ವಿಂಡೀಸ್ ವಿರುದ್ಧ ಸರಣಿ ಗೆದ್ದರೂ, ಪಾಕ್ ವಿರುದ್ಧ ಸೋತ ಭಾರತ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತನ್ನ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದೆ. ವಿಂಡೀಸ್ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದರೂ, ಅಂಕ ಪಟ್ಟಿಯಲ್ಲಿ ಮೇಲುಗೈ ಸಾಧಿಸಿದ ಪಾಕಿಸ್ತಾನ ನಂ.1 ಸ್ಥಾನಕ್ಕೇರಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಮಳೆಗೆ ಆಹುತಿಯಾಗಿ ಡ್ರಾನಲ್ಲಿ ಅಂತ್ಯಗೊಂಡಿದೆ. ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳಲು ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿತ್ತು.[ಅಶ್ವಿನ್ ನಂ.1 ಆಲ್ ರೌಂಡರ್]

Rain wins as India lose No. 1 Test rank to Pakistan

ಆಗಸ್ಟ್ 17 ರಂದು ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 0-3 ಅಂತರದಿಂದ ಸರಣಿ ಗೆದ್ದಿದ್ದರಿಂದ ಭಾರತ ಅಗ್ರಸ್ಥಾನಕ್ಕೇರಲು ಸಾಧ್ಯವಾಗಿತ್ತು. ಇನ್ನೊಂದೆಡೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-2 ಸಮ ಮಾಡಿಕೊಂಡಿರುವ ಪಾಕಿಸ್ತಾನ ತಂಡ 111 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. 2003ರಿಂದ ಇದೇ ಮೊದಲ ಬಾರಿಗೆ ವಿಶ್ವದ ನಂ.1 ತಂಡ ಎನಿಸಿಕೊಂಡಿದೆ.

ಈ ಹಿಂದೆ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 0-2 ಅಂತರದಲ್ಲಿ ಸರಣಿಯಲ್ಲಿ ಗೆಲುವು ದಾಖಲಿಸಿದಾಗ ಭಾರತ ನಂ.1 ಸ್ಥಾನಕ್ಕೇರಿತ್ತು. ಶ್ರೀಲಂಕಾ ಕೃಪೆಯಿಂದ ಮತ್ತೊಮ್ಮೆ ಟೀಂ ಇಂಡಿಯಾ ನಂ 1 ಸ್ಥಾನಕ್ಕೇರಿರುವುದು ಭಾರತೀಯ ಅಭಿಮಾನಿಗಳಿಗೆ ಸಂತಸ ತಂದಿತ್ತು. ಆದರೆ, ಪಾಕಿಸ್ತಾನಕ್ಕೆ ಮಳೆ ವರವಾಗಿ ಪರಿಣಮಿ, ಪಾಕಿಸ್ತಾನ ನಂ.1 ಸ್ಥಾನಕ್ಕೇರಿದೆ.

ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿ(ಆಗಸ್ಟ್ 22) ಹೀಗಿದೆ:
1. ಪಾಕಿಸ್ತಾನ (111 ಅಂಕಗಳು)
2. ಭಾರತ (110)
3. ಆಸ್ಟ್ರೇಲಿಯಾ (108)
4. ಇಂಗ್ಲೆಂಡ್ (108)
5. ನ್ಯೂಜಿಲೆಂಡ್ (99)
6. ಶ್ರೀಲಂಕಾ (95)
7. ದಕ್ಷಿಣ ಆಫ್ರಿಕಾ (92)
8. ವೆಸ್ಟ್ ಇಂಡೀಸ್ (67)
9. ಬಾಂಗ್ಲಾದೇಶ (57)
10. ಜಿಂಬಾಬ್ವೆ (8)
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India have lost their number one Test rank to Pakistan today (August 22) after the 4th and final Test against West Indies ended in a draw due to rain.
Please Wait while comments are loading...