ಮುಂದಿನ 2 ವರ್ಷ ವರೆಗೆ ಭಾರತ 'ಎ' ತಂಡದ ಕೋಚ್ ಆಗಿ ದ್ರಾವಿಡ್

Posted By:
Subscribe to Oneindia Kannada

ನವದೆಹಲಿ, ಜೂನ್ 20 : ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಮುಂದಿನ ಎರಡು ವರ್ಷಗಳ ವರೆಗೆ ಭಾರತ 'ಎ' ಹಾಗೂ ಅಂಡರ್-19 ತಂಡದ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಮುಂದಿನ ಎರಡು ವರ್ಷಗಳ ವರೆಗೆ ಟೀಂ ಇಂಡಿಯಾ 'ಎ' ಹಾಗೂ ಅಂಡರ್-19 ತಂಡದ ಕೋಚ್ ಆಗಿ ಕ್ರಿಕೆಟ್ ದಿಗ್ಗಜ ದ್ರಾವಿಡ್ ಅವರನ್ನೇ ಮುಂದುವರೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಂಡೀಸ್ ಪ್ರವಾಸಕ್ಕೆ ಹೊರಟ ಟೀಂ ಇಂಡಿಯಾ, ಕುಂಬ್ಳೆ ಮಿಸ್ಸಿಂಗ್?

rahul


ಮುಂದಿನ ಎರಡು ವರ್ಷ ವರೆಗೆ ಕೋಚ್ ಆಗಿ ದ್ರಾವಿಡ್ ಅವರು ಮುಂದುವರೆಯಲು ಸಿಎಸಿಯ ಸದಸ್ಯರಾ ಮಾಜಿ ಕ್ರಿಕೆರ್ಸ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಜುಲೈನಲ್ಲಿ ಭಾರತ ಅಂಡರ್-19 ತಂಡ ಇಂಗ್ಲೆಂಡ್ ತಂಡದೊಂದಿಗೆ ಎರಡು ನಾಲ್ಕು ದಿನದ ಪಂದ್ಯ ಹಾಗೂ ಐದು ಏಕದಿನ ಪಂದ್ಯಗಳನ್ನು ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former captain and batting legend Rahul Dravid will continue as India A and Under-19 team coach for another two years.
Please Wait while comments are loading...