ್ ವಲ್ಲಭಾಯಿ ಪಟೇಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು ಪೆಟ್ಟಾಗಿದೆ. ಛತ್ತೀಸ್ ಗಢದ ವಿಕೆಟ್ ಕೀಪರ್ ಮನೋಜ್ ಸಿಂಗ್ ಅವರು ಎಡಗೈ ಸ್ಪಿನ್ನರ್ ಮೆಹ್ದಿ ಹಸನ್ ಅವರ ಎಸೆತವನ್ನು ಬಲವಾಗಿ ಹೊಡೆದಿದ್ದಾರೆ. ಈ ಚೆಂಡು ನೇರವಾಗಿ ಫೀಲ್ಡ್ ಮಾಡುತ್ತಿದ್ದ ತನ್ಮಯ್ ತಲೆಗೆ ಬಡಿದಿದೆ ಎಂದು ದಿ ಹಿಂದೂ ವರದಿ ಮಾಡಿದೆ.[ವಿಡಿಯೋ: ಪಂದ್ಯದ ವೇಳೆ ಸ್ಪಿನ್ನರ್ ಓಜಾ ತಲೆಗೆ ಪೆಟ್ಟು]

Ranji Trophy: Cricketer taken to hospital after being hit on the head

ರಣಜಿ ಟೂರ್ನಮೆಂಟ್ ನ ಗ್ರೂಪ್ ಸಿ ಪಂದ್ಯದಲ್ಲಿ ತನ್ಮಯ್ ಅವರು ಕ್ಯಾಚ್ ಹಿಡಿಯಲು ಹೋದಾಗ ಈ ದುರ್ಘಟನೆ ನಡೆದಿದೆ. ಮೈದಾನದಲ್ಲೇ ಕುಸಿದು ಬಿದ್ದ ಅಗರವಾಲ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. [ಪಂದ್ಯದ ವೇಳೆ ಆಸ್ಟ್ರೇಲಿಯಾದ ಕ್ರಿಕೆಟರ್ ತಲೆಗೆ ಪೆಟ್ಟು]

ಆಸ್ಟ್ರೇಲಿಯಾದ ಟೆಸ್ಟ್ ಆರಂಭಿಕ ಆಟಗಾರ ಫಿಲ್ ಹ್ಯೂಸ್ ಅವರು ತಲೆಗೆ ಚೆಂಡು ಬಡಿದು ನವೆಂಬರ್ 27, 2014 ಮೃತಪಟ್ಟ ಘಟನೆ ಕ್ರಿಕೆಟ್ ಪ್ರೇಮಿಗಳು ಮರೆಯುವಂತಿಲ್ಲ. ಆದರೆ, ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದ್ದರೂ ಈ ರೀತಿ ಘಟನೆಗಳು ಮರುಕಳಿಸುತ್ತಲೇ ಇದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketer Tanmay Agarwal was rushed to the hospital after being hit by a ball during a Ranji Trophy match between Hyderabad and Chhattisgarh at Sardar Vallabhai Patel Stadium, here on Wednesday (November 23).
Please Wait while comments are loading...