ಬಿಸಿಸಿಐ - ಕುಬೇರನ ಆಸ್ಥಾನಕ್ಕೆ ನೂತನ ಸಾರಥಿ!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 20: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ನೂತನ ಕಾರ್ಯಕಾರಿ ಸಾರಥಿಯೊಬ್ಬರು ಸಿಕ್ಕಿದ್ದಾರೆ. ರಾಹುಲ್ ಜೊಹ್ರಿ ಅವರನ್ನು ಮುಖ್ಯ ಕಾಯನಿರ್ವಹಣಾಧಿಕಾರಿ (ಸಿಇಒ) ಆಗಿ ಬುಧವಾರ (ಏಪ್ರಿಲ್ 20) ನೇಮಕ ಮಾಡಲಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ದಕ್ಷಿಣ ಏಷ್ಯಾದ ಡಿಸ್ಕವರಿ ನೆಟ್ವರ್ಕ್ಸ್ ಏಷ್ಯಾ ಪೆಸಿಫಿಕ್ ನ ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಪ್ರಧಾನ ಮ್ಯಾನೇಜರ್ ಆಗಿದ್ದ ರಾಹುಲ್ ಅವರು ಬಿಸಿಸಿಐ ನೀಡಿರುವ ಹೊಸ ಸುದ್ದೆಯನ್ನು ಜೂನ್ 01, 2016ರಿಂದ ವಹಿಸಿಕೊಳ್ಳಲಿದ್ದಾರೆ. ಬಿಸಿಸಿಐಯ ಕಾರ್ಯದರ್ಶಿಗೆ ರಿಪೋರ್ಟ್ ಮಾಡಬೇಕಾಗುತ್ತದೆ.

Rahul Johri appointed as CEO of BCCI

ಮಾಧ್ಯಮ ಜಗತ್ತಿನಲ್ಲಿ ಸುಮಾರು 20 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ರಾಹುಲ್ ಅವರು ಡಿಸ್ಕವರಿ ನೆಟ್ವರ್ಕ್ ನಲ್ಲೇ 15 ವರ್ಷಗಳ ಕಾಲ ದುಡಿದಿದ್ದಾರೆ. ದಕ್ಷಿಣ ಏಷ್ಯಾ ಭಾಗದ ಮುಖ್ಯಸ್ಥರಾಗಿ 8 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

ಕಳೆದ ಒಂದು ವರ್ಷಗಳಲ್ಲಿ ಬಿಸಿಸಿಐ ಸುಮಾರು ಬದಲಾವಣೆಗಳನ್ನು ತಂದಿದೆ. ಹೊಸ ಯೋಜನೆಗಳ ಅನುಷ್ಠಾನಗೊಳಿಸಲು ಉತ್ತಮ ಸಿಇಒ ಅಗತ್ಯವಿತ್ತು. ಈಗ ರಾಹುಲ್ ಅವರು ಈ ಹುದ್ದೆಯನ್ನು ವಹಿಸಿಕೊಂಡ ಮೇಲೆ ದೇಶದ ವಿವಿಧ ಕ್ರಿಕೆಟ್ ಸಂಸ್ಥೆಗಳಿಗೆ ಹೆಚ್ಚಿನ ಕಾರ್ಯಕ್ಷಮತೆ ಸಾಧಿಸಲು ಸಾಧ್ಯವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Board of Control for Cricket in India (BCCI) today (April 20) announced the appointment of Rahul Johri as the Chief Executive Officer (CEO).
Please Wait while comments are loading...