ಮೈಸೂರಿನಲ್ಲಿ ಆಸ್ಟ್ರೇಲಿಯಾದ ಅಂಪೈರ್ ಅಸ್ವಸ್ಥ

Posted By:
Subscribe to Oneindia Kannada

ಮೈಸೂರು, ನವೆಂಬರ್ 15: ಮೈಸೂರಿನಲ್ಲಿ ನಡೆದಿರುವ ಮುಂಬೈ ಹಾಗೂ ಉತ್ತರ ಪ್ರದೇಶ ರಣಜಿ ಪಂದ್ಯದ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾದ ಅಂಪೈರ್ ಸ್ಯಾಮ್ ನೊಗಾಸ್ಕಿ ಅವರು ಅಸ್ವಸ್ಥರಾಗಿದ್ದಾರೆ. ಹೊಟ್ಟೆನೋವು, ಆಮಶಂಕೆಯಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಆಹಾರದಲ್ಲಿ ವ್ಯತ್ಯಯವಾಗಿ ನಿತ್ರಾಣರಾಗಿದ್ದ ಆಸ್ಟ್ರೇಲಿಯಾದ ಅಂಪೈರ್‌ ಸ್ಯಾಮ್ ನೊಗಾಸ್ಕಿ ಅವರನ್ನು ಸೋಮವಾರ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ರಣ
ಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಹೇಳಿದೆ.

Ranji Trophy: Australian umpire hospitalised due to dehydration in Mysuru

ಎರಡನೇ ದಿನದಾಟದಲ್ಲಿ ಸ್ಯಾಮ್ ಅವರಿಗೆ ವಾಂತಿ ಹಾಗೂ ಭೇದಿ ಹೆಚ್ಚಾಗಿ, ಕುಸಿದು ಬಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಈಗ ತುಸು ಚೇತರಿಕೆ ಕಂಡುಬಂದಿದೆ. ಈಗ ಹೋಟೆಲ್ ನಲ್ಲಿ ವಿಶ್ರಾಂತಿ ಪೆಯುತ್ತಿದ್ದಾರೆ ಎಂದು ಕೆಎಸ್‌ಸಿಎ ತಿಳಿಸಿದ್ದಾರೆ.

ಸ್ಯಾಮ್ ಬದಲಿಗೆ ಸೋಮವಾರ ಸ್ಥಳೀಯ ಅಂಪೈರ್‌ ಡಿ. ವಿಜೇತ್‌ ಕಾರ್ಯನಿರ್ವಹಿಸಿದರು. ಸ್ಯಾಮ್ ಅನುಪಸ್ಥಿತಿಯಲ್ಲಿ ಮತ್ತೊಬ್ಬ ಅಂಪೈರ್ ವೀರೇಂದ್ರ ಶರ್ಮ ಅವರು ಎರಡು ಬದಿಯಲ್ಲಿ ಕಾರ್ಯ ನಿರ್ವಹಿಸಿದರು. ಲೆಗ್ ಅಂಪೈರ್ ಆಗಿ ನಂತರ ಸ್ಥಳೀಯ ಅಂಪೈರ್ ಸೇರಿಕೊಂಡಿದ್ದಾರೆ ಎಂದು ಮೈಸೂರು ವಲಯದ ಕೆಎಸ್ ಸಿಎ ಅಧಿಕಾರಿ ಬಾಲಚಂದ್ರ ಅವರು ಪಿಟಿಐಗೆ ತಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australian umpire Sam Nogajski today (November 14) discontinued officiating in a Ranji Tropy match between Uttar Pradesh and Mumbai, as he was hospitalised for dehydration with his Indian counterpart Virender Sharma doing duty from both ends.
Please Wait while comments are loading...