ರಣಜಿ ವೇಳಾಪಟ್ಟಿ ಪ್ರಕಟ, ಬೆಳಗಾವಿಯಲ್ಲೂ ಪಂದ್ಯ

By: ಬೆಳಗಾವಿ
Subscribe to Oneindia Kannada

ಮುಂಬೈ, ಸೆ. 04: ರಣಜಿ ಟ್ರೋಫಿ 2016-17ರ ಸಾಲಿನ ಕ್ರಿಕೆಟ್ ಟೂನಿ೯ಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಈ ಬಾರಿ ಎಲ್ಲಾ ಪಂದ್ಯಗಳನ್ನು ತಟಸ್ಥ ಮೈದಾನಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥ ಸೌರವ್ ಗಂಗೂಲಿ ಅವರ ಸಲಹೆ ಮೇರೆಗೆ ಹಿರಿಯರ, ಕಿರಿಯರ ಹಾಗೂ ಮಹಿಳೆಯರ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಅಕ್ಟೋಬರ್ 6ರಿಂದ ಪಂದ್ಯಗಳು ಆರಂಭಗೊಳ್ಳಲಿದ್ದು, ಛತ್ತೀಸ್ ಗಢ ಈ ಬಾರಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಾಲಿಡುತ್ತಿದೆ. ಎ, ಬಿ ಹಾಗೂ ಸಿ ಗುಂಪುಗಳಿದ್ದು ಒಟ್ಟು 28 ತಂಡಗಳಿವೆ. ಆರಂಭಿಕ ಪಂದ್ಯದಲ್ಲಿ ರಾಂಚಿಯಲ್ಲಿ ತ್ರಿಪುರ ವಿರುದ್ಧ ಛತ್ತೀಸ್ ಗಢ ಆಡಲಿದೆ.

Ranji Trophy 2016-17: Groups, schedule announced; Matches at neutral venues

ಕರ್ನಾಟಕದಲ್ಲಿ ಪಂದ್ಯಗಳು: ಕರ್ನಾಟಕ ತಂಡ ಸಿ ಗುಂಪಿನಲ್ಲಿದೆ. ಕರ್ನಾಟಕದಲ್ಲಿ ಬೆಳಗಾವಿ ಹೊಸ ತಟಸ್ಥ ಮೈದಾನವಾಗಿ ಆಯ್ಕೆಯಾಗಿದೆ. ಬೆಳಗಾವಿಯಲ್ಲಿ ಎರಡು ಪಂದ್ಯಗಳು, ಮ್ಯೆಸೂರಿನಲ್ಲಿ 2 ಹಾಗೂ ಹುಬ್ಬಳ್ಳಿಯಲ್ಲಿ ಒಂದು ಪಂದ್ಯ ಸೇಿದಂತೆ ಕರ್ನಾಟಕದಲ್ಲಿ 5 ಪ೦ದ್ಯಗಳು ನಡೆಯಲಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಈ ಬಾರಿ ಪಂದ್ಯಗಳು ನಡೆಸಲಾಗುತ್ತಿಲ್ಲ.

ಕರ್ನಾಟಕದಲ್ಲಿ ನಡೆಯಲಿರುವ ಪಂದ್ಯಗಳು:

ನವೆಂಬರ್ 5-8: ಮುಂಬೈ vs ರೈಲ್ವೇಸ್, ಮ್ಯೆಸೂರು,
ನವೆಂಬರ್13-16: ಉತ್ತರ ಪ್ರದೇಶ vs ಮುಂಬೈ, ಬೆಳಗಾವಿ,
ನವೆಂಬರ್ 21-24: ಗುಜರಾತ್‍ vs ಮುಂಬೈ, ಹುಬ್ಬಳ್ಳಿ,
ನವೆಂಬರ್29-ಡಿಸೆಂಬರ್.2: ಗುಜರಾತ್‍ vs ಪಂಜಾಬ್, ಮ್ಯೆಸೂರು,

ಡಿಸೆಂಬರ್7-10: ತಮಿಳುನಾಡು vs ಗುಜರಾತ್, ಬೆಳಗಾವಿ.

ಕ್ವಾರ್ಟರ್ ಫೈನಲ್ : ಡಿಸೆಂಬರ್ 17-21

ಸೆಮಿಫೈನಲ್ : ಡಿಸೆಂಬರ್ 17-21
ಫೈನಲ್ : ಜನವರಿ 7 ರಿಂದ 11

ರಣಜಿ ಟ್ರೋಫಿ 2016-17ರ ಗುಂಪುಗಳು
ಎ ಗುಂಪು: ಮುಂಬೈ, ಬರೋಡಾ, ಪಂಜಾಬ್, ಮಧ್ಯಪ್ರದೇಶ, ಬೆಂಗಾಲ, ಗುಜರಾತ್, ತಮಿಳುನಾಡು, ರೈಲ್ವೇಸ್, ಉತ್ತರಪ್ರದೇಶ.

ಬಿ ಗುಂಪು: ಸೌರಾಷ್ಟ್ರ, ಒಡಿಶಾ, ದೆಹಲಿ, ಮಹಾರಾಷ್ಟ್ರ, ಅಸ್ಸಾಮ್, ವಿದರ್ಭ, ಕರ್ನಾಟಕ, ರಾಜಸ್ತಾನ, ಜಾರ್ಖಂಡ್

ಸಿ ಗುಂಪು: ಹೈದರಾಬಾದ್, ಹರ್ಯಾಣ, ಕೇರಳ, ಹಿಮಾಚಲ ಪ್ರದೇಶ, ತ್ರಿಪುರ, ಸರ್ವೀಸಸ್, ಗೋವಾ, ಜಮ್ಮು ಮತ್ತು ಕಾಶ್ಮೀರ, ಆಂಧ್ರ, ಛ್ತೀಸ್ ಗಢ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
All the matches in the upcoming Ranji Trophy cricket tournament will be played in neutral venues, according to the fixture of the Domestic tournaments announced by the BCCI today (September 2).
Please Wait while comments are loading...