ದ್ರಾವಿಡ್ ಮಾರ್ಗದರ್ಶನದಿಂದ ಸಚಿನ್ ಸಮಕ್ಕೆ ನಿಂತ ಪೃಥ್ವಿ

Posted By:
Subscribe to Oneindia Kannada

ರಾಜ್ ಕೋಟ್, ಜನವರಿ 05: ಮುಂಬೈನ 17 ವರ್ಷ ವಯಸ್ಸಿನ ಆರಂಭಿಕ ಆಟಗಾರ ಪೃಥ್ವಿ ಶಾ ಇಂದು (ಜನವರಿ 05) ರಣಜಿ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿರುವ ಕ್ಲಬ್ಬಿಗೆ ಸೇರಿದ್ದಾರೆ. ಈ ಸಾಧನೆಗೆ ಕೋಚ್ ರಾಹುಲ್ ದ್ರಾವಿಡ್ ಕಾರಣ ಎಂದು ಪೃಥ್ವಿ ಹೇಳಿದ್ದಾರೆ.

ಬಲಗೈ ಬ್ಯಾಟ್ಸ್ ಮನ್ ಶಾ ಅವರು ತಮಿಳುನಾಡು ವಿರುದ್ಧದ ಸೆಮಿಫೈನಲ್ ಪಂದ್ಯದ ಕೊನೆ ದಿನದಂದು ಶತಕ ಬಾರಿಸಿದ್ದಾರೆ. ಈ ರೀತಿ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಮುಂಬೈಕರ್ ಗಳ ಪೈಕಿ ಶಾ 13ನೇ ಆಟಗಾರ ಎನಿಸಿಕೊಂಡಿದ್ದಾರೆ.[ಸಚಿನ್ ದಾಖಲೆ ಮುರಿದ ಮುಂಬೈ ಯುವಕ ಪೃಥ್ವಿ]

99ರನ್ ಇದ್ದಾಗ ವಿಜಯ್ ಶಂಕರ್ ಅವರ ಬೌಲಿಂಗ್ ನಲ್ಲಿ ಜೀವದಾನ ಪಡೆದುಕೊಂಡಿದ್ದ ಶಾ ಅವರು 152 ಎಸೆತಗಳಲ್ಲಿ ನಂತರ ಶತಕ ಪೂರೈಸಿದರು. ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಅಂಡರ್ 19 ತಂಡದಲ್ಲಿ ಆಡಿದ ಅನುಭವ ನನಗೆ ಸಾಕಷ್ಟು ನೆರವಾಯಿತು ಎಂದು ಪೃಥ್ವಿ ಹೇಳಿದ್ದಾರೆ.

ಶಾ ಅವರ 120ರನ್ ನೆರವಿನಿಂದ ಮುಂಬೈ ತಂಡ ಗೆಲುವಿನ ಗುರಿಯನ್ನು ಮುಟ್ಟಿ 251/4 ಸ್ಕೋರ್ ಮಾಡಿ ಫೈನಲಿಗೆ ಅರ್ಹತೆ ಪಡೆದುಕೊಂಡಿದೆ. ಗುಜರಾತ್ ವಿರುದ್ಧ ಮುಂಬೈ ಸೆಣೆಸಲಿದೆ.

ದಾಖಲೆಗಳ ವೀರ

ದಾಖಲೆಗಳ ವೀರ

14 ವರ್ಷ ವಯಸ್ಸಿದ್ದಾಗಲೇ ಶಾ ಅವರ ಪ್ರತಿಭೆ ವಿಶ್ವಕ್ಕೆ ಪರಿಚಯವಾಗಿತ್ತು. ಮುಂಬೈನ ಹ್ಯಾರೀಸ್ ಶೀಲ್ಡ್ ಶಾಲೆ ಟೂರ್ನಿಯಲ್ಲಿ 546ರನ್ ಗಳಿಸಿ ಹೊಸ ವಿಶ್ವದಾಖಲೆ ಬರೆದಿದರು. ಈ ಸಾಧನೆ ಮಾಡಿದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು.

ಬದಲಿ ಆಟಗಾರನಾಗಿ ತಂಡಕ್ಕೆ

ಬದಲಿ ಆಟಗಾರನಾಗಿ ತಂಡಕ್ಕೆ

ಸೆಮಿಫೈನಲ್ ಪಂದ್ಯಕ್ಕೆ ಕೆವಿನ್ ಅಲ್ಮೆಡಾ ಬದಲಿಗೆ ಬಂದ ಪೃಥ್ವಿ ಶಾ ಅವರು ಮೊದಲ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿ ಔಟಾಗಿದ್ದರು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಸರೆಯಾದರು.

ಬಾಬುಭಾಯಿ ಪಟೇಲ್

ಬಾಬುಭಾಯಿ ಪಟೇಲ್

ಬಾಬುಭಾಯಿ ಪಟೇಲ್ ಅವರು ಮುಂಬೈ ನಿಂದ ರಣಜಿ ಟ್ರೋಫಿಯಿಂದ ಚೊಚ್ಚಲ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ಆಟಗಾರರಾಗಿದ್ದಾರೆ. 1935-36ರಲ್ಲಿ ಈ ಸಾಧನೆ ಮಾಡಿದ್ದರು. 1988-89ರಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು.

ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಮೆಂಟ್

ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಮೆಂಟ್

ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ಪೃಥ್ವಿ ಬರೋಬ್ಬರಿ 546 ರನ್ ಚೆಚ್ಚಿದ್ದರು. ಈ ಶಾಲಾ ಟೂರ್ನಿಮೆಂಟ್ ನಲ್ಲಿ ಸಚಿನ್ ಅವರು ತಮ್ಮ ಶಾಲಾ ದಿನಗಳಲ್ಲಿ 326 ರನ್ ಹೊಡೆದು ನಾಟೌಟ್ ಆಗಿದ್ದರು. ವಿನೋದ್ ಕಾಂಬ್ಳಿ ಅವರ ಜತೆ 664 ರನ್ ಗಳ ಜೊತೆಯಾಟ ಪ್ರದರ್ಶಿಸಿದ್ದರು. ಮುಂಬೈನ ಆಟಗಾರ ವಾಸಿಂ ಜಾಫರ್ ಅವರ ಸಂಬಂಧಿ ಅರ್ಮಾನ್ ಜಾಫರ್ ಅವರು ಇದೇ ಟೂರ್ನಿಯಲ್ಲಿ 498 ರನ್ ಚೆಚ್ಚಿ ಹೊಸ ದಾಖಲೆ ಬರೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mumbai's 17-year-old opener Prithvi Shaw today (January 5) hit a century to join an elite list of cricketers that includes batting legend Sachin Tendulkar.
Please Wait while comments are loading...