ಸೆಹ್ವಾಗ್ ರಿಂದ ಮೆಚ್ಚುಗೆ ಪಡೆದ ಜೋ ರೂಟ್

Posted By:
Subscribe to Oneindia Kannada

ರಾಜ್ ಕೋಟ್, ನವೆಂಬರ್ 09: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಶತಕ ದಾಖಲಾಗಿದೆ. ಇಂಗ್ಲೆಂಡಿನ ಪ್ರತಿಭಾವಂತ ಬ್ಯಾಟ್ಸ್ ಮನ್ ಜೋ ರೂಟ್ ಶತಕ ಬಾರಿಸಿ, ಇಂಗ್ಲೆಂಡ್ ಗೆ ಬಲ ತಂದಿದ್ದಾರೆ. ಜೋ ರೂಟ್ ಅವರ ಆಟಕ್ಕೆ ಮನಸೋತ 'ಕಿಂಗ್ ಆಫ್ ಟ್ರಾಲ್ಸ್' ಸೆಹ್ವಾಗ್ ಅವರು ಟ್ವೀಟ್ ಮಾಡಿ ರೂಟ್ ಅವರನ್ನು ಹೊಗಳಿದ್ದಾರೆ.

ಗ್ಯಾಲರಿ: ಭಾರತ ಹಾಗೂ ಇಂಗ್ಲೆಂಡ್ ಸರಣಿ | ಪಂದ್ಯದ ಸ್ಕೋರ್ ಕಾರ್ಡ್

25 ವರ್ಷ ವಯಸ್ಸಿನ ಯಾರ್ಕ್ ಶೈರ್ ಮೂಲದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಜೋ ರೂಟ್ ಅವರು 180 ಎಸೆತಗಳಲ್ಲಿ 124ರನ್ ಗಳಿಸಿ, ಇಂಗ್ಲೆಂಡಿಗೆ ಮೊದಲ ದಿನದ ಗೌರವ ಸಿಗುವಂತೆ ಮಾಡಿದರು.ದಿನದ ಅಂತ್ಯಕ್ಕೆ ಮೋಯಿನ್ ಅಲಿ ಅಜೇಯ 99ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಇಂಗ್ಲೆಂಡ್ 93 ಓವರ್ ಗಳಲ್ಲಿ 331/4 ಸ್ಕೋರ್ ಮಾಡಿದೆ.[ರೋಹಿತ್ ಶರ್ಮಗೆ 'ತೀವ್ರ' ಗಾಯ, ಏಳೆಂಟು ತಿಂಗಳು ರೆಸ್ಟ್!]

Rajkot Test: Commentator Virender Sehwag trolls Joe Root with a hilarious one liner

ನಜಫ್ ಘಡ್ ನ ನವಾಬ ಸೆಹ್ವಾಗ್ ಅವರು ತಮ್ಮ ಫನ್ನಿ ಟ್ವೀಟ್ ಮೂಲಕ ಅನೇಕರ ಕಾಲೆಳುವುದು ಎಲ್ಲರಿಗೂ ತಿಳಿದಿದೆ. ಈಗ ರೂಟ್ ಅವರನ್ನು ಹೊಗಳಿ "Is Root ki sabi liney vyast hain." ಎಂದು ಕಾಮೆಂಟ್ರಿ ವೇಳೆ ಹೇಳಿದ್ದಾರೆ.[ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ, ಕರುಣ್ ಇನ್!]

ರೂಟ್ ಅವರು ತಮ್ಮ ವೃತ್ತಿ ಬದುಕಿನ 11 ಶತಕವನ್ನು ಬಾರಿಸಿದರೆ, ಭಾರತ ಮೂಲದ ಹಸೀಬ್ ಹಮೀದ್ ಅವರು ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯವಾಡಿದರು. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನವೆಂಬರ್ 9ರಿಂದ ಆರಂಭವಾಗಿದ್ದು, ಇಂಗ್ಲೆಂಡ್ ಮೊದಲ ದಿನದ ಗೌರವ ಸಂಪಾದಿಸಿದೆ.[ಕೊಹ್ಲಿಗೆ ಈಗ ಅಜರುದ್ದೀನ್ ದಾಖಲೆ ಮುರಿಯುವ ತವಕ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's master of trolls, Virender Sehwag, praised England's star batsman Joe Root but in his unique style, on Wednesday (Nov 9), on first day of the opening Test here.
Please Wait while comments are loading...