ದ್ರಾವಿಡ್-ಲಕ್ಷ್ಮಣ್ ದಾಖಲೆ ಮುರಿದ ವಿಜಯ್-ಪೂಜಾರಾ ಜೋಡಿ

Posted By:
Subscribe to Oneindia Kannada

ರಾಜ್ ಕೋಟ್, ನವೆಂಬರ್ 11: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪೇರಿಸಿರುವ ಬೃಹತ್ ಮೊತ್ತಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಚೇತೇಶ್ವರ್ ಪೂಜಾರಾ ಹಾಗೂ ಮುರಳಿ ವಿಜಯ್ ಅವರು ಶತಕ ಗಳಿಸಿದ್ದಲ್ಲದೆ ಉತ್ತಮ ಜೊತೆಯಾಟ ಪ್ರದರ್ಶಿಸಿ ಕಳೆದ ಹತ್ತು ವರ್ಷಗಳಲ್ಲೇ ಶ್ರೇಷ್ಠ ಜೋಡಿ ಎನಿಸಿಕೊಂಡಿದೆ.

ಪಂದ್ಯದ ಮೂರನೇ ದಿನದಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರಂಭಿಕ ಆಟಗಾರ ಗೌತಮ್ ಗಂಭೀರ್ 29ರನ್ ಗಳಿಸಿ ಔಟಾದರೆ, ಮುರಳಿ ವಿಜಯ್ 126 ರನ್ ಹಾಗೂ ಚೇತೇಶ್ವರ್ ಪೂಜಾರ 124 ರನ್ ಗಳಿಸಿ ದಿನದ ಗೌರವ ಕಾಪಾಡಿದರು. 209 ರನ್ ಜೊತೆಯಾಟದಿನದ ಅಂತ್ಯಕ್ಕೆ 108.3 ಓವರ್ ಗಳಲ್ಲಿ 319/4 ಸ್ಕೋರ್ ಮಾಡಿದ್ದು 218 ರನ್ ಗಳಿಂದ ಹಿಂದೆ ಉಳಿದಿದೆ.

ಸೂಪರ್ ಜೋಡಿ: ವಿಜಯ್ ಹಾಗೂ ಪೂಜಾರಾ ಅವರ ಜೋಡಿ 2000 ರನ್ ಕಲೆ ಹಾಕಿದ್ದು, 32 ಇನ್ನಿಂಗ್ಸ್ ಗಳಲ್ಲಿ 65.03 ರನ್ ಸರಾಸರಿಯಂತೆ 2,080 ರನ್ ಗಳಿಸಿದ್ದಾರೆ. ಒಟ್ಟಾರೆ, ಇಲ್ಲಿ ತನಕ 6 ಬಾರಿ 100 ಅಥವಾ ಅದಕ್ಕಿಂತ ಹೆಚ್ಚು ರನ್ ಗಳ ಜೊತೆಯಾಟವನ್ನು ಈ ಜೋಡಿ ಸಾಧಿಸಿದೆ.

ಭಾರತದ ಅತ್ಯಂತ ಯಶಸ್ವಿ ಜೊತೆಯಾಟ

ಭಾರತದ ಅತ್ಯಂತ ಯಶಸ್ವಿ ಜೊತೆಯಾಟ

ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರಾ ಈ ಇಬ್ಬರು ಬಲಗೈ ಬ್ಯಾಟ್ಸ್ ಮನ್ ಗಳು 32 ಇನ್ನಿಂಗ್ಸ್ 2,080 ರನ್ ಕಲೆ ಹಾಕಿದ್ದಾರೆ. ಗರಿಷ್ಠ ಮೊತ್ತ 370 ರನ್ ಗಳು ರನ್ ಸರಾಸರಿ 66.58. ಉತ್ತಮ ರನ್ ಸರಾಸರಿ ಹೊಂದಿರುವ ಈ ಜೋಡಿ ಕಳೆದ ಹತ್ತು ವರ್ಷಗಳಲ್ಲಿ ಕಂಡಿರುವ ಆರು ಜೋಡಿಗಳಲ್ಲೇ ಶ್ರೇಷ್ಠ ಎನಿಸಿಕೊಂಡಿದೆ.

ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ

ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ

ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅವರು ಒಟ್ಟು 25 ಇನ್ನಿಂಗ್ಸ್ ಗಳಲ್ಲಿ 1,579 ರನ್, 365 ರನ್ ಗರಿಷ್ಠ ಜೊತೆಯಾಟ, ರನ್ ಸರಾಸರಿ 63.16.

ಧೋನಿ ಹಾಗೂ ಲಕ್ಷ್ಮಣ್ ಜೊತೆಯಾಟ

ಧೋನಿ ಹಾಗೂ ಲಕ್ಷ್ಮಣ್ ಜೊತೆಯಾಟ

ಎಂಎಸ್ ಧೋನಿ ಹಾಗೂ ವಿವಿಎಸ್ ಲಕ್ಷ್ಮಣ್ ಇಬ್ಬರು ಒಟ್ಟು 25 ಇನ್ನಿಂಗ್ಸ್ ಗಳಲ್ಲಿ 1,214 ರನ್ ಕಲೆ ಹಾಕಿದ್ದು, ಅಜೇಯ 259 ರನ್ ಗರಿಷ್ಠ ಜೊತೆಯಾಟ, ರನ್ ಸರಾಸರಿ 55.18.

ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಜೋಡಿ

ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಜೋಡಿ

ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಜೋಡಿ ಒಟ್ಟು 28 ಇನ್ನಿಂಗ್ಸ್ ಗಳಲ್ಲಿ 1,486 ರನ್ ಗಳಿಸಿದೆ. 268 ರನ್ ಗರಿಷ್ಠ ಜೊತೆಯಾಟ, 55.03 ರನ್ ಸರಾಸರಿಯಂತೆ ರನ್ ಗಳಿಸಿದ್ದಾರೆ.

ಗಂಭೀರ್ -ದ್ರಾವಿಡ್ ಜೊತೆಯಾಟ

ಗಂಭೀರ್ -ದ್ರಾವಿಡ್ ಜೊತೆಯಾಟ

ಗೌತಮ್ ಗಂಭೀರ್ ಹಾಗೂ ರಾಹುಲ್ ದ್ರಾವಿಡ್ ಅವರು ಒಟ್ಟು 39 ಇನ್ನಿಂಗ್ಸ್ ಗಳಲ್ಲಿ 2,065 ರನ್ ಗಳಿಸಿದೆ. 314 ರನ್ ಗರಿಷ್ಠ ಜೊತೆಯಾಟ, 54.34 ರನ್ ಸರಾಸರಿಯಂತೆ ರನ್ ಗಳಿಸಿದ್ದಾರೆ.

ಗೌತಮ್ ಹಾಗೂ ಸೆಹ್ವಾಗ್ ಜೋಡಿ

ಗೌತಮ್ ಹಾಗೂ ಸೆಹ್ವಾಗ್ ಜೋಡಿ

ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ರನ್ ಗಳಿಕೆ ಮಾಡಿರುವ ಜೋಡಿಯಾಗಿದ್ದಾರೆ. ಒಟ್ಟು 68 ಇನ್ನಿಂಗ್ಸ್ ಗಳಲ್ಲಿ 3,410 ರನ್ ಗಳಿಸಿದ್ದಾರೆ. 233 ರನ್ ಗರಿಷ್ಠ ಜೊತೆಯಾಟ, 51.66 ರನ್ ಸರಾಸರಿಯಂತೆ ರನ್ ಗಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English:
English summary
Murali Vijay and Cheteshwar Pujara on Friday (Nov 11) became the most successful Indian batting pair in Tests in the last 10 years.
Please Wait while comments are loading...