ಶತಕ ವಂಚಿತ ರಾಹುಲ್, ದೆಹಲಿ ವಿರುದ್ಧ ರಾಜ್ಯಕ್ಕೆ 3 ಅಂಕ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 13: ದೆಹಲಿ ಹಾಗೂ ಕರ್ನಾಟಕ ನಡುವಿನ ರಣಜಿ ಪಂದ್ಯ ನಿರೀಕ್ಷೆಯಂತೆ ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದ ಮೇಲೆ ಆರ್‌. ವಿನಯ್‌ ಕುಮಾರ್ ತಂಡಕ್ಕೆ ಮೂರು ಅಂಕಗಳು ಲಭಿಸಿವೆ. ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ 92 ರನ್ ಹಾಗೂ ಅಭಿಮನ್ಯು ಮಿಥುನ್ 5 ವಿಕೆಟ್ ಗಳಿಸಿ ಮಿಂಚಿದರು.

ಮತ್ತೆ ಮಿಂಚಿದ ಮಯಾಂಕ್, ದೆಹಲಿ ವಿರುದ್ಧ ಆಕರ್ಷಕ ಶತಕ

ರಿಷಭ್‌ ಪಂತ್‌ ಪಡೆ ತನ್ನ ಅಂತಿಮ ದಿನದಾಟದಲ್ಲಿ 4 ವಿಕೆಟ್‌ಗೆ 277 ರನ್‌ಗಳಿಂದ ಅಂತಿಮ ದಿನದಾಟ ಮುಂದುವರಿಸಿತು. ಮೊದಲ ಇನಿಂಗ್ಸ್‌ನಲ್ಲಿ 95 ಓವರ್‌ಗಳಲ್ಲಿ 301ರನ್‌ಗಳನ್ನು ಗಳಿಸಿತು. ಅಭಿಮನ್ಯು ಮಿಥುನ್ 70/5 ಪಡೆದರು. ದೆಹಲಿ ಪರ ಗೌತಮ್ ಗಂಭೀರ್ 144ರನ್ ಚೆಚ್ಚಿದರು.

Opener KL Rahul (92) missed out on a century after Abhimanyu Mithun orchestrated Delhi's fall with a five-wicket haul as Karnataka earned three points on the basis of their first innings lead in the Group A Ranji Trophy match, which ended in a draw, here on Sunday (November 12).

ಫಾಲೋ ಆನ್ ನೀಡದ ಕರ್ನಾಟಕ ತನ್ನ ಎರಡನೇ ಇನಿಂಗ್ಸ್‌ನಲ್ಲಿ ರಾಜ್ಯ ತಂಡ 63 ಓವರ್‌ಗಳಲ್ಲಿ 3 ವಿಕೆಟ್‌ಗೆ 235 ರನ್‌ ಗಳಿಸಿತು. ಈ ಮೂಲಕ ಮುನ್ನಡೆಯನ್ನು 583 ರನ್‌ಗಳಿಗೆ ಹೆಚ್ಚಿಸಿಕೊಂಡಿತು.

2ನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರರಾದ ಆರ್‌.ಸಮರ್ಥ್‌ 47ರನ್(90 ಎಸೆತಗಳು, 6 ಬೌಂಡರಿ) ಮತ್ತು ಲಯ ಕಂಡುಕೊಂಡ ಕೆ.ಎಲ್‌.ರಾಹುಲ್‌ 92 ರನ್ (109 ಎಸೆತಗಳು,9 ಬೌಂಡರಿ, 2ಸಿಕ್ಸರ್ ) ಉತ್ತಮ ಆರಂಭ ನೀಡಿದರು.

ಕರುಣ್ ನಾಯರ್ 33 ಹಾಗೂ ಮನೀಶ್ ಪಾಂಡೆ 34 ರನ್ ಗಳಿಸಿ ಅಜೇಯರಾಗಿ ಉಳಿದಾಗ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಕರ್ನಾಟಕದ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 649ರನ್ ಗಳಿಸಿ ಆಲೌಟ್ ಆಗಿತ್ತು. ಮಯಾಂಕ್ 176, ಸ್ಟುವರ್ಟ್ ಬಿನ್ನಿ 118, ಶ್ರೇಯಸ್ ಗೋಪಾಲ್ 92ರನ್ ಗಳಿಸಿ ತಂಡವು ಬೃಹತ್ ಮೊತ್ತ ಗಳಿಸಲು ನೆರವಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Opener KL Rahul (92) missed out on a century after Abhimanyu Mithun orchestrated Delhi's fall with a five-wicket haul as Karnataka earned three points on the basis of their first innings lead in the Group A Ranji Trophy match, which ended in a draw, here on Sunday (November 12).
Please Wait while comments are loading...