ಮುಂಬೈ ವಿರುದ್ಧದ QF ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 03: ಈ ಸಾಲಿನ ರಣಜಿ ಟ್ರೋಫಿ ಟೂರ್ನಮೆಂಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿ ಅಜೇಯವಾಗಿ ನಾಕೌಟ್ ಹಂತವನ್ನು ಕರ್ನಾಟಕ ತಲುಪಿದೆ.

26 ವರ್ಷ ವಯಸ್ಸಿನ ಮಯಾಂಕ್ ರಿಂದ 27 ದಿನಗಳಲ್ಲಿ 1000 ಪ್ಲಸ್ ರನ್

ಡಿಸೆಂಬರ್ 07 ರಿಂದ ನಾಗ್ಪುರದಲ್ಲಿ ಮುಂಬೈ ತಂಡವನ್ನು ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಎದುರಿಸಲಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

Ranji Trophy 2017 QF: Karnataka squad for Mumbai

ಟೀಂ ಇಂಡಿಯಾದಲ್ಲಿರುವ ಕರ್ನಾಟಕದ ಕೆಎಲ್ ರಾಹುಲ್ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದರೆ ಕರ್ನಾಟಕ ಪರ ರಣಜಿಯನ್ನಾದರೂ ಆಡಬಹುದಾಗಿತ್ತು.

ಸುಮ್ಮನೆ ಬೆಂಚ್ ನಲ್ಲಿ ಕೂರುವಂತೆ ಬಿಸಿಸಿಐ ಹಾಗೂ ಟೀಂ ಮ್ಯಾನೇಜ್ಮೆಂಟ್ ಮಾಡಿದೆ. ಇನ್ನು ಏಕದಿನ ತಂಡಕ್ಕೆ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್ ಹಾಗೂ ಗಾಯಗೊಂಡಿರುವ ಶಾರ್ದೂಲ್ ಠಾಕೂರ್ ಅವರು ಮುಂಬೈ ತಂಡದಲ್ಲಿಲ್ಲ.

ಕರ್ನಾಟಕ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಹಾಗೂ ಎರಡು ಡ್ರಾ ಸಾಧಿಸಿ, ನಾಕೌಟ್ ಹಂತ ತಲುಪಿದೆ. ಮುಂಬೈ ತಂಡ ಎರಡು ಗೆಲುವು, ನಾಲ್ಕು ಡ್ರಾ ಗಳಿಸಿ 21 ಅಂಕಗಳೊಂದಿಗೆ ಕ್ವಾರ್ಟರ್ ಫೈನಲ್ ಹಂತಕ್ಕೇರಿದೆ.

ಮುಂಬೈ ತಂಡ: ಆದಿತ್ಯಾ ತಾರೆ(ನಾಯಕ), ಸೂರ್ಯ ಕುಮಾರ್ ಯಾದವ್ (ಉಪ ನಾಯಕ), ಧವಳ್ ಕುಲಕರ್ಣಿ, ಸಿದ್ದೇಶ್ ಲಾಡ್, ಜಾಯ್ ಬಿಸ್ತಾ, ಪೃಥ್ವಿ ಶಾ, ಅಖಿಲ್ ಹೆರ್ವಾಡ್ಕರ್, ಸೂಫಿಯಾನ್ ಶೇಖ್, ಆಕಾಶ್ ಪಾರ್ಕರ್, ಕರ್ಷ್ ಕೋಥಾರಿ, ಸಾಗರ್ ತ್ರಿವೇದಿ, ವಿಜಯ್ ಗೋಹಿಲ್, ಶಿವಮ್ ಮಲ್ಹೋತ್ರ, ಶಿವಮ್ ದುಬೆ ಹಾಗೂ ಶುಭಮ್ ರಂಜನೆ.

ಕರ್ನಾಟಕ ತಂಡ: ವಿನಯ್ ಕುಮಾರ್ (ನಾಯಕ), ಕರುಣ್ ನಾಯರ್ (ಉಪ ನಾಯಕ), ಮಯಾಂಕ್ ಅಗರವಾಲ್, ರವಿಕುಮಾರ್ ಸಮರ್ಥ್, ಸಿ.ಎಂ ಗೌತಮ್ (ವಿಕೆಟ್ ಕೀಪರ್), ದೇಗಾ ನಿಶ್ಚಲ್, ಪವನ್ ದೇಶಪಾಂಡೆ, ಕೆ ಅಬ್ಬಾಸ್, ಶ್ರೇಯಸ್ ಗೋಪಾಲ್, ಕೆ ಗೌತಮ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ಶ್ರೀನಾಥ್ ಅರವಿಂದ್, ಸುಚಿತ್ ಜಗದೀಶ್, ರೋನಿತ್ ಮೋರೆ, ಶರತ್ ಎಸ್ ಕೃಷ್ಣಮೂರ್ತಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ranji Trophy 2017: Karnataka squad for the Ranji Trophy Quarter Final game against Mumbai at Nagpur from December 7 to 11
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ