ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಶ್ರೀಲಂಕಾದ ರಂಗನಾ ಹೆರಾತ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲಂಬೊ, ಏಪ್ರಿಲ್ 18 : ಶ್ರೀಲಂಕಾ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಅವರು ಏಕದಿನ ಹಾಗೂ ಟ್ಟಿಂಟಿ20 ಮಾದರಿ ಕ್ರಿಕೆಟ್ ಗೆ ಏಪ್ರಿಲ್ 17 ಭಾನುವಾರ ವಿದಾಯ ಹೇಳಿದ್ದಾರೆ.ಇನ್ಮುಂದೆ ಟೆಸ್ಟ್ ನಲ್ಲಿ ಮಾತ್ರ ಮುಂದುವರೆಯುತ್ತಿದ್ದೆ ಎಂದು ಹೇಳಿದ್ದಾರೆ.

38 ವರ್ಷದ ಶ್ರೀಲಂಕಾದ ತಂಡದ ಪ್ರಮುಖ ಸ್ಪಿನ್ ಬೌಲರ್ ಹೆರಾತ್ ತಾವು ಏಕದಿನ ಮತ್ತು ಟಿ20 ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದೇನೆಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ. [ಮುಂಬೈ ತಂಡ ಸೇರಿದ ಮಾಲಿಂಗಗೆ ಶೋಕಾಸ್ ನೋಟಿಸ್!]

Rangana Herath announces retirement from limited overs cricket


ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಸಿಲ್ವಾ ಹೆರಾತ್ ವಿದಾಯದಿಂದ ಶ್ರೀಲಂಕಾ ತಂಡದ ಮೇಲೆ ಪರಿಣಾಮ ಬೀರಲಿದೆ. ಅವರ ನಿರ್ಧಾರವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್.ಎಲ್.ಸಿ) ಸ್ವೀಕರಿಸಿದೆ ಎಂದು ಸಿಲ್ವಾ ತಿಳಿಸಿದ್ದಾರೆ.

2004 ರಲ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟಿದ್ದ ಹೆರಾತ್ ಈವರೆಗೆ 71 ಏಕದಿನ ಪಂದ್ಯಗಳನ್ನಾಡಿ 74 ವಿಕೆಟ್ ಪಡೆದಿದ್ದಾರೆ ಹಾಗೂ 17 ಟಿ20 ಪಂದ್ಯಗಳಲ್ಲಿ 18 ವಿಕೆಟ್ ಗಳನ್ನು ಕಬಳಿಸಿದ್ದಾರೆ.

2014 ರ ವಿಶ್ವ ಟಿ20 ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕೇವಲ 3 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದ ಶ್ರೇಷ್ಠ ಸಾಧನೆ ಆಗಿದೆ ಹಾಗೂ 2012 ವಿಶ್ವ ಟಿ20 ಕಪ್ ನಲ್ಲಿ ಪಾಕಿಸ್ತಾನ ವಿರುದ್ಧದ ಸೆಮಿ ಫೈನಲ್ ನಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In order to focus more on his test career veteran, Sri Lankan spinner Rangana Herath has announced his retirement from limited-overs cricket.
Please Wait while comments are loading...