44ನೇ ವಸಂತಕ್ಕೆ ಕಾಲಿಟ್ಟ ದ್ರಾವಿಡ್ ಗೆ ಶುಭಾಷಯದ ಹೂಮಳೆ

Posted By: Chethan
Subscribe to Oneindia Kannada

ನವದೆಹಲಿ, ಜ. 11: ನಲವತ್ತ ನಾಲ್ಕು ವರ್ಷಕ್ಕೆ ಕಾಲಿಟ್ಟಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಅವರ ಅಪಾರ ಅಭಿಮಾನಿಗಳು ಟ್ವಿಟರ್ ನಲ್ಲಿ ಶುಭಾಷಯಗಳ ಮಳೆಗರೆದಿದ್ದಾರೆ.

ಕ್ರಿಕೆಟನ್ನೇ ಉಸಿರಾಡುವ ಈ ಸರಳ ಜೀವಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ರವೀಂದ್ರ ಜಡೇಜಾ ಮುಂತಾದವರು ಶುಭ ಕೋರಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅವರ ಗುಣ ವಿಶೇಷತೆ, ಪ್ರತಿಭೆಗಳನ್ನು ಉಲ್ಲೇಖಿಸಿ ಅವರಿಗೆ ಶುಭಾಷಯ ಸಲ್ಲಿಸಿದ್ದಾರೆ.

Rahul Dravid turns 44: Cricketers and fans hail 'The Wall' on his birthday

ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಜನಪ್ರಿಯ ಬ್ಯಾಟ್ಸ್ ಮನ್ ಗಳಲ್ಲಿ ದ್ರಾವಿಡ್ ಕೂಡಾ ಒಬ್ಬರು. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಈ ಗುಂಪಿನಲ್ಲಿದ್ದಾರೆ.

1973ರ ಜನವರಿ 11ರಂದು ಜನಿಸಿದ್ದ ರಾಹುಲ್, ಬಾಲ್ಯದಿಂದಲೂ ಕ್ರಿಕೆಟ್ ಅಂದರೆ ಪ್ರಾಣ. ಸತತ ಪರಿಶ್ರಮದಿಂದ ಕ್ರಿಕೆಟ್ ಲೋಕದ ಉಚ್ಛ್ರಾಯ ಸ್ಥಾನಕ್ಕೆ ತಲುಪಿರುವ ಅವರು, ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದಾರೆ.

ಕ್ರಿಕೆಟ್ ವಿಶ್ಲೇಷಕರಿಂದ 'ದ ವಾಲ್', 'ಮಿಸ್ಟರ್ ಡಿಪೆಂಡಬಲ್' ಎಂಬ ಬಿರುದುಗಳನ್ನು ಪಡೆದರೂ, ಸನ್ಮಾನ ಮುಂತಾದ ಕಾರ್ಯಕ್ರಮಗಳಿಂದ ದೂರವೇ ಉಳಿಯುವ ಸರಳ ಜೀವಿ.

1996ರ ಏಪ್ರಿಲ್ ನಲ್ಲಿ ಸಿಂಗಾಪುರದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ರಾಹುಲ್ ಪದಾರ್ಪಣೆ ಮಾಡಿದ್ದರು. ಇದೇ ವರ್ಷ, ಜೂನ್ 20ರಿಂದ 24ರವರೆಗೆ ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ರಂಗಕ್ಕೆ ಕಾಲಿಟ್ಟಿದ್ದರು.

ಟೆಸ್ಟ್ ಕ್ರಿಕೆಟ್ ನಲ್ಲಿ 164 ಪಂದ್ಯಗಳಿಂದ 13288 ರನ್ ಗಳಿಸಿದ್ದಾರೆ. ಇವುಗಳಲ್ಲಿ 36 ಶತಕ, 63 ಅರ್ಧಶತಕ ಸೇರಿವೆ. ಏಕದಿನ ಮಾದರಿಯಲ್ಲಿ 344 ಪಂದ್ಯಗಳಿಂದ 10,889 ರನ್ ದಾಖಲಿಸಿದ್ದಾರೆ. ಇವುಗಳಲ್ಲಿ 12 ಶತಕ ಹಾಗೂ 83 ಅರ್ಧ ಶತಕ ಸೇರಿವೆ. ಇನ್ನು, ಒಂದೇ ಒಂದು ಏಕದಿನ ಪಂದ್ಯವನ್ನಾಡಿರುವ ಅವರು ಅಲ್ಲಿ 31 ರನ್ ಪೇರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As former India captain Rahul Dravid turned 44, cricketers and fans wished 'The Wall' on his birthday on Wednesday (January 11).
Please Wait while comments are loading...