ರಣಜಿ: ವರ್ಮಾ ಶತಕದ ನಡುವೆಯೂ ಕರ್ನಾಟಕ ಮೇಲುಗೈ

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 28: ಕರ್ನಾಟಕದ ವೇಗದ ಬೌಲರ್ ಶ್ರೀನಾಥ್ ಅರವಿಂದ್ ಅವರು ಐದು ವಿಕೆಟ್ ಕಬಳಿಸಿ ಅಸ್ಸಾಂ ತಂಡ ರನ್ ಗಳಿಕೆಗೆ ಬ್ರೇಕ್ ಹಾಕಿದರು. ಕರ್ನಾಟಕದಿಂದ ಅಸ್ಸಾಂಗೆ ವಲಸೆ ಹೋಗಿರುವ ಪ್ರತಿಭೆ ಅಮಿತ್ ವರ್ಮಾ ಅವರು ಅಸ್ಸಾಂ ಪರ ಭರ್ಜರಿ ಶತಕ ಗಳಿಸಿ ನಾಟೌಟ್ ಆಗಿದ್ದಾರೆ.

ಮೊದಲ ದಿನದ ಅಂತ್ಯಕ್ಕೆ ಅಸ್ಸಾಂ 268/6 ಸ್ಕೋರ್ ಮಾಡಿದೆ. ಎರಡನೇ ದಿನ ಈ ಸಮಯಕ್ಕೆ 106 ಓವರ್ ಗಳಲ್ಲಿ 325/9 ಸ್ಕೋರ್ ಮಾಡಿದೆ. [ಲೈವ್ ಸ್ಕೋರ್ ಬಿಸಿಸಿಐ ತಾಣದಲ್ಲಿ ನೋಡಿ]

Ranji: Karnataka vs Assam Verma, Aravind steal honours

ಅಸ್ಸಾಂ ತಂಡ ಮೊದಲ ದಿನದಂದು ಭೋಜನ ವಿರಾಮದ ವೇಳೆಗೆ 113 ರನ್ ಗಳಿಗೆ 4 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅಮಿತ್ ವರ್ಮಾ ಅವರು ಅದ್ಭುತ ಆಟ ಪ್ರದರ್ಶಿಸಿ, ಕರ್ನಾಟಕದ ಬೌಲರ್ ಗಳನ್ನು ಎದುರಿಸಿದರು.

ಅಮಿತ್- ಕಾರ್ತಿಕ್ ಜೊತೆಯಾಟ: 16 ರ ನ್ ಗಳಿಗೆ ಮೊದಲ 3 ವಿಕೆಟ್ ಗಳನ್ನು ಕಳೆದುಕೊಂಡು ಅಸ್ಸಾಂಗೆ ಅರುಣ್ ಕಾರ್ತಿಕ್ ಹಾಗೂ ಅಮಿತ್ ವರ್ಮಾ ಆಸರೆಯಾದರು.

ಅರುಣ್ ಕಾರ್ತಿಕ್ 35 ರನ್ (4 ಬೌಂಡರಿ, 1 ಸಿಕ್ಸರ್) , ನಂತರ ಸರುಪಮ್ ಪುರಕಾಯಸ್ತಾ 59ರನ್ (7x4,1x6) ಭರ್ಜರಿ ಆಟ ಪ್ರದರ್ಶಿಸಿದರು. ಶುಕ್ರವಾರ ಆಟ ಮುಂದುವರೆಸಿದ ಅಮಿತ್ ವರ್ಮಾ ಅವರು ಅಜೇಯ 166ರನ್ (23X4,3X6),ಕರ್ನಾಟಕ ಪರ ಎಸ್ ಅರವಿಂದ್ 70/5, ಸ್ಟುವರ್ಟ್ ಬಿನ್ನಿ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two seasoned, left-handed Bengaluru-born players -- Amit Verma and Sreenath Aravind -- representing rival teams, stole the honours on day one of a Group B Ranji Trophy match between Assam and Karnataka here.
Please Wait while comments are loading...