ರಾಜ್ ಕೋಟ್ ಟೆಸ್ಟ್: ಟೀಂ ಇಂಡಿಯಾ ಕಳಪೆ ಫೀಲ್ಡಿಂಗಿಗೆ ಛೀಮಾರಿ

Posted By:
Subscribe to Oneindia Kannada

ರಾಜ್ ಕೋಟ್, ನವೆಂಬರ್ 10: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡಿನ ಬ್ಯಾಟ್ಸ್ ಮನ್ ಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಗೆ ಭಾರಿ ಹೊಡೆತ ನೀಡಿದೆ. ಈ ನಡುವೆ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿರುವ ಟೀಂ ಇಂಡಿಯಾಕ್ಕೆ ಟ್ವಿಟ್ಟರ್ ನಲ್ಲಿ ಛೀಮಾರಿ ಹಾಕಲಾಗಿದೆ.

ಪಂದ್ಯದ ಸ್ಕೋರ್ ಕಾರ್ಡ್

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಿಂದಲೇ ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಆರಂಭವಾಗಿದ್ದು, ಎರಡನೇ ದಿನವೂ ಮುಂದುವರೆದಿದೆ. ಇಂಗ್ಲೆಂಡಿನ ಮೂರು ಬ್ಯಾಟ್ಸ್ ಮನ್ ಗಳು ಶತಕ ಸಿಡಿಸಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪ್ರಮುಖ ಫೀಲ್ಡರ್ ಗಳೇ ಕ್ಯಾಚ್ ಗಳನ್ನು ಕೈಚೆಲ್ಲಿದ್ದರಿಂದ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಬೆನ್ ಸ್ಟೋಕ್ಸ್ ಅವರು ನೀಡಿದ ಕ್ಯಾಚನ್ನು ಎರಡು ಬಾರಿ ಕೈಚೆಲ್ಲಿದರು. ಇದರ ಪೂರ್ಣ ಲಾಭ ಪಡೆದ ಎಡಗೈ ಬ್ಯಾಟ್ಸ್ ಮನ್ ಸ್ಟೋಕ್ಸ್ ಅವರು ಶತಕ ಬಾರಿಸಿದರು. ಇದಲ್ಲದೆ ರನ್ ಔಟ್, ಸ್ಟಂಪಿಂಗ್ ಕೂಡಾ ಮಿಸ್ ಆಯಿತು.

ಪಂದ್ಯದ ಮೊದಲ ದಿನದಂದು ನಾಯಕ ಅಲೆಸ್ಟೈರ್ ಕುಕ್ ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಆರಂಭಿಕ ಆಟಗಾರ ಹಸೀಬ್ ಹಮೀದ್ ಅವರಿಬ್ಬರಿಗೂ ಡ್ರಾಪ್ ಕ್ಯಾಚ್ ಲಾಭ ಸಿಕ್ಕಿತು.

ಕ್ಯಾಚ್ ಬಿಟ್ಟ ಅಜಿಂಕ್ಯ ರಹಾನೆ

ಕ್ಯಾಚ್ ಬಿಟ್ಟ ಅಜಿಂಕ್ಯ ರಹಾನೆ

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡಿನ ಬ್ಯಾಟ್ಸ್ ಮನ್ ಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಗೆ ಭಾರಿ ಹೊಡೆತ ನೀಡಿದೆ. ಈ ನಡುವೆ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿರುವ ಟೀಂ ಇಂಡಿಯಾಕ್ಕೆ ಟ್ವಿಟ್ಟರ್ ನಲ್ಲಿ ಛೀಮಾರಿ ಹಾಕಲಾಗಿದೆ. ಚಿತ್ರದಲ್ಲಿ ಕ್ಯಾಚು ಬಿಟ್ಟ ಅಜಿಂಕ್ಯ ರಹಾನೆ

500 ಇಲ್ಲಿ ನಡೆಯುವುದಿಲ್ಲ, ಬ್ಯಾನ್

500 ಇಲ್ಲಿ ನಡೆಯುವುದಿಲ್ಲ, ಬ್ಯಾನ್ ಆಗಿದೆ. ಈ ಬಗ್ಗೆ ಕ್ರಿಕೆಟರ್ಸ್ ಗಳಿಗೆ ಸ್ವಲ್ಪ ತಿಳಿ ಹೇಳಿ, ಸುಮ್ಮನೆ ಜಾಸ್ತಿ ರನ್ ಗಳಿಸಿದರೆ ವೇಸ್ಟ್ ಎಂದು ಟ್ವೀಟ್.

ಬ್ಯಾಂಕ್ ಗಳಿಗೆ ಹೋಗಲು ಅವಕಾಶ ವಿದೆಯೆ?

ಬುಧವಾರದ ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ ಎಂದು ಕ್ರಿಕೆಟರ್ಸ್ ಗೆ ಹೇಳಿ. 500, 1000 ರೂಪಾಯಿ ಬ್ಯಾನ್ ಆಗಿರುವುದರಿಂದ ನೋಟು ಬದಲಾಯಿಸಿಕೊಳ್ಳಲು ಯತ್ನಿಸಬೇಡಿ

ಡೊನಾಲ್ಡ್ ಟ್ರಂಪ್ ಸುದ್ದಿಗೂ ಮ್ಯಾಚಿಗೂ ಲಿಂಕ್

ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೂ ಲಿಂಕ್ ಮಾಡಿದ ಟ್ವೀಟ್ ಲೋಕ.

ಅಬ್ಬಾ ಎಷ್ಟು ಕ್ಯಾಚ್ ಬಿಡುತ್ತೀರಿ, ನಂಬಲ ಅಸಾಧ್ಯ!

ಅಬ್ಬಾ ಎಷ್ಟು ಕ್ಯಾಚ್ ಬಿಡುತ್ತೀರಿ, ನಂಬಲ ಅಸಾಧ್ಯ!, ಟೀಂ ಇಂಡಿಯಾದಿಂದ ಇಂಥ ಕಳಪೆ ಫೀಲ್ಡಿಂಗ್ ನಿರೀಕ್ಷಿಸಿರಲಿಲ್ಲ.

ಬೌಲಿಂಗ್ ಗೂ ಫೀಲ್ಡಿಂಗ್ ಗೂ ತಾಳಮೇಳವಿಲ್ಲ

ಬೌಲಿಂಗ್ ಗೂ ಫೀಲ್ಡಿಂಗ್ ಗೂ ತಾಳಮೇಳವಿಲ್ಲ. ವೇಗಿ ಉಮೇಶ್ ಯಾದವ್ ಬೌಲಿಂಗ್ ಅಂಕಿ ಅಂಶ ನೋಡಿ ಬೇಕಾದರೆ ಎಂದು ಟ್ವೀಟ್ ಮಾಡಿದ ಕಾಮೆಂಟೆಟರ್ ಹರ್ಷ ಭೋಗ್ಲೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian fielders' poor fielding on Day 2 helped England batsmen frustrate bowlers as they went on piling runs in the first Test at the Saurashtra Cricket Association Stadium.
Please Wait while comments are loading...